ರಿಕಿ ಕೇಜ್ 
ಸಿನಿಮಾ ಸುದ್ದಿ

ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ

ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ.

ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಜಗತ್ತು ಆತಂಕದಿಂದ ನೋಡಿದೆ. ತಮ್ಮ ದೇಶ ತಾಲಿಬಾನ್ ವಶವಾಗುತ್ತಿದ್ದಂತೆಯೇ ಹಲವು ಮಂದಿ ಇತರೆ ದೇಶಗಳಿಗೆ ಪಲಾಯನ ಮಾಡಿದ್ದರು. ಅವರಲ್ಲಿ ಸಂಗೀತಗಾರರು, ಕಲಾವಿದರೂ ಸೇರಿದ್ದರು. 

ಅನಿವಾರ್ಯವಾಗಿ ತಮ್ಮ ದೇಶ ತೊರೆದು ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಆಶ್ರಯ ಪಡೆದಿರುವ ಆಫ್ಘನ್ ಸಂಗೀತಗಾರರೊಂದಿಗೆ ಸೇರಿ ಬೆಂಗಳೂರಿನ ವರ್ಲ್ಡ್ ಮ್ಯೂಸಿಕ್ ಮಾಂತ್ರಿಕ, ಗ್ರ್ಯಾಮಿ ವಿಜೇತ ಸಂಗೀತ ನಿರ್ದೇಶಕ ರಿಕಿ ಕೇಜ್ ಫರ್ದಾ ಎನ್ನುವ ನೂತನ ಫರ್ದಾ ಮ್ಯೂಸಿಕ್ ವಿಡಿಯೊ ಹೊರತಂದಿದ್ದಾರೆ. ಯೂಟ್ಯೂಬ್ ನಲ್ಲಿರುವ ಈ ಹಾಡು ಆಫ್ಘನ್ ಜನಜೀವನದ ಕುರಿತು ಬೆಳಕು ಚೆಲ್ಲುತ್ತದೆ. 

ವಿಶ್ವಸಂಸ್ಥೆಯ ಜೊತೆಗಿನ Ricky with Refugee ಎನ್ನುವ ಕಾರ್ಯಕ್ರಮದಡಿ ಈ ಆಲ್ಬಂ ಮೂಡಿಬಂಡಿದೆ. ಈ ಕಾರ್ಯಕ್ರಮದಡಿ ರಿಕಿ ಕೇಜ್ ಅವರು ೨೪ ಮಂದಿ ಆಫ್ಘನ್ ಮತ್ತು ಮ್ಯಾನ್ಮಾರ್ ನಿರಾಶ್ರಿತರೊಂದಿಗೆ ಸೇರಿ ಸಂಗೀತ ಸಂಯೋಜಿಸಿದ್ದಾರೆ.

ಸಂಗೀತ ಕಲಾವಿದರಾಗಿ ತಾಯ್ನಾಡು ತೊರೆದು ಪರ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಆಫ್ಘನ್ ನಿರಾಶ್ರಿತರಿಗೆ ಸಂಗೀತವೋಮ್ದೇ ಮಾಧ್ಯಮ. ಅವರು ಅದರ ಮೂಲಕವೇ ಸಂವಹನ ನಡೆಸಬೇಕು. ಅದರ ಮೂಲಕವೇ ಹಣ ಸಂಪಾದಿಸಬೇಕು. ಇಂಥಾ ಕಷ್ತಕರ ಸಮಯದಲ್ಲೂ ಅವರು ಸಂಗೀತ ಸಾಮ್ಧನೆ ಮುಂದುವರಿಸಿರುವುದೇ ದೊಡ್ಡ ಸಂಗತಿ ಎಂದು ಕೇಜ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT