'ಇನ್' ಸಿನಿಮಾದ ಫರ್ಸ್ಟ್ ಲುಕ್ ನಲ್ಲಿ ಪಾವನಾ 
ಸಿನಿಮಾ ಸುದ್ದಿ

ಸಿ.ಎಂ ಬೊಮ್ಮಾಯಿ ಅವರಿಂದ ಪಾವನಾ 'ಇನ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮನೆಯೊಳಗೆ ಸಿಕ್ಕಿಹಾಕಿಕೊಳ್ಳುವ ಹುಡುಗಿಯೊಬ್ಬಳ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಲಾಕ್ ಡೌನ್ ಸಿನಿಮಾಗಳ ಸಾಲು ಶುರುವಾಗುವ ಸಾಧ್ಯತೆಗಳು ಗೋಚರಿಸಿವೆ. 

ಬೆಂಗಳೂರು: 'ಗೊಂಬೆಗಳ ಲವ್', 'ರುದ್ರಿ' ಖ್ಯಾತಿಯ ಪ್ರತಿಭಾನ್ವಿತ ನಟಿ ಪಾವನಾ ಗೌಡ ಅವರ ನೂತನ 'ಇನ್' ಸಿನಿಮಾದ ಫರ್ಸ್ಟ್ ಲುಕ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆಗೊಳಿಸಿದ್ದಾರೆ. 

ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮನೆಯೊಳಗೆ ಸಿಕ್ಕಿಹಾಕಿಕೊಳ್ಳುವ ಹುಡುಗಿಯೊಬ್ಬಳ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಲಾಕ್ ಡೌನ್ ಸಿನಿಮಾಗಳ ಸಾಲು ಶುರುವಾಗುವ ಸಾಧ್ಯತೆಗಳು ಗೋಚರಿಸಿವೆ. 

ಈ ಹಿಂದೆ ಲಾಕ್ ಡೌನ್ ಅನ್ನೇ ಆಧರಿಸಿದ ಕಾಮಿಡಿ ಸಿನಿಮಾ 'ಇಕ್ಕಟ್' ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಲಾಕ್ ಡೌನ್ ಅನ್ನೇ ಆಧರಿಸಿ ವಿಭಿನ್ನವಾದ ಕಥಾನಕವನ್ನು ಇನ್ ಸಿನಿಮಾದಿಂದ ನಿರೀಕ್ಷಿಸಬಹುದಾಗಿದೆ. 

ಸಿನಿಮಾದ ಫರ್ಸ್ಟ್ ಲುಕ್ ತೀವ್ರ ಕುತೂಹಲ ಸೃಷ್ಟಿಸುತ್ತದೆ. ಪಾವನಾ ಅವರು ಸಿನಿಮಾದಲ್ಲಿ ಬೋಲ್ಡ್ ಆಗಿಯೂ ಬ್ಯೂಟಿಫುಲ್ ಆಗಿಯೂ ಕಾಣಿಸಿಕೊಂಡಿರುವುದರ ಝಲಕ್ 'ಇನ್' ಚಿತ್ರದ ಫರ್ಸ್ಟ್ ಲುಕ್ ನಿಂದ ಸಿಗುತ್ತದೆ.

ಈ ಹಿಂದೆ ರುದ್ರಿ ಸಿನಿಮಾದಲ್ಲಿ ಪಾವನಾ ಹಾಗೂ ನಿರ್ದೇಶಕ ಬಡಿಗೇರ್ ದೇವೇಂದ್ರ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು. ಇನ್ ಚಿತ್ರವನ್ನೂ ಬಡಿಗೇರ್ ದೇವೇಂದ್ರ ಅವರೇ ರಚಿಸಿ, ನಿರ್ದೇಶಿಸುತ್ತಿದ್ದಾರೆ. ನಗರಪ್ರದೇಶದಲ್ಲಿ ಒಬ್ಬಂಟಿ ಜೀವನ ನಡೆಸುತ್ತಿರುವ ಹೆಣ್ಣುಮಕ್ಕಳಿಗೆ ಈ ಚಿತ್ರದಿಂದ ಒಳ್ಳೆಯ ಸಂದೇಶ ದೊರೆಯಲಿದೆ ಅಲ್ಲದೆ ಸ್ಪೂರ್ತಿಉಅನ್ನು ತುಂಬಲಿದೆ ಎಂದು ಪಾವನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚಿತ್ರಕಥೆಯನ್ನು ಅವರು ಮತ್ತು ಪತ್ರಕರ್ತ ಲೇಖಕ ಶಂಕರ ಪಾಗೋಜಿ ಜೊತೆಯಾಗಿ ರಚಿಸಿದ್ದಾರೆ. ಭರತ್ ನಾಯ್ಕ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಕರುಣಾಕರ್ ಈ ಸಿನಿಮಾದ ನಿರ್ಮಾಪಕರು. ಡಿಸೆಂಬರ್ ಅಂತ್ಯದ ವೇಳೆ ಇನ್ ಸಿನಿಮಾವನ್ನು ಬಿಡುಗಡೆಗೊಳಿಸುವ ಇರಾದೆ ಚಿತ್ರತಂಡದ್ದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?