ಅವಳಿ ಮಕ್ಕಳ ಜೊತೆ ನಯನಾತಾರಾ 
ಸಿನಿಮಾ ಸುದ್ದಿ

ಅವಳಿ ಮಕ್ಕಳ ಪೂರ್ಣ ಹೆಸರು ಬಹಿರಂಗಪಡಿಸಿದ ನಟಿ ನಯನತಾರಾ!

ಕುಟುಂಬ ಮತ್ತು ಸಿನಿಮಾ ಎರಡರ ಕಡೆಗೂ ನಟಿ ನಯನತಾರಾ  ಅವರು ಗಮನ ಹರಿಸುತ್ತಿದ್ದಾರೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ

ಕುಟುಂಬ ಮತ್ತು ಸಿನಿಮಾ ಎರಡರ ಕಡೆಗೂ ನಟಿ ನಯನತಾರಾ ಅವರು ಗಮನ ಹರಿಸುತ್ತಿದ್ದಾರೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ. 2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್​ ಶಿವನ್ ಅವಳಿ ಗಂಡು ಮಕ್ಕಳನ್ನು ಪಡೆದರು.

ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಮದುವೆ ಆದಾಗಿನಿಂದಲೂ ಭಾರೀ ಸುದ್ದಿಯಲ್ಲಿದ್ದಾರೆ. ಮುದ್ದು ಮಕ್ಕಳ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳ ಶೂಟಿಂಗ್​ನಲ್ಲಿಯೂ ನಯನತಾರಾ ಬ್ಯುಸಿ ಆಗಿದ್ದಾರೆ.

ಚೆನ್ನೈನಲ್ಲಿ ಇತ್ತೀಚೆಗೆ ಆಯೋಜಿಸಲಾದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ನಟಿ ನಯನತಾರಾ ವೇದಿಕೆಯಲ್ಲಿ ತನ್ನ ಇಬ್ಬರು ಪುತ್ರರ ಪೂರ್ಣ ಹೆಸರನ್ನು ಹಂಚಿಕೊಂಡಿದ್ದಾರೆ. ಮೊದಲ ಮಗುವಿನ ಹೆಸರು "ಉಯಿರ್ ರುದ್ರೋನಿಲ್ ಎನ್ ಶಿವನ್" ಮತ್ತು ಎರಡನೇ ಮಗುವಿನ ಹೆಸರು "ಉಲಗ್ ಧೈವೇಗ್ ಎನ್ ಶಿವನ್" ಎಂದು ಬಹಿರಂಗಪಡಿಸಿದ್ದಾರೆ.

ಜೂನ್ 9, 2022 ರಂದು ಮಹಾಬಲಿಪುರಂನ ರೆಸಾರ್ಟ್‌ನಲ್ಲಿ ಸಾಂಪ್ರದಾಯಿಕ ಹಿಂದೂ ಶೈಲಿಯಲ್ಲಿ ವಿವಾಹವಾದ ದಂಪತಿಗಳು ಅಕ್ಟೋಬರ್ 9 ರಂದು ಅವಳಿ ಗಂಡು ಮಕ್ಕಳನ್ನು ದತ್ತು ಪಡೆದಿದ್ದರು. ಇದರ ಕುರಿತು ಅನೇಕ ವಿರೋಧ ಪ್ರತಿಕ್ರಿಯೆಗಳು ಬಂದಿದ್ದು, ಅದರಿಂದಾಗಿ ನಟಿ ನಯನತಾರಾ ದಂಪತಿಗಳು ನ್ಯಾಯಾಲಯದ ಟೀಕೆಗೆ ಒಳಗಾಗಿದ್ದರು, ನಂತರ ಸರಿಯಾದ ದಾಖಲೆಗಳಿಂದ ಎಲ್ಲವನ್ನು ಬಗೆಹರಿಸಿಕಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ