ಕಬ್ಜಾ ಚಿತ್ರದ ಫೋಸ್ಟರ್ 
ಸಿನಿಮಾ ಸುದ್ದಿ

'ಕಬ್ಜಾ' ವಿದೇಶ ಪ್ರದರ್ಶನದ ಹಕ್ಕಿಗೆ ಭಾರೀ ಬೇಡಿಕೆ

ಬಹುನಿರೀಕ್ಷಿತ ಸ್ಯಾಂಡಲ್ ವುಡ್ ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜಾ'ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನವಾದ ಮಾರ್ಚ್ 17 ರಂದು ಬಿಡುಗಡೆ ಮಾಡಲು ನಿರ್ದೇಶಕ ಆರ್. ಚಂದ್ರು ಸಜ್ಜಾಗಿದ್ದಾರೆ.  ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಈ ಬಹುಭಾಷಾ ಚಿತ್ರದಲ್ಲಿ  ಸುದೀಪ್ ಪ್ರಮುಖ ಪಾತ್ರದಲ್ಲಿದ್ದಾರೆ

ಬಹುನಿರೀಕ್ಷಿತ ಸ್ಯಾಂಡಲ್ ವುಡ್ ನ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜಾ'ಪುನೀತ್ ರಾಜ್ ಕುಮಾರ್ ಅವರ ಜನ್ಮ ದಿನವಾದ ಮಾರ್ಚ್ 17 ರಂದು ಬಿಡುಗಡೆ ಮಾಡಲು ನಿರ್ದೇಶಕ ಆರ್. ಚಂದ್ರು ಸಜ್ಜಾಗಿದ್ದಾರೆ. ಉಪೇಂದ್ರ ನಾಯಕ ನಟನಾಗಿ ಅಭಿನಯಿಸಿರುವ ಈ ಬಹುಭಾಷಾ ಚಿತ್ರದಲ್ಲಿ  ಸುದೀಪ್ ಪ್ರಮುಖ ಪಾತ್ರದಲ್ಲಿದ್ದಾರೆ.  

ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಗೆ ಹೆಚ್ಚಿನ ಬೇಡಿಕೆಯಿದೆ. ನಟ ನಿತಿನ್ ಅವರ ತಂದೆ, ಹೆಸರಾಂತ ವಿತರಕ ಸುಧಾಕರ್ ರೆಡ್ಡಿ ಕಬ್ಜಾದ ತೆಲುಗು ಹಕ್ಕುಗಳನ್ನು ಪಡೆದಿದ್ದು,  ರುಚಿರಾ ಎಂಟರ್‌ ಟೈನ್‌ ಮೆಂಟ್ಸ್ ಮತ್ತು ಎನ್ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ.

ಫೆಬ್ರವರಿ 4 ರಂದು ಹೈದ್ರಾಬಾದ್ ನಲ್ಲಿ ಕಾರ್ಯಕ್ರಮ ಆಯೋಜಿಸಲು ವಿತರಕರು ಯೋಜಿಸಿದ್ದು, ಅಲ್ಲಿ ಚಿತ್ರದ ಮೊದಲ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಲಾಗುತ್ತದೆ. ಈ ಕಾರ್ಯಕ್ರಮಕ್ಕೆ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅಥವಾ ಸೂಪರ್‌ಸ್ಟಾರ್ ಚಿರಂಜೀವಿ ಮುಖ್ಯ ಅತಿಥಿಯಾಗಿ ಭಾಗವಹಿಸುವ ಸಾಧ್ಯತೆಯಿದೆ. 

“ಕನ್ನಡ ಚಿತ್ರವೊಂದು ಈ ರೀತಿಯ ಬೇಡಿಕೆ ಸೃಷ್ಟಿಸುವುದು ಖಂಡಿತಾ ಒಳ್ಳೆಯ ಲಕ್ಷಣ. ಉತ್ತಮ ಕಂಟೆಂಟ್ ಮತ್ತು ಮೇಕಿಂಗ್‌ನಿಂದ ಮಾತ್ರ ಇದನ್ನು ಸಾಬೀತುಪಡಿಸಬಹುದು ಎಂದು ಚಂದ್ರು ಹೇಳುತ್ತಾರೆ. ಚಿತ್ರದ ಐದು ಹಾಡುಗಳನ್ನು ವಿವಿಧ ರಾಜ್ಯಗಳು  ಮತ್ತು ಎರಡು ಹಾಡುಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.

ಕಬ್ಜಾ 7 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಕೆಲವು ಭಾಷೆಗಳ ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿದ್ದು, ಉಳಿದ ಭಾಷೆಗಳಿಗೆ ಚಂದ್ರು ಮಾತುಕತೆ ನಡೆಸುತ್ತಿದ್ದಾರೆ. ಕೆಲವು ಭಾಷೆಗಳ ಡಿಜಿಟಲ್ ಹಕ್ಕುಗಳನ್ನು ಅಮೆಜಾನ್‌ಗೆ ಭಾರಿ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದ್ದು, ಈ ಕುರಿತು ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ನಿರ್ಮಾಪಕ ಮತ್ತು ನಿರ್ದೇಶಕರು ಹಂಚಿಕೊಳ್ಳಲಿದ್ದಾರೆ. 

ಕಬ್ಜಾ ಚಿತ್ರದಲ್ಲಿ ಉಪೇಂದ್ರ

ಭಾರತದ ಹೊರಗಡೆಯೂ "ಚಿತ್ರ ಬಿಡುಗಡೆಯಾಗುತ್ತದೆ ಮತ್ತು ವಿದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಂದ್ರು ತಿಳಿಸಿದ್ದಾರೆ. 20 ದೇಶಗಳ ವಿತರಕರು ತಮ್ಮ ತಮ್ಮ ನಗರಗಳಲ್ಲಿ ಕಬ್ಜಾ ಪ್ರದರ್ಶಿಸಲು ಮುಂದೆ ಬಂದಿದ್ದು, ಇಲ್ಲಿಯವರೆಗೆ 5 ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು. 1940-80ರ ನಡುವಿನ ಗ್ಯಾಂಗ್‌ಸ್ಟರ್ ಕಥೆ ಆಧಾರಿತ ಕಬ್ಜಾದಲ್ಲಿ ಉಪೇಂದ್ರ ಭೂಗತ ಜಗತ್ತಿನ ಡಾನ್‌ ಆಗಿ ಕಾಣಿಸಿಕೊಂಡಿದ್ದಾರೆ. 

ಶ್ರಿಯಾ ಸರನ್ ನಟಿಸಿರುವ ಈ ಚಿತ್ರವನ್ನು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಿರ್ಮಿಸಲಾದ ಬೃಹತ್ ಸೆಟ್‌ಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಗಿದೆ. ಚಂದ್ರು ಅವರ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ, ಅಲಂಕಾರ್ ಪಾಂಡಿಯನ್ ಸಹಯೋಗದೊಂದಿಗೆ ಚಿತ್ರವನ್ನು ಎಂಟಿಬಿ ನಾಗರಾಜ್ ಅವರು ಪ್ರಸ್ತುತಪಡಿಸಲಿದ್ದಾರೆ. ಕಬ್ಜಾ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಮತ್ತು ಎಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ.

ಬಹುಭಾಷಾ ಚಿತ್ರದಲ್ಲಿ ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ಜಗಪತಿ ಬಾಬು, ಡ್ಯಾನಿಶ್ ಅಕ್ತರ್ ಸೈಫಿ, ಪ್ರದೀಪ್ ರಾವತ್, ಕಬೀರ್ ದುಹಾನ್ ಸಿಂಗ್ ಜಯಪ್ರಕಾಶ್ ಮತ್ತು ಕೋಟಾ ಶ್ರೀನಿವಾಸ್ ಮುಂತಾದ  ತಾರಾಗಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT