ಸತ್ಯ ಪ್ರಕಾಶ್ 
ಸಿನಿಮಾ ಸುದ್ದಿ

ಫನ್ ಎಂಟರ್‌ಟೈನರ್ ಸಿನಿಮಾಗೆ ಸಜ್ಜಾದ 'ರಾಮಾ ರಾಮಾ ರೇ' ಸತ್ಯಪ್ರಕಾಶ್!

ರಾಮ ರಾಮಾ ರೇ, ಒಂದಲ್ಲಾ ಎರಡಲ್ಲಾ, ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಈಗ ತಮ್ಮ ಮುಂದಿನ ಯೋಜನೆಗೆ ಸಿದ್ಧರಾಗಿದ್ದಾರೆ.

ರಾಮ ರಾಮಾ ರೇ, ಒಂದಲ್ಲಾ ಎರಡಲ್ಲಾ, ಮತ್ತು ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಈಗ ತಮ್ಮ ಮುಂದಿನ ಯೋಜನೆಗೆ ಸಿದ್ಧರಾಗಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಸತ್ಯ ಬರೆದಿದ್ದಾರೆ.

ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ ಮತ್ತು ಸಾಮಾನ್ಯ ಮನುಷ್ಯನ ಜೀವನವನ್ನು ಪ್ರತಿನಿಧಿಸುತ್ತದೆ. ಇದೊಂದು ಯೂತ್‌ಫುಲ್ ಮತ್ತು ಫನ್ ಎಂಟರ್‌ಟೈನರ್ ಆಗಿರುತ್ತದೆ. ನನ್ನ ಕಾಲೇಜು ದಿನಗಳ ಕೆಲವು ವೈಯಕ್ತಿಕ ಅನುಭವಗಳನ್ನು ಇದರಲ್ಲಿ ತೆಗೆದುಕೊಳ್ಳಲಾಗಿದೆ, "ನಾನು ಶಿವಮೊಗ್ಗದಲ್ಲಿ ಒಂದು ರೌಂಡ್ ಸುತ್ತಾಡಿದ್ದು,  ಶೀಘ್ರದಲ್ಲೇ ಶೂಟಿಂಗ್ ಸ್ಥಳಗಳನ್ನು ಫೈನಲ್ ಮಾಡುವುದಾಗಿ ತಿಳಿಸಿದ್ದಾರೆ.

ಕುತೂಹಲಕಾರಿಯಾಗಿ ಮುಂದಿನ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಸತ್ಯ ಪ್ರಕಾಶ್ ನಟಿಸಲಿದ್ದಾರೆ. ಕಥೆಯು ಹೆಚ್ಚಾಗಿ ನನ್ನ ವೈಯಕ್ತಿಕ ಅನುಭವಗಳನ್ನು ಆಧರಿಸಿರುವುದರಿಂದ, ಸಿನಿಮಾ ತಂಡವು  ಪ್ರಮುಖ ಪಾತ್ರಗಳಲ್ಲಿ ಒಂದಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತೇನೆ ಎಂದು ಭಾವಿಸಿದೆ ಎಂದು ಸತ್ಯ ಹೇಳುತ್ತಾರೆ.

ಈ ಚಿತ್ರದಲ್ಲಿ ರಾಮ ರಾಮಾ ರೇ ನಟರಾದ ನಟರಾಜ್ ಎಸ್ ಭಟ್ ಮತ್ತು ಧರ್ಮಣ್ಣ ಎಸ್ ಕಡೂರ್ ಅವರ ಜೊತೆ ಸತ್ಯ ಒಂದಾಗಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದಲ್ಲಿ ವಾಸುಕಿ ವೈಭವ್ ಮತ್ತು ಲವಿತ್ ತಾಂತ್ರಿಕ ತಂಡದಲ್ಲಿ ಇರಲಿದ್ದಾರೆ. "ಪ್ರಾಜೆಕ್ಟ್‌ಗಾಗಿ ನಾನು ಹೊಸಬರನ್ನು ಸಹ ಆಯ್ಕೆ ಮಾಡಲಿದ್ದೇನೆ ಮತ್ತು ಪ್ರಸ್ತುತ ಆಯ್ಕೆ ಪ್ರಕ್ರಿಯೆಯು ನಡೆಯುತ್ತಿದೆ" ಎಂದು ಸತ್ಯ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel