ರಘು ಮುಖರ್ಜಿ 
ಸಿನಿಮಾ ಸುದ್ದಿ

ಹಿರಿದಾಗುತ್ತಿದೆ ಧನಂಜಯ್ ಬಳಗ: ಡಾಲಿಯ 'ಹೆಡ್ ಬುಷ್' ತಂಡ ರಘು ಮುಖರ್ಜಿ ಸೇರ್ಪಡೆ!

ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಕನ್ನಡದ ಹಲವು ಯುವ ನಟರು ಅಭಿನಯಿಸುತ್ತಿದ್ದಾರೆ. 

'ಡಾಲಿ' ಧನಂಜಯ್ ನಟಿಸುತ್ತಿರುವ 'ಹೆಡ್‌ಬುಷ್' ಸಿನಿಮಾದಲ್ಲಿ ಸ್ಟಾರ್ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಮಾಜಿ ಡಾನ್ ಎಂಪಿ ಜಯರಾಜ್ ಜೀವನ ಆಧರಿಸಿ ತಯಾರಾಗುತ್ತಿರುವ ಈ ಸಿನಿಮಾದಲ್ಲಿ ಕನ್ನಡದ ಹಲವು ಯುವ ನಟರು ಅಭಿನಯಿಸುತ್ತಿದ್ದಾರೆ. 

ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಈಗ ಮತ್ತೊಬ್ಬ ಖ್ಯಾತ ಕಲಾವಿದನ ಪ್ರವೇಶವಾಗಿದೆ.ಪ್ಯಾರಿಸ್ ಪ್ರಣಯ, ಸವಾರಿ, ಜೆಸ್ಸಿ ಅಂತಹ ಚಿತ್ರಗಳ ಮೂಲಕ ಕನ್ನಡಿಗರ ಅಭಿಮಾನ ಗಳಿಸಿರುವ ರಘು ಮುಖರ್ಜಿ ಈಗ ಹೆಡ್‌ಬುಷ್ ಚಿತ್ರತಂಡ ಸೇರಿದ್ದಾರೆ. ಡಾಲಿ ಜೊತೆ ರಘು  ಮುಖರ್ಜಿ ಪ್ರಮುಖ ಪಾತ್ರವೊಂದನ್ನು ನಟಿಸುತ್ತಿರುವ ಬಗ್ಗೆ ಇಂದು ಅಧಿಕೃತವಾಗಿದೆ. 

ಸ್ವತಃ ಧನಂಜಯ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಘು ಮುಖರ್ಜಿ ಆಗಮನದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಡ್‌ಬುಷ್ ಚಿತ್ರದಲ್ಲಿ ಈಗಾಗಲೇ ಕನ್ನಡದ ಹಲವು ಖ್ಯಾತ ಕಲಾವಿದರು ನಟಿಸುತ್ತಿದ್ದಾರೆ. ವಸಿಷ್ಠ ಸಿಂಹ, ಲೂಸ್ ಮಾದ ಯೋಗೇಶ್, ಬಾಲು ನಾಗೇಂದ್ರ, ಶ್ರುತಿ ಹರಿಹರನ್ ಅಂತಹ ತಾರೆಯರು ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಇವರ ಜೊತೆ ರಘು ಮುಖರ್ಜಿ ಎಂಟ್ರಿಯಾಗಿದೆ. 

ಕೊನೆಯದಾಗಿ ಪ್ರಜ್ವಲ್ ದೇವರಾಜ್ ಅಭಿನಯದ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾದಲ್ಲಿ ರಘು ಮುಖರ್ಜಿ ನಟಿಸಿದ್ದರು. 2021ರ ಫೆಬ್ರವರಿ ತಿಂಗಳಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

CJP ಪ್ರತಿಭಟನೆಗೆ ದೇಶವಿರೋಧಿ ಶಕ್ತಿಗಳ ಸಾಥ್‌: ಭಾರತದ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ..!