ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಟಿವಿಯಲ್ಲಿ 'ಕಾಂತಾರ' ಸಿನಿಮಾ ಪ್ರಸಾರ ಡೇಟ್ ಫಿಕ್ಸ್ : ಸ್ಟಾರ್ ಸುವರ್ಣ ಚಾನೆಲ್ ಗೆ ದಂತಕತೆ ಪ್ರಸಾರದ ಹಕ್ಕು!

ಇಡೀ ದೇಶವೇ ಕೊಂಡಾಡಿದ ಕನ್ನಡ ಸಿನಿಮಾ ‘ಕಾಂತಾರ ಸಿನಿಮಾ ಶೀಘ್ರದಲ್ಲೇ ಟಿವಿಯಲ್ಲಿ ಪ್ರಸಾರವಾಗಲಿದೆ. ‘ಸ್ಟಾರ್​ ಸುವರ್ಣ’ ವಾಹಿನಿಯು ‘ಕಾಂತಾರ’ ಚಿತ್ರದ ಪ್ರಸಾರ ಹಕ್ಕುಗಳನ್ನು ಕೊಂಡುಕೊಂಡಿದೆ.

ಕಾಂತಾರ ಸಿನಿಮಾ ಸ್ಟಿಲ್
Shilpa D
Updated On : 9 Jan 2023, 2:17 pm

ಇಡೀ ದೇಶವೇ ಕೊಂಡಾಡಿದ ಕನ್ನಡ ಸಿನಿಮಾ ‘ಕಾಂತಾರ ಸಿನಿಮಾ ಶೀಘ್ರದಲ್ಲೇ  ಟಿವಿಯಲ್ಲಿ ಪ್ರಸಾರವಾಗಲಿದೆ. ಹೊಂಬಾಳೆ ಫಿಲ್ಮ್ಸ್​​ಬ್ಯಾನರ್​ ಅಡಿಯಲ್ಲಿ ಮೂಡಿಬಂದ ‘ಕಾಂತಾರ’ ಚಿತ್ರದಲ್ಲಿ ತುಳುನಾಡಿನ ಸಂಸ್ಕೃತಿಯಾದ ಕಂಬಳ, ಭೂತಕೋಲ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ.

ರಿಷಬ್​ ಶೆಟ್ಟಿ ಅವರಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್​ ಕುಮಾರ್​, ಪ್ರಮೋದ್​​ ಶೆಟ್ಟಿ, ಕಿಶೋರ್​ ಮುಂತಾದವರು ಅಭಿನಯಿಸಿದ್ದಾರೆ.

‘ಸ್ಟಾರ್​ ಸುವರ್ಣ’ ವಾಹಿನಿಯು ‘ಕಾಂತಾರ’ ಚಿತ್ರದ ಪ್ರಸಾರ ಹಕ್ಕುಗಳನ್ನು ಕೊಂಡುಕೊಂಡಿದೆ. ಜನವರಿ 15 ರಂದು ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಪ್ರಸಾರವಾಗಲಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಚಿತ್ರ ಪ್ರಸಾರವಾಗಲಿದೆ.

Advertisement

Advertisement

ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ‘ಕಾಂತಾರ’ ಸಿನಿಮಾ ದಾಖಲೆ ಮಾಡಿದ್ದಾಗಿದೆ. ಈಗ ಟಿವಿಯಲ್ಲಿ ಪ್ರಸಾರವಾದರೆ ದಾಖಲೆ ಮಟ್ಟದ ಟಿಆರ್​ಪಿ ಸಿಗುವುದು ಗ್ಯಾರಂಟಿ ಎಂದು ರಿಷಬ್​ ಶೆಟ್ಟಿ ಅಭಿಮಾನಿಗಳು ಭವಿಷ್ಯ ನುಡಿಯುತ್ತಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement