ಡೇನಿಯಲ್ ಕ್ರೇಗ್ 
ಸಿನಿಮಾ ಸುದ್ದಿ

ಜೇಮ್ಸ್ ಬಾಂಡ್ ಪಾತ್ರಕ್ಕೆ ಡೇನಿಯಲ್ ಕ್ರೇಗ್ ಭಾವಪೂರ್ಣ ವಿದಾಯ: ಕೊನೆಯ ಸೀನ್ ಶೂಟಿಂಗ್ ವೇಳೆ ಕಣ್ಣೀರಿಟ್ಟ ನಟ

ಡೇನಿಯಲ್ ಅವರು ಕೆಸೀನೊ ರಾಯಲ್ ಸಿನಿಮಾದಿಂದ ಜೇಮ್ಸ್ ಬಾಂಡ್ ಸರಣಿಗೆ ಕಾಲಿಟ್ಟಿದ್ದರು. ನಂತರ ಕ್ವಾಂಟಂ ಆಫ್ ಸೊಲೇಸ್, ಸ್ಕೈ ಫಾಲ್ ಹಾಗೂ ಸ್ಪೆಕ್ಟರ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ಮಿಂಚಿದ್ದರು. ಕಳೆದ 15 ವರ್ಷಗಳಿಂದ ಜೇಮ್ಸ್ ಬಾಂಡ್ ಪಾತ್ರದಲ್ಲಿ ಜಗತ್ತಿನ ಕಲಾರಸಿಕರನ್ನು ರಂಜಿಸಿದ್ದರು.

ಲಂಡನ್: ಜೇಮ್ಸ್ ಬಾಂಡ್ ಸರಣಿಯಲ್ಲಿ ಮೂಡಿಬರುತ್ತಿರುವ ನೂತನ ಸಿನಿಮಾ 'ನೋ ಟೈಂ ಟು ಡೈ' ಸಿನಿಮಾದ ಕೊನೆಯ ದೃಶ್ಯ ಚಿತ್ರೀಕರಣ ವೇಳೆ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ತುಂಬಾ ಭಾವೋದ್ವೇಗಕ್ಕೆ ಒಳಗಾಗಿದ್ದಾರೆ.. ಅವರು ಜೇಮ್ಸ್ ಬಾಂಡ್ ಪಾತ್ರಧಾರಿಯಾಗಿ ಕಾಣೀಸಿಕೊಳ್ಳಲಿರುವ ಕಡೆಯ ಸಿನಿಮಾ ಇದಾಗಿರಲಿದೆ. 

ಡೇನಿಯಲ್ ಅವರು ಕೆಸೀನೊ ರಾಯಲ್ ಸಿನಿಮಾದಿಂದ ಜೇಮ್ಸ್ ಬಾಂಡ್ ಸರಣಿಗೆ ಕಾಲಿಟ್ಟಿದ್ದರು. ನಂತರ ಕ್ವಾಂಟಂ ಆಫ್ ಸೊಲೇಸ್, ಸ್ಕೈ ಫಾಲ್ ಹಾಗೂ ಸ್ಪೆಕ್ಟರ್ ಸಿನಿಮಾಗಳಲ್ಲಿ ಜೇಮ್ಸ್ ಬಾಂಡ್ ಆಗಿ ಮಿಂಚಿದ್ದರು. ಕಳೆದ 15 ವರ್ಷಗಳಿಂದ ಜೇಮ್ಸ್ ಬಾಂಡ್ ಪಾತ್ರದಲ್ಲಿ ಜಗತ್ತಿನ ಕಲಾರಸಿಕರನ್ನು ರಂಜಿಸಿದ್ದರು.

ಕೊನೆಯ ದೃಶ್ಯ ಶೂಟಿಂಗ್ ವೇಳೆ ಕ್ರೇಗ್ ಅವರು ಜಗತ್ತಿನ ಸುಪ್ರಸಿದ್ಧ ಕಾಲ್ಪನಿಕ ಗೂಢಚಾರಿ ಪಾತ್ರವಾದ ಜೇಮ್ಸ್ ಬಾಂಡ್ ಆಗಿ ನಟಿಸಿದ್ದು ತಮ್ಮ ಜೀವನದ ಅತ್ಯುತ್ತಮ ಭಾಗ. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟಿಸಿದ ಪ್ರತಿ ಕ್ಷಣವೂ ನನಗೆ ಬೆಲೆಕಟ್ಟಲಾಗದಷ್ಟು ಅಮೂಲ್ಯವಾದುದು ಎಂದು ಹೇಳಿ ಈ ಪಾತ್ರವನ್ನು ಮಿಸ್ ಮಾಡಿಕೊಳ್ಳುವುದಾಗಿ ಆನಂದ ಭಾಷ್ಪ ಹರಿಸಿದ್ದಾರೆ. ಸೆಟ್ ನಲ್ಲಿದ್ದ ತಂತ್ರಜ್ನರೂ ಬಾಂಡ್ ಅವರ ಅಂತಿಮ ಕ್ಷಣದಲ್ಲಿ ಭಾಗಿಯಾಗಿ ಪರಸ್ಪರ ಆಲಿಂಗಿಸಿಕೊಂಡಿದ್ದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT