ಪ್ರಭಾಸ್ ಮತ್ತು ಯಶ್ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಪ್ರಭಾಸ್ ಅಭಿನಯದ 'ಸಲಾರ್' ಚಿತ್ರ: ಅತಿಥಿ ಪಾತ್ರದಲ್ಲಿ ರಾಕಿಂಗ್ ಸ್ಟಾರ್ 'ಯಶ್'!

ಪ್ರಭಾಸ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ 'ಸಲಾರ್' ನಲ್ಲಿ ನಟ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಡವಾಗಿ ತಿಳಿದು ಬಂದಿದೆ.

ಪ್ರಭಾಸ್ ಅವರ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ 'ಸಲಾರ್' ನಲ್ಲಿ ನಟ ಯಶ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಡವಾಗಿ ತಿಳಿದು ಬಂದಿದೆ.

ಸಲಾರ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಪ್ರಭಾಸ್ ಮತ್ತು ಯಶ್ ಇಬ್ಬರನ್ನು ಒಂದೇ ಫ್ರೇಮ್ ನಲ್ಲಿ ತರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ವದಂತಿಗಳು ಖಚಿತವಾದರೇ ಪ್ಯಾನ್ ಇಂಡಿಯಾ ನಾಯಕರುಗಳು ಪ್ರಭಾಸ್ ಮತ್ತು ಯಶ್ ಇಬ್ಬರು ತೆರೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

'ಸಲಾರ್' ನಲ್ಲಿ ಯಶ್ ಅವರು ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿವೆ.  ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ತೆರೆ ಮೇಲೆ  ಎರಡು ದಂತಕಥೆಗಳನ್ನು ಒಟ್ಟಿಗೆ ನೋಡುವುದು ಅದ್ಭುತ ಎಂದು ಭಾವಿಸುತ್ತಾರೆ. 

ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ 'ಸಲಾರ್' ತಯಾರಾಗುತ್ತಿದ್ದು, ವಿಜಯ್ ಕಿರಗಂದೂರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ.  ಈ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್‌ ದಾಳಿ; ಭಾರತೀಯ ಸೇರಿ ನಾಲ್ವರಿಗೆ ಗಾಯ

'ಲೋಕಸಭೆಯಲ್ಲಿ ನಾನು ಮಾತನಾಡದಂತೆ ಹಲವು ಬಾರಿ ತಡೆದರು': ರಾಹುಲ್ ಗಾಂಧಿ

ಲ್ಯಾಂಡಿಂಗ್ ಆಗುವಾಗ ಕಳಚಿಬಿದ್ದ ವಿಮಾನದ ಚಕ್ರಗಳು: ಫುಕೆಟ್ ವಿಮಾನ ನಿಲ್ದಾಣ ತಾತ್ಕಾಲಿಕವಾಗಿ ಬಂದ್!

ಬೆಂಗಳೂರಿನಲ್ಲಿ ಗೃಹಬಳಕೆ ಎಲ್‌ಪಿಜಿಯಲ್ಲೂ ಕೊರತೆ: ಬುಕಿಂಗ್ ನಂಬರ್ ಸ್ವಿಚ್ ಆಫ್; ಹೆಚ್ಚಿದ ಆತಂಕ

ಕೇವಲ ಮಧುರೈ ಏಕೆ? ಹುಬ್ಬಳ್ಳಿ, ಬೆಳಗಾವಿ ವಿಮಾನ ನಿಲ್ದಾಣವನ್ನೂ ಅಂತರರಾಷ್ಟ್ರೀಯ ನಿಲ್ದಾಣವಾಗಿ ಘೋಷಿಸಿ

SCROLL FOR NEXT