ಅಂಜನಿ ಪುತ್ರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್, ರಶ್ಮಿಕಾ ಮಂದಣ್ಣ(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

'ಅಂಜನಿ ಪುತ್ರ'ನನ್ನು ನೆನೆದ ರಶ್ಮಿಕಾ

'ಕಿರಿಕ್ ಪಾರ್ಟಿ' ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಬಳಿಕ ಕಾಲಿವುಡ್, ಬಾಲಿವುಡ್ ಗೆ ಹೋಗಿ ಅಲ್ಲಿ ಕೂಡ ನಟನೆಯಲ್ಲಿ ಸೈ ಎನಿಸಿಕೊಂಡು ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬಂದು ಆರು ವರ್ಷಗಳೇ ಕಳೆದಿವೆ.

ಬೆಂಗಳೂರು: 'ಕಿರಿಕ್ ಪಾರ್ಟಿ' ಮೂಲಕ ಚಂದನವನಕ್ಕೆ ಕಾಲಿಟ್ಟು ಜನಪ್ರಿಯ ನಟಿಯಾಗಿ ಬಳಿಕ ಕಾಲಿವುಡ್, ಬಾಲಿವುಡ್ ಗೆ ಹೋಗಿ ಅಲ್ಲಿ ಕೂಡ ನಟನೆಯಲ್ಲಿ ಸೈ ಎನಿಸಿಕೊಂಡು ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ(Rashmika Mandanna) ಚಿತ್ರರಂಗಕ್ಕೆ ಬಂದು ಆರು ವರ್ಷಗಳೇ ಕಳೆದಿವೆ.

2017ರ ಡಿಸೆಂಬರ್ ನಲ್ಲಿ ತೆರೆ ಕಂಡ ಅಂಜನಿಪುತ್ರ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್(Puneet Rajkumar) ಎದುರಿಗೆ ರಶ್ಮಿಕಾ ಮಂದಣ್ಣ ನಟಿಸಿದ್ದರು. ಅದನ್ನೀಗ ರಶ್ಮಿಕಾ ನೆನೆದಿದ್ದಾರೆ. ಅಂಜನಿಪುತ್ರನಿಗೆ 5 ವರ್ಷಗಳು ತುಂಬಿದೆ. ಪುನೀತ್ ರಾಜ್ ಕುಮಾರ್ ಅವರೊಂದಿಗೆ ಅಂದು ಆಡುತ್ತಿದ್ದ ಮಾತುಕತೆಗಳನ್ನು ಇಂದಿಗೂ ನೆನೆಯುತ್ತೇನೆ. ಆ ಸಮಯದಲ್ಲಿ ನನ್ನ ಮೇಲೆ ನನಗಿಂತ ಅವರಿಗೇ ಹೆಚ್ಚು ವಿಶ್ವಾಸವಿತ್ತು. ಅವರು ಅತ್ಯಂತ ಸಹೃದಯಿ, ನನ್ನ ಹೃದಯದಲ್ಲಿರುವ ಅವರೊಂದಿಗಿನ ಬಂಧವನ್ನು ಬದಲಾಯಿಸಲು ಸಾಧ್ಯವಿಲ್ಲ. ಚಿತ್ರದ ನಿರ್ದೇಶಕ ಹರ್ಷ ಅವರಿಗೆ ಈ ಸಂದರ್ಭದಲ್ಲಿ ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಕನ್ನಡ ಚಿತ್ರದ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel