'ಹೀರೋ' ಖ್ಯಾತಿಯ ನಟಿ ಗಾನವಿ ಲಕ್ಷ್ಮಣ್ ಅಭಿನಯದ ಭಾವಚಿತ್ರ ಟ್ರೇಲರ್ ಬಿಡುಗಡೆ: ಕನ್ನಡದಲ್ಲೊಂದು ಟೆಕ್ನೊ ಥ್ರಿಲ್ಲರ್ ಸಿನಿಮಾ
ಕನ್ನಡದಲ್ಲಿ ಟೆಕ್ನೊ ಥ್ರಿಲ್ಲರ್ ಪ್ರಕಾರದ ವಿನೂತನ ಕಥಾವಸ್ತುವುಳ್ಳ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಮಗಳು ಜಾನಕಿ, ಹೀರೋ ಸಿನಿಮಾ ಖ್ಯಾತಿಯ ಗಾನವಿ ಲಕ್ಷ್ಮಣ್ ನಟಿಸಿರುವ ಭಾವಚಿತ್ರ ಎನ್ನುವ ಹೆಸರಿನ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.
ಬೆಂಗಳೂರು: 'ಹೀರೋ' ಸಿನಿಮಾ ಖ್ಯಾತಿಯ ನಾಯಕಿ ಗಾನವಿ ಲಕ್ಷ್ಮಣ್- ಚಕ್ರವರ್ತಿ ಜೋಡಿಯ "ಭಾವಚಿತ್ರ" ಟ್ರೇಲರ್ ಬಿಡುಗಡೆಯಾಗಿದ್ದು, ಸದ್ಯದಲ್ಲೇ ತೆರೆಗೆ ಬರುತ್ತಿದೆ.
ಇದನ್ನೂ ಓದಿ: ಮರೆಗುಳಿ ಸುಪಾರಿ ಕಿಲ್ಲರ್ ಪಾತ್ರದಲ್ಲಿ ಅಭಿಷೇಕ್ ಬಚ್ಚನ್ ನಟಿಸಿದ ಬಾಬ್ ಬಿಸ್ವಾಸ್ ಟ್ರೇಲರ್ ಬಿಡುಗಡೆ: ಅಮಿತಾಬ್ ಶಬ್ಬಾಸ್ ಗಿರಿ
ಗಿರೀಶ್ ಕುಮಾರ್ ನಿರ್ದೇಶನದ "ಭಾವಚಿತ್ರ" ಟೆಕ್ನೋ ಥ್ರಿಲ್ಲರ್, ಸೆಂಟಿಮೆಂಟ್ ಸನ್ನಿವೇಶಗಳನ್ನು ಒಳಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ಶ್ರೀ ಮುರಳಿ ಅಭಿನಯದ ಮದಗಜ ಚಿತ್ರದ ಟ್ರೈಲರ್
ಥ್ರಿಲ್ಲರ್ ಮಾದರಿಯ ಸಿನಿಮಾ ಆಗಿದ್ದರೂ ರೊಮ್ಯಾಂಟಿಕ್ ಆಗಿಯೂ ಇರಲಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ. ಗಿರೀಶ್ ಕುಮಾರ್ ಈ ಹಿಂದೆ "ಆವಾಹಯಾಮಿ" ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದರು.
ಇದನ್ನೂ ಓದಿ: ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಸಂದರ್ಶನ