ಘೋಸ್ಟ್ ಸಿನಿಮಾದಲ್ಲಿ ನಟ ಶಿವರಾಜ್‌ಕುಮಾರ್ 
ಸಿನಿಮಾ ಸುದ್ದಿ

'ಘೋಸ್ಟ್' ಮೋಷನ್ ಪೋಸ್ಟರ್ ಬಿಡುಗಡೆ: ರೆಟ್ರೋ ಅವತಾರದಲ್ಲಿ ಕಾಣಿಸಿಕೊಂಡ ನಟ ಶಿವರಾಜ್‌ಕುಮಾರ್

ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರ ಮೊದಲ ಪ್ಯಾನ್-ಇಂಡಿಯಾ ಚಿತ್ರ 'ಘೋಸ್ಟ್' ಸ್ಫೋಟಕ ಆ್ಯಕ್ಷನ್ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು 'ಬೀರ್‌ಬಲ್‌' ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ತಮ್ಮದೇ ಆದ ಕೀರ್ತಿಯನ್ನು ಗಳಿಸಿರುವ ಶ್ರೀನಿ ನಿರ್ದೇಶಿಸುತ್ತಿದ್ದಾರೆ.

ಬೆಂಗಳೂರು: ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರ ಮೊದಲ ಪ್ಯಾನ್-ಇಂಡಿಯಾ ಚಿತ್ರ 'ಘೋಸ್ಟ್' ಸ್ಫೋಟಕ ಆ್ಯಕ್ಷನ್ ಸಿನಿಮಾವಾಗಿ ರೂಪುಗೊಳ್ಳುತ್ತಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು 'ಬೀರ್‌ಬಲ್‌' ನಂತಹ ಬ್ಲಾಕ್ ಬಸ್ಟರ್ ಚಿತ್ರಗಳ ಮೂಲಕ ತಮ್ಮದೇ ಆದ ಕೀರ್ತಿಯನ್ನು ಗಳಿಸಿರುವ ಶ್ರೀನಿ ನಿರ್ದೇಶಿಸುತ್ತಿದ್ದಾರೆ.

ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದ ಮೋಷನ್ ಪೋಸ್ಟರ್‌ ಅನ್ನು ಹೊಸ ವರ್ಷದ ಮುನ್ನಾದಿನ ಚಿತ್ರತಂಡ ಅನಾವರಣಗೊಳಿಸಿದೆ.

ಘೋಸ್ಟ್ ಸಿನಿಮಾದ ಪೋಸ್ಟರ್

ಅರ್ಜುನ್ ಜನ್ಯ ಅವರ ಸಂಗೀತ ಮತ್ತು ಪ್ರಭಾವಶಾಲಿ ಸಾಹಿತ್ಯದಿಂದ ಮಿಡಿಯುವ ಹಿನ್ನೆಲೆಯಲ್ಲಿ ಪೂರಕವಾದ ತಂಪಾದ ಅನಿಮೇಷನ್ ಅನ್ನು ಮೋಷನ್ ಪೋಸ್ಟರ್ ಒಳಗೊಂಡಿದೆ. ಅಂತಿಮವಾಗಿ, ಶಿವಣ್ಣ ಅವರನ್ನು ಅವರ ವಿಂಟೇಜ್ ಅವತಾರದಲ್ಲಿ ಬಹಿರಂಗಪಡಿಸಲಾಗಿದೆ.

'ಘೋಸ್ಟ್' ಒಂದು ಆಕ್ಷನ್ ಹೀಸ್ಟ್ ಥ್ರಿಲ್ಲರ್ ಆಗಿದ್ದು, ಇದು ಇತ್ತೀಚೆಗೆ ತನ್ನ ಎರಡನೇ ಶೆಡ್ಯೂಲ್ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ಮೈಸೂರಿನಲ್ಲಿ 6 ಕೋಟಿ ರೂಪಾಯಿ ಮೌಲ್ಯದ ಬೃಹತ್ ಜೈಲು ಒಳಾಂಗಣ ಸೆಟ್‌ನಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಈ ಶೆಡ್ಯೂಲ್‌ನಲ್ಲಿ ಶಿವರಾಜಕುಮಾರ್, ಜಯರಾಮ್ ಮತ್ತು ಪ್ರಶಾಂತ್ ನಾರಾಯಣನ್ ಭಾಗವಹಿಸಿದ್ದರು.

ಮೂರನೇ ಶೆಡ್ಯೂಲ್‌ ಫೆಬ್ರುವರಿ ಮೊದಲ ವಾರದಿಂದ ಆರಂಭವಾಗಲಿದೆ. ಮೂರನೇ ಶೆಡ್ಯೂಲ್‌ನಲ್ಲಿ ಪರಿಚಯದ ಭಾಗಗಳು ಮತ್ತು ಕ್ಲೈಮ್ಯಾಕ್ಸ್ ಭಾಗಗಳನ್ನು ಚಿತ್ರೀಕರಿಸಲಾಗುತ್ತದೆ. ಈ ಸೀಕ್ವೆನ್ಸ್‌ಗಳಿಗಾಗಿ ಬೆಂಗಳೂರಿನಲ್ಲಿ ಅದ್ಧೂರಿ ಸೆಟ್‌ ಹಾಕಲಾಗುತ್ತಿದೆ.

ಡಾ. ಶಿವರಾಜಕುಮಾರ್‌ ಅಭಿನಯದ ಘೋಸ್ಟ್‌ ಚಿತ್ರದಲ್ಲಿ ಜಯರಾಮ್‌ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ, ಪ್ರಶಾಂತ್ ನಾರಾಯಣನ್, ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ನಿರ್ದೇಶಕ ಶ್ರೀನಿ ಅವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಮಾಸ್ತಿ ಹಾಗೂ ಪ್ರಸನ್ನ ಅವರದು. ಕೆಜಿಎಫ್ ಖ್ಯಾತಿಯ ಶಿವಕುಮಾರ್ ಅವರ ಕಲಾಕೃತಿ ಮತ್ತು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಟಾಪ್ ಪ್ರೊಡಕ್ಷನ್ ಹೌಸ್ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸಿರುವ 'ಘೋಸ್ಟ್' ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT