ಶುಗರ್ ಫ್ಯಾಕ್ಚರಿ ಸ್ಟಿಲ್ 
ಸಿನಿಮಾ ಸುದ್ದಿ

'ಶುಗರ್ ಫ್ಯಾಕ್ಟರಿ' ಟೈಟಲ್ ಸಾಂಗ್ ಗೆ ಚಂದನ್ ಶೆಟ್ಟಿ ಗಾಯನ: ಮೂವರು ನಾಯಕಿಯರೊಂದಿಗೆ ಡಾರ್ಲಿಂಗ್ ಕೃಷ್ಣ 'ಗಾನ ಬಜಾನ'

ದೀಪಕ್ ಅರಸ್ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ “ಶುಗರ್ ಫ್ಯಾಕ್ಟರಿ” ಚಿತ್ರದ ಟೈಟಲ್ ಸಾಂಗ್ ನ ಚಿತ್ರೀಕರಣ ಬೆಂಗಳೂರಿನ ಹೆಸರಾಂತ ಪಬ್ ನಲ್ಲಿ ನಡೆಯುತ್ತಿದೆ.

ದೀಪಕ್ ಅರಸ್ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿಬರುತ್ತಿರುವ  “ಶುಗರ್ ಫ್ಯಾಕ್ಟರಿ” ಚಿತ್ರದ ಟೈಟಲ್ ಸಾಂಗ್ ನ ಚಿತ್ರೀಕರಣ ಬೆಂಗಳೂರಿನ ಹೆಸರಾಂತ ಪಬ್ ನಲ್ಲಿ ನಡೆಯುತ್ತಿದೆ.

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್ ನಿರ್ಮಿಸುತ್ತಿರುವ ಶುಗರ್ ಫ್ಯಾಕ್ಟರಿ ಸಿನಿಮಾ ಹಾಡಿ ಟೈಟಲ್ ಸಾಂಗ್ ಗೆ ಚಂದನ್ ಶೆಟ್ಟಿ ಹಿನ್ನೆಲೆ ಗಾಯನ ನೀಡಿದ್ದಾರೆ. ಮೂವರು ನಾಯಕಿಯರೊಂದಿಗೆ ಡಾರ್ಲಿಂಗ್ ಕೃಷ್ಣ ಡ್ಯಾನ್ಸ್ ಮಾಡಿದ್ದಾರೆ.

ಈ‌ ಹಾಡನ್ನು ಚಂದನ್ ಶೆಟ್ಟಿ ‌ಅವರೆ ಬರೆದು ಹಾಡಿದ್ದಾರೆ. ನಾಯಕ ಡಾರ್ಲಿಂಗ್ ಕೃಷ್ಣ ಚಿತ್ರದ ಮೂವರು ನಾಯಕಿಯರಾದ ಸೋನಾಲ್ ಮಾಂಟೆರೊ, ಅದ್ವಿತಿ ಶೆಟ್ಟಿ ಹಾಗೂ ಶಿಲ್ಪ ಶೆಟ್ಟಿ ಅವರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಧನಂಜಯ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

“ಶುಗರ್ ಫ್ಯಾಕ್ಟರಿ” ಯ ಬಹುತೇಕ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ಮಾತ್ರ‌ ಬಾಕಿಯಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಹಾಡುಗಳ ಚಿತ್ರೀಕರಣ ಬಿರುಸಿನಿಂದ ಸಾಗಿದ್ದು, ಕೆಲವೇ ದಿನಗಳಲ್ಲಿ “ಶುಗರ್ ಫ್ಯಾಕ್ಟರಿ” ತೆರೆಗೆ ಬರಲು ಸಿದ್ದವಾಗಲಿದೆ.

ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಫಿರ್ ರಫಿ ಸಂಗೀತ ನಿರ್ದೇಶನ ಹಾಗೂ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ದಾಖಲೆ: Instagramನಲ್ಲಿ 100 ಮಿ. ಫಾಲೋವರ್ಸ್ ದಾಟಿದ ಮೊದಲ ವಿಶ್ವ ನಾಯಕ

SCROLL FOR NEXT