ಬಾಡಿ ಬಿಲ್ಡರ್ ಜೋ ಲಿಂಡ್ನರ್​ 
ಸಿನಿಮಾ ಸುದ್ದಿ

'ಪೊಗರು’ ಚಿತ್ರದಲ್ಲಿ ನಟಿಸಿದ್ದ ಬಾಡಿ ಬಿಲ್ಡರ್​ ಅನುಮಾನಾಸ್ಪದ ಸಾವು!

ಬಾಡಿ ಬಿಲ್ಡಿಂಗ್​​ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್​ ನಿಧನರಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಕಬ್ಬಿಣದಂತಹ ದೇಹ ಹೊಂದಿದ್ದ ಅವರು ಏಕಾಏಕಿ ನಿಧನರಾಗಿರುವುದು ಅನುಮಾನಕ್ಕೆ ಕಾರಣ ಆಗಿದೆ.

ಬಾಡಿ ಬಿಲ್ಡಿಂಗ್​​ನಲ್ಲಿ ವಿಶ್ವ ವಿಖ್ಯಾತಿ ಪಡೆದಿದ್ದ ಜೋ ಲಿಂಡ್ನರ್​ ನಿಧನರಾಗಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು. ಕಬ್ಬಿಣದಂತಹ ದೇಹ ಹೊಂದಿದ್ದ ಅವರು ಏಕಾಏಕಿ ನಿಧನರಾಗಿರುವುದು ಅನುಮಾನಕ್ಕೆ ಕಾರಣ ಆಗಿದೆ.

ಇತ್ತೀಚೆಗೆ ಅವರಿಗೆ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಂಡಿತ್ತು. ರಕ್ತನಾಳದ ಸಮಸ್ಯೆಯೇ ಅವರ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಜೋ ಲಿಂಡ್ನರ್​ ನಿಧನದ ಸುದ್ದಿಯನ್ನು ಅವರ ಪ್ರೇಯಸಿ ಖಚಿತಪಡಿಸಿದ್ದಾರೆ.

ಕನ್ನಡದ ‘ಪೊಗರು’ ಸಿನಿಮಾದಲ್ಲಿ ಜೋ ಲಿಂಡ್ನರ್​ ನಟಿಸಿದ್ದರು. ನಟ ಧ್ರುವ ಸರ್ಜಾ ಎದುರು ಅವರು ಫೈಟ್​ ಮಾಡಿದ್ದರು. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಅಬ್ಬರಿಸಿದ್ದ ಜೋ ಲಿಂಡ್ನರ್​ ಈಗ ನೆನಪು ಮಾತ್ರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಈ ಮೂವರು ಬಾಡಿ ಬಿಲ್ಡರ್ ಜೊತೆ ಧ್ರುವ ಸರ್ಜಾ ಆಕ್ಷನ್ ಸೀನ್‌ಗಳು ಆಕ್ಷನ್ ಪ್ರಿಯರನ್ನು ರೊಚ್ಚಿಗೆಬ್ಬಿಸಿದ್ದವು. ಈ ಮೂವರು ಬಾಡಿ ಬಿಡ್ಡರ್‌ನಲ್ಲಿ ಅತ್ಯಂತ ಕಿರಿಯನಾಗಿದ್ದ ಜರ್ಮನಿ ಮೂಲದ ಜೋ ಲಿಂಡ್ನೆರ್ ದಿಢೀರನೇ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು

ಜರ್ಮನಿ ಮೂಲದವರಾದರೂ ಜೋ ಲಿಂಡ್ನರ್ ಹಲವು ವರ್ಷಗಳಿಂದ ಥಾಯ್ಲೆಂಡ್‌ನಲ್ಲಿ ನೆಲೆಸಿದ್ದರು. ಇನ್‌ಸ್ಟಾಗ್ರಾಂನಲ್ಲಿ ತಮ್ಮ ದೇಹದಾಢ್ಯತೆಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಈ ವಿಡಿಯೋಗಳಿಂದಲೇ ವಿಶ್ವದಾದ್ಯಂತ ಹಲವರನ್ನು ಸೆಳೆದಿದ್ದರು. ಇಷ್ಟೊಂದು ಫಿಟ್ ಆಗಿದ್ದ ಜೋ ಲಿಂಡ್ನೆರ್ ದಿಢೀರನೇ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!