ಸಿನಿಮಾ ಸುದ್ದಿ

'ಆರ್ಕೆಸ್ಟ್ರಾ ಮೈಸೂರು'ನಲ್ಲಿ ಸಂಗೀತವೇ ನನ್ನ ಅತ್ಯುತ್ತಮ ಹೂಡಿಕೆ: ರಘು ದೀಕ್ಷಿತ್

Lingaraj Badiger

ನಟ 'ಡಾಲಿ' ಧನಂಜಯ ಸ್ನೇಹಿತರೆಲ್ಲಾ ಸೇರಿ ಮಾಡಿರುವ ಸಿನಿಮಾ 'ಆರ್ಕೆಸ್ಟ್ರಾ ಮೈಸೂರು' ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದ್ದು, ಸಂಗೀತ ಸಂಯೋಜಕ ರಘು ದೀಕ್ಷಿತ್ ಅವರಿಗೆ ಈ ಚಿತ್ರ ತುಂಬಾ ವಿಶೇಷವಾಗಿದೆ.

ರಘು ದೀಕ್ಷಿತ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾತ್ರವಲ್ಲದೆ ಸಿನಿಮಾಗೂ ಬೆಂಬಲ ನೀಡಿದ್ದಾರೆ. "ಈ ಚಿತ್ರಕ್ಕೆ ನಾನು ವಿಶಿಷ್ಟ ನಿರ್ಮಾಪಕ ಅಲ್ಲ. ಆ ಸಮಯದಲ್ಲಿ ಸಂಗೀತಗಾರನಿಗೆ ಬೇಕಾದ ಬಜೆಟ್ ಇರಲಿಲ್ಲ. ಆದರೆ, ಈ ಚಿತ್ರದ ವಿಷಯ ಆಕರ್ಷಕವಾಗಿರುವದರಿಂದ ನಾನು ಈ ಪ್ರಾಜೆಕ್ಟ್‌ನ ಭಾಗವಾಗಲು ಬಯಸಿದೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.

ಚಿತ್ರದ ಮತ್ತೋರ್ವ ನಿರ್ಮಾಪಕರಾಗಿರುವ ಅಶ್ವಿನ್ ವಿಜಯ್‌ಕುಮಾರ್ ಅವರು, ನಾನು ಚಿತ್ರಕ್ಕೆ ಸಂಗೀತ ನೀಡುತ್ತೇನೆ ಎಂದಾಗ ಅವರು, ಸಂಭಾವನೆ ಬದಲು ಚಿತ್ರದಲ್ಲಿ ಪಾಲು ನೀಡುತ್ತೇನೆ ಎಂದು ನನಗೆ ಆಫರ್ ನೀಡಿದರು. ಹೀಗಾಗಿ ಆರ್ಕೆಸ್ಟ್ರಾ ಮೈಸೂರು ಚಿತ್ರದಲ್ಲಿ ನನ್ನ ಸಂಗೀತವೇ ಬಂಡವಾಳವಾಗಿದ್ದು, ನನಗೆ ನಿರ್ಮಾಪಕರ ಹಣೆಪಟ್ಟಿ ಸಿಕ್ಕಿದೆ ಎಂದು ರಘು ದೀಕ್ಷಿತ್ ತಿಳಿಸಿದ್ದಾರೆ.

"ಮೈಸೂರಿಗಾಗಿ ಮತ್ತು ಮೈಸೂರಿಗರಿಂದ ಈ ಚಿತ್ರ ನಿರ್ಮಾಣವಾಗಿದೆ. ನನ್ನ ಹುಟ್ಟೂರಾದ ಮೈಸೂರಿನಲ್ಲಿ ಆರ್ಕೆಸ್ಟ್ರಾ ಸಂಸ್ಕೃತಿಯು ತುಂಬಾ ಜೀವಂತವಾಗಿದೆ. ಇದು ನಾನು ಬೆಳೆದು ಬಂದ ಸಂಸ್ಕೃತಿಯಾಗಿದೆ. ಹೀಗಾಗಿ ಈ ಚಿತ್ರದ ಭಾಗವಾಗಲು ನಾನು ಬಯಸಿದೆ ಎಂದು ದಿಕ್ಷೀತ್ ಹೇಳಿದ್ದಾರೆ.

ಸುನಿಲ್ ಮೈಸೂರು, ನಟ ಪೂರ್ಣಚಂದ್ರ ಸೇರಿದಂತೆ ಇಡೀ ತಂಡ ಮತ್ತು ಆರ್ಕೆಸ್ಟ್ರಾದ ಪ್ರತಿಯೊಂದು ಅಂಶ ಅಥವಾ ಜನರು ಇಲ್ಲಿದ್ದಾರೆ. ಚಿತ್ರದಲ್ಲಿ 15,000 ಮೈಸೂರಿಗರು ಭಾಗವಹಿಸಿದ್ದೆವು. ಇದೆಲ್ಲವೂ ನನಗೆ ವಿಶೇಷ. ಅಂತಹ ಸಂಗೀತ ಚಿತ್ರದ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ನಾನು ಹೆಮ್ಮೆಪಡುತ್ತೇನೆ ಮತ್ತು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

SCROLL FOR NEXT