ವಿಜಯ್ ದೇವರಕೊಂಡ 
ಸಿನಿಮಾ ಸುದ್ದಿ

‘ಅವಳು ಡಾರ್ಲಿಂಗ್, ನಿಜವಾಗಿಯೂ ಇಷ್ಟಪಡುತ್ತೇನೆ’ ಎಂದು ವಿಜಯ್ ದೇವರಕೊಂಡ ಹೇಳಿದ್ಯಾರಿಗೆ?

ಸ್ಟಾರ್ ಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವಿನ ಬಾಂಧವ್ಯದ ಬಗ್ಗೆ ಸಾಕಷ್ಟು ವದಂತಿಗಳಿವೆ. ಇದೆಲ್ಲದರ ನಡುವೆಯೂ ಅವರಿಬ್ಬರು ತಾವು ಉತ್ತಮ ಸ್ನೇಹಿತರು ಎಂದೇ ಹೇಳುತ್ತಿದ್ದಾರೆ.

ಮುಂಬೈ: ಸ್ಟಾರ್ ಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ನಡುವಿನ ಬಾಂಧವ್ಯದ ಬಗ್ಗೆ ಸಾಕಷ್ಟು ವದಂತಿಗಳಿವೆ. ಇದೆಲ್ಲದರ ನಡುವೆಯೂ ಅವರಿಬ್ಬರು ತಾವು ಉತ್ತಮ ಸ್ನೇಹಿತರು ಎಂದೇ ಹೇಳುತ್ತಿದ್ದಾರೆ. ಕೆಲವೊಮ್ಮೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಅವರು ತಮ್ಮ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕುತ್ತಲೇ ಇದ್ದಾರೆ.

ಡಿಯರ್ ಕಾಮ್ರೇಡ್ ಮತ್ತು ಗೀತ ಗೋವಿಂದಂ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ ಇಬ್ಬರು ತಾರೆಯರು, ಡೇಟಿಂಗ್ ಬಗ್ಗೆ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಈ ವಿಚಾರವಾಗಿ ಕಾಫಿ ವಿತ್ ಕರಣ್ ನಲ್ಲಿ ವಿಜಯ ದೇವರಕೊಂಡ ಮಾತನಾಡಿದ್ದಾರೆ.

ವಿಜಯ್ ಅವರು ಅನನ್ಯ ಪಾಂಡೆ ಜೊತೆಗೆ ಜುಲೈ 28 ರಂದು ಕಾಫಿ ವಿತ್ ಕರಣ್ ೭ ಸಂಚಿಕೆಯಲ್ಲಿ ಪಾಲ್ಗೊಂಡಿದ್ದರು. ಕರಣ್ ಜೋಹರ್ ಅವರು ರಶ್ಮಿಕಾ ಅವರೊಂದಿಗಿನ ಸಂಬಂಧದ ಬಗ್ಗೆ ನಟನನ್ನು ಕೇಳಿದಾಗ, ಉತ್ತಮ ಸ್ನೇಹಿತರು ಎಂದೇ ಉತ್ತರಿಸಿದ್ದಾರೆ.

“ನಾವು ನನ್ನ ಜೀವನದಲ್ಲಿ ನಿಜವಾಗಿಯೂ ಆರಂಭಿಕ ಹಂತದಲ್ಲಿ ಎರಡು ಚಲನಚಿತ್ರಗಳನ್ನು ಒಟ್ಟಿಗೆ ಮಾಡಿದ್ದೇವೆ. ಅವಳು ಡಾರ್ಲಿಂಗ್. ನಾನು ಅವಳನ್ನು ನಿಜವಾಗಿಯೂ ಇಷ್ಟಪಡುತ್ತೇನೆ. ಉತ್ತಮ ಸ್ನೇಹಿತರು. ನಾವು ಚಲನಚಿತ್ರ ವಲಯದಲ್ಲಿ ಸಂಭವಿಸುವ ಸಾಕಷ್ಟು ಏರಿಳಿತಗಳನ್ನು ಹಂಚಿಕೊಳ್ಳುತ್ತೇವೆ. ಇದು ನಮ್ಮ ನಡುವೆ ಬಾಂಧವ್ಯ ಹುಟ್ಟಿಸಿದೆ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!