ಸಿನಿಮಾ ಸುದ್ದಿ

ಹೃದಯಾಘಾತದಿಂದ ತೆಲುಗು ನಿರ್ಮಾಪಕ ಬಿ.ಎ ರಾಜು ವಿಧಿವಶ

Shilpa D

ಹೈದರಾಬಾದ್: ತೆಲುಗು ಚಿತ್ರ ನಿರ್ಮಾಪಕ ಮತ್ತು ಹಿರಿಯ ಪತ್ರಕರ್ತ ಬಿ.ಎ ರಾಜು (62) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.

ಏಕಾಏಕಿ ರಕ್ತದಲ್ಲಿ ಸಕ್ಕರೆ ಪ್ರಮಾಣದಲ್ಲಿ ಏರಿಳಿತ ಉಂಟಾಗಿದೆ. ಅದರೊಂದಿಗೆ ಹೃದಯಾಘಾತವೂ ಸಂಭವಿಸಿದೆ. ಈ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು’ ಎಂದು ಅವರ ಮಗ ಬಿ.ಶಿವಕುಮಾರ್‌ ಅವರು ಟ್ವೀಟ್‌ ಮಾಡಿದ್ದಾರೆ. 

ರಾಜು ಅವರು ಸಿನಿಮಾ ಪತ್ರಕರ್ತನಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಿನಿಮಾ ನಿರ್ಮಾಪಕರಾದರು. ರಾಜು ಅವರು ಹಲವು ವರ್ಷಗಳವರೆಗೆ ‘ಸೂಪರ್‌ ಹಿಟ್‌’ ಎಂಬ ಸಿನಿಮಾ ನಿಯತಕಾಲಿಕೆಯನ್ನು ನಡೆಸಿದ್ದರು. ರಾಜು ಅವರು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

SCROLL FOR NEXT