ಕಂಗನಾ ರಣಾವತ್ 
ಸಿನಿಮಾ ಸುದ್ದಿ

ಅದ್ಭುತ ಅನುಭವ: 'ಕಾಂತಾರ' ನೋಡಿ ರಿಷಬ್ ಶೆಟ್ಟಿಗೆ ಹ್ಯಾಟ್ಸ್ ಆಫ್​ ಎಂದ ಕಂಗನಾ ರಣಾವತ್

ಕುಟುಂಬ ಸಮೇತ ಕಾಂತಾರ ಚಿತ್ರವನ್ನು ನೋಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ರಿಷಬ್ ಶೆಟ್ಟಿಯವರನ್ನು ಕೊಂಡಾಡಿದ್ದಾರೆ.

ಬೆಂಗಳೂರು: ಕುಟುಂಬ ಸಮೇತ ಕಾಂತಾರ ಚಿತ್ರವನ್ನು ನೋಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ರಿಷಬ್ ಶೆಟ್ಟಿಯವರನ್ನು ಕೊಂಡಾಡಿದ್ದಾರೆ. 

ಚಿತ್ರ ನೋಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ವಿಡಿಯೋ ಮಾಡಿ ಕಂಗನಾ ರಣಾವತ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

'ನಾನು ಕುಟುಂಬದವರ ಜೊತೆ ಕಾಂತಾರ ಸಿನಿಮಾ ನೋಡಿ ಬಂದೆ. ಈಗಲೂ ನನಗೆ ನಡುಕ ಬರುತ್ತಿದೆ. ಅದ್ಭುತ ಅನುಭವ. ರಿಷಬ್ ಶೆಟ್ಟಿ ಅವರೇ ನಿಮಗೆ ಹ್ಯಾಟ್ಸ್ ಆಫ್​ ಎಂದು ಹೇಳಿದ್ದಾರೆ.

ಬರವಣಿಗೆ, ನಿರ್ದೇಶನ, ನಟನೆ, ಆ್ಯಕ್ಷನ್ ಎಲ್ಲವೂ ಬ್ರಿಲಿಯಂಟ್. ನಂಬೋಕೆ ಸಾಧ್ಯವಾಗುತ್ತಿಲ್ಲ. ಸಂಪ್ರದಾಯ, ಜಾನಪದ, ಸ್ಥಳೀಯ ಸಮಸ್ಯೆಗಳ ಉತ್ತಮ ಮಿಶ್ರಣವೇ ಈ ಕಾಂತಾರ. ಸಿನಿಮಾ ಎಂದರೆ ಇದು. ಇಂತಹ ಸಿನಿಮಾವನ್ನು ನಾವು ಈವರೆಗೆ ನೋಡಿಲ್ಲ ಎಂದು ಹೇಳುವುದನ್ನು ನಾನು ಕೇಳಿದೆ. ಹೀಗಾಗಿ ಸಿನಿಮಾ ನೋಡುವ ಕುತೂಹಲ ನನಗೆ ಇನ್ನಷ್ಟು ಹೆಚ್ಚಾಯಿತು. ಇಂತಹ ಸಿನಿಮಾ ಮಾಡಿದ್ದಕ್ಕೆ ಇಡೀ ತಂಡಕ್ಕೆ ನನ್ನ ಅಭಿನಂದನೆಗಳು. ಒಂದು ವಾರಗಳ ಕಾಲ ಈ ಹ್ಯಾಂಗೋವರ್​ನಿಂದ ಹೊರಬರಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel