ಸಿನಿಮಾ ಸುದ್ದಿ

ಈ ವಾರಾಂತ್ಯ ಭರಪೂರ ಮನರಂಜನೆಗೆ 4 ಹೊಸ ಹಾಲಿವುಡ್ ಸಿನಿಮಾಗಳು ಮತ್ತು ಧಾರಾವಾಹಿ ಸರಣಿ ಮನಿ ಹೈಸ್ಟ್

ಫಾಸ್ಟ್ ಅಂಡ್ ಫ್ಯೂರಿಯಸ್-9 ಮತ್ತು ಶಾಂಗ್ ಚಿ ಸಿನಿಮಾಗಳು ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ. 

ನವದೆಹಲಿ: ಏಕತಾನತೆಯಿಂದ ಬೇಸತ್ತಿರುವ ಮನೆಮಂದಿಯನ್ನು ರಂಜಿಸಲು ಈ ವಾರಾಂತ್ಯ ನಾಲ್ಕು ಹಾಲಿವುಡ್ ಸಿನಿಮಾಗಳು ಮತ್ತು ಒಂದು ಧಾರಾವಾಹಿ ಸರಣಿ ಬಿಡುಗಡೆಯಾಗಿದೆ. 

ಮೊತ್ತ ಮೊದಲ ಏಷ್ಯನ್ ಸೂಪರ್ ಹೀರೋ ಸಿನಿಮಾ ಎನ್ನುವ ಖ್ಯಾತಿಗೆ ಪಾತ್ರವಾದ 'ಶಾಂಗ್ ಚಿ ದಿ ಲೆಜೆಂಡ್ ಆಫ್ ಟೆನ್ ರಿಂಗ್ಸ್' ಮತ್ತು ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾದ 9ನೇ ಭಾಗ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಶಾಂಗ್ ಚಿ ಸಿನಿಮಾವನ್ನು ಮಾರ್ವೆಲ್ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದರೆ, ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾವನ್ನು ಯೂನಿವರ್ಸಲ್ ಸಂಸ್ಥೆ ನಿರ್ಮಾಣ ಮಾಡಿದೆ. ಇವೆರಡೂ ಸಿನಿಮಾಗಳು ಇಂಗ್ಲಿಷ್ ಮಾತ್ರವಲ್ಲದೆ ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎನ್ನುವುದು ವಿಶೇಷ. 

ಆಕ್ಷನ್ ಸಿನಿಮಾವಾದ ಫಾಸ್ಟ್ ಅಂಡ್ ಫ್ಯೂರಿಯಸ್ ಸಿನಿಮಾದಲ್ಲಿ ವಿನ್ ಡೀಸೆಲ್ ಮತ್ತು ಡಬ್ಲ್ಯು ಡಬ್ಲ್ಯು ಎಫ್ ಕುಸ್ತಿಪಟು ಜಾನ್ ಸೀನಾ ಅಭಿನಯಿಸಿದ್ದಾರೆ ಎನ್ನುವುದು ವಿಶೇಷ

ಇನ್ನುಳಿದಂತೆ ಬ್ಲ್ಯಾಕ್ ವಿಡೋ, ಸಿಂಡರೆಲ್ಲಾ ಸಿನಿಮಾಗಳು ಒಟಿಟಿ ಸ್ಟ್ರೀಮಿಂಗ್ ಸೇವೆಯಾದ ಹಾಟ್ ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿದೆ. ಹಾಗೂ ಮನಿ ಹೈಸ್ಟ್ ಧಾರಾವಾಹಿ ಸರಣಿಯ 5ನೇ ಸೀಸನ್ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದೆ. 5ನೇ ಸೀಸನ್ ನ 5 ಕಂತುಗಳು ಮಾತ್ರವೇ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಕಂತುಗಳನ್ನು ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ರೋಮಾಂಚಕ ಆಕ್ಷನ್ ಧಾರಾವಾಹಿಯಾದ ಮನಿ ಹೈಸ್ಟ್ ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದೆ. ಗುಂಪೊಂದು ಬ್ಯಾಂಕ್ ದರೋಡೆ ಕತೆಯನ್ನುಳ್ಳ ಧಾರಾವಾಹಿಯ ಕಥಾಹಂದರ ಗಟ್ಟಿಯಾಗಿದ್ದು ವೀಕ್ಷಕರನ್ನು ಒಂದೇ ಪೆಟ್ಟಿಗೆ ಸೆಳೆದು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!