ಸಿನಿಮಾ ಸುದ್ದಿ

ಆಸ್ಕರ್ ರೇಸ್​ಗೆ ‘ಕಾಂತಾರ': ಅಧಿಕೃತಗೊಳಿಸಿದ ಹೊಂಬಾಳೆ ಪ್ರೊಡಕ್ಷನ್; ಕಾಂತಾರ-2 ಬಗ್ಗೆ ಹೊಸ ಅಪ್ ಡೇಟ್!

Shilpa D

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಬಗ್ಗೆ ದಿನಕ್ಕೊಂದು ಹೊಸ ವಿಚಾರ ಹುಟ್ಟಿಕೊಳ್ಳುತ್ತಿದೆ. ಈ ಸಿನಿಮಾ ದಿನಕ್ಕೊಂದು ದಾಖಲೆ ಮಾಡುತ್ತಲೇ ಇದೆ.

ಈ ಮಧ್ಯೆ ಕಾಂತಾರ ಸಿನಿಮಾವನ್ನು ಆಸ್ಕರ್‌ಗೆ ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್  ಅಧಿಕೃತವಾಗಿ ತಿಳಿಸಿದೆ. 2023ರ ಆಸ್ಕರ್ ಪ್ರಶಸ್ತಿಗೆ ಕಾಂತಾರ ಸಿನಿಮಾವನ್ನು ನಾಮನಿರ್ದೇಶನ ಮಾಡುವಂತೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಸಿನಿಮಾವನ್ನು ಕಳುಹಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಖಚಿತಪಡಿಸಿದೆ.

ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಕಿರಂಗದೂರು ಈ ಬಗ್ಗೆ ಮಾತನಾಡಿದ್ದಾರೆ. ಆಸ್ಕರ್​ ರೇಸ್​​ನಲ್ಲಿ ಸ್ಪರ್ಧೆ ಮಾಡಲು ನಾವು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಅಂತಿಮ ನಾಮನಿರ್ದೇಶನ ಪಟ್ಟಿ ಇನ್ನಷ್ಟೇ ಬರಬೇಕಿದೆ’ ಎಂದು ಅವರು ಹೇಳಿದ್ದಾರೆ.

ರಿಷಬ್ ಶೆಟ್ಟಿ ಅವರು ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಮರಳಿದ ನಂತರದಲ್ಲಿ ಈ ಸಿನಿಮಾಗೆ ಸೀಕ್ವೆಲ್ ಮಾಡಬೇಕೋ ಅಥವಾ ಪ್ರೀಕ್ವೆಲ್ ಮಾಡಬೇಕೋ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

SCROLL FOR NEXT