ಸುದೀಪ್- ಜಾಕ್ವೆಲಿನ್ ಫರ್ನಾಂಡೀಸ್ 
ಸಿನಿಮಾ ಸುದ್ದಿ

'ವಿಕ್ರಾಂತ್‌ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಮಹತ್ವಾಕಾಂಕ್ಷೆಯ ಸಿನಿಮಾ'

ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಸಿನಿಮಾ ಹೊಸ ಬೆಳವಣಿಗೆಗಳೊಂದಿಗೆ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಪ್ಯಾನ್-ಇಂಡಿಯನ್ ಚಿತ್ರಕ್ಕೆ ಜಾಕ್ವೆಲಿನ್ ಫರ್ನಾಂಡೀಸ್ ಸೇರ್ಪಡೆಯೊಂದಿಗೆ ನಿರೀಕ್ಷೆಗಳು ಗಗನಕ್ಕೇರಿವೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಕಿಚ್ಚ ಸುದೀಪ್ ಅಭಿನಯದ ವಿಕ್ರಂತ್ ರೋಣ ಸಿನಿಮಾ ಹೊಸ ಬೆಳವಣಿಗೆಗಳೊಂದಿಗೆ ಅಭಿಮಾನಿಗಳ ಉತ್ಸಾಹವನ್ನು ಹೆಚ್ಚಿಸುತ್ತದೆ. ಈ ಪ್ಯಾನ್-ಇಂಡಿಯನ್ ಚಿತ್ರಕ್ಕೆ ಜಾಕ್ವೆಲಿನ್ ಫರ್ನಾಂಡೀಸ್ ಸೇರ್ಪಡೆಯೊಂದಿಗೆ ನಿರೀಕ್ಷೆಗಳು ಗಗನಕ್ಕೇರಿವೆ.

ಜಾಕ್ವೆಲಿನ್ ಅತ್ಯಂತ ವೃತ್ತಿಪರ ನಾಯಕಿ , ಬೆಳಗ್ಗೆ 9 ಗಂಟೆಗೆ ಸೆಟ್ ಗೆ ಆಗಮಿಸುವ ಜಾಕ್ವೆಲಿನ್ 9.30ರವರೆಗೂ ಯಾವುದೇ ಗಡಿಬಿಡಿಯಿಲ್ಲದೇ ಸಮಯ ಕಳೆಯುತ್ತಾರೆ ಎಂದು ನಿರ್ಮಾಪಕ ಮಂಜುನಾಥ ಗೌಡ ವಿವರಿಸಿದ್ದಾರೆ.

ಆಕೆಯ ಡೈಲಾಗ್ ಡೆರಿವರಿ ಮತ್ತು ಆಕೆಯ ನಟನೆ ಬಗ್ಗೆ ನಟ ಸುದೀಪ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರು ದಿನಗಳ ಶೂಟಿಂಗ್ ಗಾಗಿ ಕಲಾ ನಿರ್ದೇಶಕ ಶಿವಕುಮಾರ್ 5 ಕೋಟಿ ರು. ವೆಚ್ಚದಲ್ಲಿ ಅದ್ಧೂರಿ ಸೆಟ್ ನಿರ್ಮಿಸಿದ್ದಾರೆ.

300 ಡ್ಯಾನ್ಸರ್ ಗಳು ಸುದೀಪ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ನಟಿಸಿದ್ದಾರೆ. ಕೆಜಿಎಫ್ 2ರ ನಂತರ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಅದ್ಧೂರಿ ಸಿನಿಮಾ ಇದಾಗಿದೆ ಎಂದು ಮಂಜುನಾಥ ಗೌಡ ತಿಳಿಸಿದ್ದಾರೆ.

'ವಿಕ್ರಾಂತ್‌ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಪ್ರಯತ್ನ. ನಾನು ಈ ಸಿನಿಮಾದ ಭಾಗವಾಗಿದ್ದು ಖುಷಿಯ ವಿಚಾರ. ನನ್ನ ದೃಶ್ಯಗಳು ಮತ್ತು ಹಾಡು ಅದ್ಭುತವಾಗಿ ಮೂಡಿಬಂದಿವೆ' ಎಂದು ಸಂತಸ ವ್ಯಕ್ತಪಡಿಸಿದರು ಜಾಕ್ವೆಲಿನ್‌ ಫರ್ನಾಂಡಿಸ್‌.

ವಿಕ್ರಾಂತ್ ರೋಣ ಆ್ಯಕ್ಷನ್ ಸಿನಿಮಾವಾಗಿದ್ದು, ನನಗೆ ಅಪಾರ ಸಂತೋಷವಾಗಿದೆ. ಸಿನಿಮಾ ರಿಲೀಸ್ ಮಾಡಲು ನಾವು ಸಾಕಷ್ಟು ಉತ್ಸುಕರಾಗಿದ್ದೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದ್ದಾರೆ.

ಇನ್ನೂ ಜಾಕ್ವೆಲಿನ್ ಜೊತೆಗಿನ ಕೆಲಸದ ಅನುಭವ ಹಂಚಿಕೊಂಡಿರುವ ಅನೂಪ್, ಆಕೆ ಸೆಟ್ ಗೆ ಬರುವ ಮೊದಲು ತಮ್ಮ ಶೂಟಿಂಗ್ ಬಗ್ಗೆ ಹೋಮ್ ವರ್ಕ್ ಮಾಡಿಕೊಳ್ಳುತ್ತಿದ್ದರು. ತಮ್ಮ ಪಾತ್ರದ ಬಗ್ಗೆ ಫೋನ್ ನಲ್ಲಿ ಮೊದಲೇ ಕೇಳಿ ತಿಳಿದುಕೊಳ್ಳುತ್ತಿದ್ದರು. ದಕ್ಷಿಣ ಭಾರತದ ಯಾವುದೇ ಭಾಷೆ ತಿಳಿಯದಿದ್ದರೂ ತಮ್ಮ ಪಾತ್ರಕ್ಕೆ ಡಬ್ ಮಾಡಲು ಪ್ರಯತ್ನಿಸಿದ್ದು ವಿಶೇಷವಾಗಿತ್ತು.

ಜಾಕ್ವೆಲಿನ್ ಸಿಂಹಳೀಯ ಮೂಲದವರಾಗಿದ್ದರು. ಕನ್ನಡ ಮತ್ತು ಸಿಂಹಳ ಲಿಪಿಯ ಸ್ವಾಮ್ಯತೆಯನ್ನು ಅವರು ಗಮನಿಸಿದ್ದಾರೆ. ಜಾಕ್ವೆಲಿನ್ ಗಾಗಿ ಅನೂಪ್ ಪತ್ನಿ ನೀತಾ ಶೆಟ್ಟಿ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ದಕ್ಷಿಣ ಭಾರತದ ಭಾಷೆಗಳಲ್ಲಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿದ್ದು ಉತ್ತಮವಾಗಿ ಬರಲು ಬಯಸಿದ್ದಾರೆ. ನೀತಾ ಕೆಲಸದಿಂದ ಜಾಕ್ವೆಲಿನ್ ಪ್ರೇರಣೆ ಪಡೆದಿದ್ದಾರೆ. ಸಿನಿಮಾದಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸಿದ್ದಾರೆ ಎಂದು ಅನೂಪ್ ತಿಳಿಸಿದ್ದಾರೆ.

ನಮ್ಮ ಎಡಿಟಿಂಗ್ ಬಗ್ಗೆ ನಟಿ ಆಶ್ಚರ್ಯಚಕಿತರಾದರು. ಸೆಟ್‌ಗಳಲ್ಲಿ ಎಡಿಟ್ ಮಾಡುವುದನ್ನು ನೋಡಲು ಆಕೆ ಆಸಕ್ತಿ ಹೊಂದಿದ್ದರು. ಪ್ರತಿ ಶೂಟಿಂಗ್ ನಂತರ, ಅವರು ನಮ್ಮ ಪ್ರಕ್ರಿಯೆಯ ಬಗ್ಗೆ ಕುತೂಹಲ ಹೊಂದಿದ್ದರು ಎಂದು ನಿರ್ದೇಶಕರು ಹೇಳಿದ್ದಾರೆ.

ವಿಕ್ರಾಂತ್ ರೋಣ ಬಹುಭಾಷಾ ಆಕ್ಷನ್-ಸಾಹಸ ಸಿನಿಮಾವಾಗಿದೆ. ಇದು 55 ದೇಶಗಳಲ್ಲಿ 14 ಭಾಷೆಗಳಲ್ಲಿ 3ಡಿ ಎಫೆಕ್ಟ್ ನಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಕ್ಯಾಮೆರಾ ಕೆಲಸ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!