ಅನುಪಮ್ ಖೇರ್ ಮತ್ತು ಶಿವಣ್ಣ 
ಸಿನಿಮಾ ಸುದ್ದಿ

'ಲೆಜೆಂಡ್ಸ್’ ಮತ್ತು ‘ಥೆಸ್ಪಿಯನ್ಸ್’ ಎಂಬ ಪದ ನನಗೆ ಇಷ್ಟವಿಲ್ಲ; ನಾನು ಯಾವಾಗಲೂ ಹೊಸಬನಂತೆ ಕೆಲಸ ಮಾಡುತ್ತೇನೆ: ಅನುಪಮ್ ಖೇರ್

ಶ್ರೀನಿ ನಿರ್ದೇಶನದ ಶಿವರಾಜಕುಮಾರ್ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಅನುಪಮ್ ಖೇರ್ ಅವರ 535 ನೇ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅವರ ಚೊಚ್ಚಲ ಸಿನಿಮಾವಾಗಿದೆ.

ಶ್ರೀನಿ ನಿರ್ದೇಶನದ ಶಿವರಾಜಕುಮಾರ್ ಘೋಸ್ಟ್ ಸಿನಿಮಾದಲ್ಲಿ ಅನುಪಮ್ ಖೇರ್ ನಟಿಸುತ್ತಿದ್ದಾರೆ. ಅನುಪಮ್ ಖೇರ್ ಅವರ 535 ನೇ ಚಿತ್ರ ಕನ್ನಡ ಚಿತ್ರರಂಗದಲ್ಲಿ ಅವರ ಚೊಚ್ಚಲ ಸಿನಿಮಾವಾಗಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತನಾಡಿದ ಅನುಪಮ್ ಖೇರ್, ಕನ್ನಡ ಮತ್ತು ಗುಜರಾತಿ ಹೊರತುಪಡಿಸಿ ಭಾರತೀಯ ಚಿತ್ರರಂಗದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಕೆಲಸ ಮಾಡಿದ್ದೇನೆ ಎಂದು ಬಹಿರಂಗಪಡಿಸಿದರು. ಈಗ ನನ್ನನ್ನು ಕನ್ನಡ ಚಿತ್ರರಂಗಕ್ಕೆ ಕರೆದಿರುವುದು ಖುಷಿ ತಂದಿದೆ ಎಂದಿದ್ದಾರೆ.

ಇದುವರೆಗೂ ಕನ್ನಡದಲ್ಲಿ ನನಗೆ ಪಾತ್ರಗಳನ್ನು ನೀಡಲಿಲ್ಲ. ಒಂದು ದಶಕದ ಹಿಂದೆ ಎರಡು ಸಿನಿಮಾಗಳಿಗೆ ಆಫರ್ ಬಂದಿತ್ತು, ಆದರೆ ಕಾರ್ಯರೂಪಕ್ಕೆ ಬರಲಿಲ್ಲ 'ಸರಿಯಾದ ಸಮಯಕ್ಕೆ ಸರಿಯಾಗಿ ನಡೆಯುತ್ತದೆ' ಎಂಬ ಗಾದೆಯನ್ನು ನಾನು  ದೃಢವಾಗಿ ನಂಬುತ್ತೇನೆ ಎಂದು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಸ್ವಲ್ಪ ಸಮಯ ಹಿಡಿಯಿತು. ಆದರೆ ಪ್ರತಿಯೊಂದಕ್ಕೂ ಒಂದು ಆರಂಭವಿದೆ, ಹೀಗಾಗಿ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸಿದ ಘೋಸ್ಟ್  ಮೂಲಕ  ಸ್ಯಾಂಡಲ್‌ವುಡ್‌ ಗೆ ನನ್ನ ಮೊದಲ ಎಂಟ್ರಿಯಾಗಿದೆ ಎಂದರು.

ಕೆಜಿಎಫ್ ಮತ್ತು ಕಾಂತಾರದಂತಹ ಬ್ಲಾಕ್‌ಬಸ್ಟರ್‌ಗಳು ಕನ್ನಡ ಸಿನಿಮಾದಲ್ಲಿ ನಟಿಸಲು ಆಸಕ್ತಿ ಹುಟ್ಟಿಸಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ಚಿತ್ರಗಳು ಅದ್ಭುತವಾದವು, ನನ್ನ ಮನಸ್ಸಿನಲ್ಲಿ ಮೂಡಿದ್ದ ಪಾತ್ರವನ್ನು ಶ್ರೀನಿ ಬರೆದಿದ್ದರು, ಹೀಗಾಗಿ ಘೋಸ್ಟ್ ಸಿನಿಮಾ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ. ಶ್ರೀನಿ ನನ್ನ ಜೊತೆ ಮಾತನಾಡಿದ್ದು ಹಾಗೂ ಅವರು ಕಥೆ ನಿರೂಪಿಸಿದ ರೀತಿ ನನಗೆ ತುಂಬಾ ಹಿಡಿಸಿತುನನ್ನ ಪಾತ್ರ ಮತ್ತು ಚಿತ್ರದ ಬಗ್ಗೆ ವಿವರಗಳನ್ನು ನೀಡಲು ನನಗೆ ಸಾಧ್ಯವಾಗದಿದ್ದರೂ, ಆಸಕ್ತಿದಾಯಕ ಪ್ರಾಜೆಕ್ಟ್ ಭಾಗವಾಗಲು ನನಗೆ ಸಂತೋಷವಾಯಿತು ಎಂದು ಅವರು ಹೇಳಿದ್ದಾರೆ.

ಒಂದು ಕಾಲದಲ್ಲಿ  ಆಕ್ಷನ್, ಹಾಸ್ಯ ಮತ್ತು ಕೌಟುಂಬಿಕ, ವಾಣಿಜ್ಯ ಅಂಶಗಳೊಂದಿಗೆ  ಸಿನಿಮಾ ಮನರಂಜನೆಗೆ ಮಾತ್ರ ಸೀಮಿತವಾಗಿದ್ದತ್ತು. ಆದರೆ ಈಗ ನಿರ್ದೇಶಕರು ಥ್ರಿಲ್ಲರ್‌ಗಳಂತಹ ಪ್ರಕಾರಗಳನ್ನು ಪ್ರಯೋಗಿಸುತ್ತಿದ್ದಾರೆ.  ಈ 75 ವರ್ಷಗಳಲ್ಲಿ ಭಾರತೀಯ ಸಿನಿಮಾ ವಿಕಸನಗೊಂಡಿದೆ, ನಾವು ಈಗ ಆರಾಮದಾಯಕ ಸ್ಥಾನವನ್ನು ತಲುಪಿದ್ದೇವೆ.

ಹಿಂದಿನ ಕಾಲದಲ್ಲಿ ಸಿನಿಮಾಗೆ ಕಡಿಮೆ ಆದ್ಯತೆ ಸಿಗುತ್ತಿತ್ತು. ಈಗ ವಿಷಯಗಳು ಬದಲಾಗಿವೆ. ಕೋವಿಡ್ ಸಮಯದಲ್ಲಿ, ಜನರು ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಸಿನಿಮಾಗಳಿಗೆ ಕೊಂಡಿಯಾಗಿರುತ್ತಿದ್ದರು. ಜನರು ಮತ್ತು ಅವರ ಅಭಿರುಚಿಗಳು ಬದಲಾಗಿವೆ ಎಂದು ಖೇರ್ ಮಾಹಿತಿ ನೀಡಿದ್ದಾರೆ.

ಸಿನಿಮಾದ ಬಗ್ಗೆ ಪ್ರೇಕ್ಷಕರ ದೃಷ್ಟಿಕೋನವು ಬದಲಾಗುತ್ತಲೇ ಇರುತ್ತದೆ ಮತ್ತು ಸಿನಿಮಾ ಇಂಡಸ್ಟ್ರಿ , ನಿರ್ದೇಶಕರು, ನಿರ್ಮಾಪಕರು, ನಟರು ಮತ್ತು ತಂತ್ರಜ್ಞರು - ಮರುಶೋಧಿಸುತ್ತಲೇ ಇರಬೇಕಾದ ಕಾರಣಗಳಲ್ಲಿ ಇದು ಒಂದು.

ಈ ಅಂಶದಲ್ಲಿ ಹಿಂದಿ ಚಿತ್ರರಂಗ ಒಮ್ಮೊಮ್ಮೆ ತತ್ತರಿಸಿ ಹೋಗಿದ್ದರೂ, ಬೇರೂರಿರುವ ಕಥೆಗಳನ್ನು ಸೆರೆಹಿಡಿಯುವಲ್ಲಿ ಪ್ರಾದೇಶಿಕ ಸಿನಿಮಾ ಪ್ರಮುಖ ಪಾತ್ರ ವಹಿಸಿದೆ. ಆದರೆ ವಿಷಯಗಳು ಸಹಜ ಸ್ಥಿತಿಗೆ ಮರಳಿರುವುದು ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.

ನಾನು ನನ್ನನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ‘ಲೆಜೆಂಡ್ಸ್’ ಮತ್ತು ‘ಥೆಸ್ಪಿಯನ್ಸ್’ ಎಂಬ ಪದ ನನಗೆ ಇಷ್ಟವಿಲ್ಲ. ನಾನು ಯಾವಾಗಲೂ ಹೃದಯದಲ್ಲಿ ಹೊಸಬನಾಗಿದ್ದೇನೆ ಮತ್ತು ಈ ಆಲೋಚನೆಯು ನನ್ನನ್ನು ಜೀವಂತವಾಗಿರಿಸುತ್ತದೆ. ಘೋಸ್ಟ್ ನನ್ನ 535ನೇ ಚಿತ್ರ, ಆದರೆ ಇಷ್ಟು ಸಂಖ್ಯೆಯಲ್ಲಿ ಕೆಲಸ ಮಾಡಿದ ನಟನಂತೆ ನಾನು ವರ್ತಿಸುವುದಿಲ್ಲ ಎಂದು ಹೇಳಿದ್ದಾರೆ.

ನಾನು ನನ್ನ ಸ್ನೇಹಿತರೊಂದಿಗೆ ಥಿಯೇಟರ್‌ನಲ್ಲಿ ಕಾಂತಾರ ಮತ್ತು ಆರ್ ಆರ್ ಆರ್ ಸಿನಿಮಾ ನೋಡಿದೆ. ನಾನು ಇತರ ಚಿತ್ರಗಳನ್ನು ನಿಯಮಿತವಾಗಿ ನೋಡದಿದ್ದರೂ ನಾನು ದಕ್ಷಿಣ ಭಾರತದ ಚಲನಚಿತ್ರಗಳನ್ನು ನೋಡುತ್ತೇನೆ. ವಾಸ್ತವವಾಗಿ, ನಾನು ನನ್ನ 200 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನೋಡಿಲ್ಲ ಎಂದು ಅವರು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT