ಬೆಂಗಳೂರು: ಕಿರುತೆರೆ ಹಾಗೂ ರಿಯಾಲಿಟಿ ಶೂ ಸ್ಪರ್ಧಿ ನಿರೂಷಾ ರವಿ ಅವರ ಮುದ್ದಿನ ನಾಯಿಯನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟಿ ಕಣ್ಣೀರಿಟ್ಟು ದುಖಃ ಹಂಚಿಕೊಂಡಿದ್ದಾರೆ.
ಸುಂಕದಕಟ್ಟೆತ ಟೆಲಿಕಾಂ ಲೇಔಟ್ನಲ್ಲಿ ವಾಸವಾಗಿರುವ ನಿರೂಷಾ ತಮ್ಮ ನಾಯಿಯನ್ನು ಹೊರಗೆ ಬಿಟ್ಟಿದ್ದು ಅದನ್ನು ಯಾವುದೋ ಯುವ ಜೋಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ನಾಯಿ ಟ್ವಿಂಕಲ್ ವಾಕಿಂಗ್ ಮಾಡುವ ಸಮಯದಲ್ಲಿ ಅಪರಿಚಿತ ಯುವಕ ಮತ್ತು ಯುವತಿ ವಾಕಿಂಗ್ ಗೆ ಬಂದಿದ್ದಾರೆ. ಆಗ ನಾಯಿ ಒಂಟಿಯಾಗಿ ಓಡಾವುದನ್ನು ನೋಡಿ ಕಳ್ಳತನ ಮಾಡಿದ್ದಾರೆ. ಇದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋವನ್ನು ನಿರೂಷಾ ಹಂಚಿಕೊಂಡಿದ್ದಾರೆ.
ಹಣಕ್ಕಾಗಿ ಕಳ್ಳತನ ಮಾಡಿದ್ದರೆ ನಿಮಗೆ ನಾನು ದೊಡ್ಡ ಮೊತ್ತದ ಹಣವನ್ನು ಕೊಡುತ್ತೀನಿ. ದಯವಿಟ್ಟು ನಮ್ಮ ನಾಯಿಯನ್ನು ನಮಗೆ ಕೊಟ್ಟು ಬಿಡಿ ಎಂದು ನಿರೂಷಾ ಬರೆದುಕೊಂಡಿದ್ದಾರೆ.