ಶ್ರೀ ಜಗನ್ನಾಥ ದಾಸರು ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ಶ್ರೀ ಜಗನ್ನಾಥ ದಾಸರು' ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆ

ಪ್ರಸಿದ್ಧ ಹರಿದಾಸ ವಿದ್ವಾಂಸ ಡಾ. ಮಧುಸೂದನ್ ಹವಾಲ್ದಾರ್ ಅವರ ಕನ್ನಡ ಸಿನಿಮಾ ಶ್ರೀ ಜಗನ್ನಾಥ ದಾಸರು ಇತ್ತೀಚಿಗೆ ಸ್ಯಾನ್ ಫ್ರಾನ್ಸಿಸ್ಕೂ ಬೇ ಏರಿಯಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದರೂ ಭಾರತದ ಥಿಯೇಟರ್ ಗಳಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.

ಬೆಂಗಳೂರು: ಪ್ರಸಿದ್ಧ ಹರಿದಾಸ ವಿದ್ವಾಂಸ ಡಾ. ಮಧುಸೂದನ್ ಹವಾಲ್ದಾರ್ ಅವರ ಕನ್ನಡ ಸಿನಿಮಾ ಶ್ರೀ ಜಗನ್ನಾಥ ದಾಸರು ಇತ್ತೀಚಿಗೆ ಸ್ಯಾನ್ ಫ್ರಾನ್ಸಿಸ್ಕೂ ಬೇ ಏರಿಯಾ ಥಿಯೇಟರ್ ಗಳಲ್ಲಿ ಪ್ರದರ್ಶನ ಕಂಡಿದ್ದರೂ ಭಾರತದ ಥಿಯೇಟರ್ ಗಳಲ್ಲಿ ಇನ್ನೂ ಬಿಡುಗಡೆಯಾಗಿಲ್ಲ.

ಶ್ರೀ ಜಗನ್ನಾಥ ದಾಸರು ಸಿನಿಮಾ, ಪುರಂದರ ದಾಸರು, ವಿಜಯದಾಸರು ಮತ್ತು ಶ್ರೀ ಗೋಪಾಲ ದಾಸರು ಸೇರಿದಂತೆ ಪ್ರಸಿದ್ಧ ನಾಲ್ವರು ಹರಿದಾಸರ ಜೀವನ ಹಾಗೂ ಭಕ್ತಿ ಚಳವಳಿಯ ಕಥಾ ಹಂದರವನ್ನು ಹೊಂದಿದೆ. ಮಾತಾಂಬುಜಾ ಮೂವೀಸ್‌ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಮೈತ್ರಿ ಹೆರಿಟೇಜ್, ವಿವಿ ಜೋಶಿ ಮತ್ತು ಶ್ರೀನಾಥ್ ರಾವ್ ಸಹ ನಿರ್ಮಾಪಕರಾಗಿದ್ದಾರೆ. 

ಶರತ್ ಜೋಷಿ ಶ್ರೀ ಜಗನ್ನಾಥ ದಾಸರು ಪಾತ್ರದಲ್ಲಿ ಅಭಿನಯಿಸಿದ್ದಾರೆ. ತ್ರಿವಿಕ್ರಮ್ ಜೋಷಿ- ವಿಜಯದಾಸರು, ಪ್ರಭಾಂಜನ್ ದೇಶಪಾಂಡೆ- ಗೋಪಾಲ ದಾಸರು ಪಾತ್ರದಲ್ಲಿ ನಟಿಸಿದ್ದಾರೆ.

ಐತಿಹಾಸಿಕ ಭಕ್ತಿ ಪ್ರದಾನ ಚಿತ್ರವನ್ನು ಹಂಪಿ, ಆನೆಗುಂದಿ, ಗುವಾಹಟಿ ಮತ್ತಿತರ ಕಡೆಗಳಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT