ಹೊಯ್ಸಳ ಚಿತ್ರದ ಟೀಸರ್ 
ಸಿನಿಮಾ ಸುದ್ದಿ

ಡಾಲಿ ಧನಂಜಯ್‌ ಅಭಿನಯದ 'ಹೊಯ್ಸಳ' ಟೀಸರ್ ಬಿಡುಗಡೆ

ನಟ ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, ‘ಹೊಯ್ಸಳ’ ಟೀಸರ್ ಇಂದು ಬಿಡುಗಡೆಯಾಗಿದೆ. 

ಬೆಂಗಳೂರು: ನಟ ಡಾಲಿ ಧನಂಜಯ ಅಭಿನಯದ ಬಹು ನಿರೀಕ್ಷಿತ ಚಿತ್ರ, ‘ಹೊಯ್ಸಳ’ ಟೀಸರ್ ಇಂದು ಬಿಡುಗಡೆಯಾಗಿದೆ. 

ಸ್ಯಾಂಡಲ್ ವುಡ್ ರಫ್ ಅಂಡ್ ಟಫ್ ಪೊಲೀಸ್ ಹೀರೋಗಳ ಸಾಲಿಗೆ ಇದೀಗ ಡಾಲಿ ಸೇರ್ಪಡೆಯಾಗಿದ್ದು, ಹೊಯ್ಸಳ ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರವನ್ನು ನಟ ಧನಂಜಯ  ನಿರ್ವಹಿಸಿದ್ದಾರೆ. 

ಈ ಹಿಂದೆ ಸಾಕಷ್ಟು ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದ ಕನ್ನಡದ ನಟ ಕಿಚ್ಚ ಸುದೀಪ, ತೆಲುಗು ನಟ ಅದಿವಿ ಶೇಷ್, ಮಲಯಾಳದ ನಟ ಪೃಥ್ವಿರಾಜ್ ಹಾಗೂ ತಮಿಳು ನಟ ಕಾರ್ತಿ ಈ ಚಿತ್ರದ ಟೀಸರ್‌ ಬಿಡುಗಡೆ ಮಾಡಿದರು. ಆಫೀಸರ್ ಗುರುದೇವ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಧನಂಜಯ್ ರನ್ನು ಹಾರೈಸಿದರು.

ಚಿತ್ರವು ಇದೇ ಮಾರ್ಚ್.30ರಂದು ಬಿಡುಗಡೆಯಾಗಲಿದ್ದು ಇದು ಡಾಲಿ ಧನಂಜಯ್‌ ರ 25ನೇ ಚಿತ್ರವಾಗಿದೆ.  ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಚಿತ್ರ ನಿರ್ಮಾಣ ಮಾಡಿದ್ದು, ಕೆ.ಆರ್.ಜಿ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಬ್ಯಾನರ್‌ನಡಿ  ಕಾರ್ತಿಕ್ ಹಾಗೂ ಯೋಗಿ ಜಿ ರಾಜ್ ರವರು ಚಿತ್ರವನ್ನು ನಿರ್ಮಿಸಿದ್ದಾರೆ.  ವಿಜಯ್.ಎನ್ ರವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ರವರು ಸಂಗೀತ ಸಂಯೋಜಿಸಿದ್ದು, ಕಾರ್ತಿಕ್ ಎಸ್ ರವರು ಛಾಯಾಗ್ರಾಹಕರಾಗಿದ್ಡಾರೆ.

ಸಂಕಲನ ದೀಪು ಎಸ್ ಕುಮಾರ್, ಸಂಭಾಷಣೆ ಮಾಸ್ತಿ ಅವರದು. ಧನಂಜಯ ಹಾಗೂ ಅಮೃತ ಅಯ್ಯಂಗಾರ್ ಜೋಡಿ ಈ ಚಿತ್ರ ಮೂಡಿಬಂದಿದೆ. ಅಚ್ಯುತಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ ಹಾಗೂ ನಾಗಭೂಷಣ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ