ಪಾರ್ವತಿ ನಾಯರ್ 
ಸಿನಿಮಾ ಸುದ್ದಿ

ಮತ್ತೆ ಕನ್ನಡಕ್ಕೆ ಮರಳುತ್ತಿದ್ದಾರೆ ವಾಸ್ಕೋಡಿಗಾಮ ಚಿತ್ರದ ನಾಯಕಿ ಪಾರ್ವತಿ ನಾಯರ್!

ಸದ್ಯ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪಾರ್ವತಿ ನಾಯರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ವಾಸ್ಕೋಡಿಗಾಮ ಚಿತ್ರದ ನಿರ್ದೇಶಕ ಮಧು ಚಂದ್ರ ಅವರೊಂದಿಗೆ ಮತ್ತೊಮ್ಮೆ ಮಿ. ರಾಣಿ ಎಂಬ ತಾತ್ಕಾಲಿಕ ಶೀರ್ಷಿಕೆಯ ಕಾಮಿಡಿ-ಡ್ರಾಮಾದಲ್ಲಿ ನಟಿಸುತ್ತಿದ್ದಾರೆ. 

ಸದ್ಯ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪಾರ್ವತಿ ನಾಯರ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ವಾಸ್ಕೋಡಿಗಾಮ ಚಿತ್ರದ ನಿರ್ದೇಶಕ ಮಧು ಚಂದ್ರ ಅವರೊಂದಿಗೆ ಮತ್ತೊಮ್ಮೆ ಮಿ. ರಾಣಿ ಎಂಬ ತಾತ್ಕಾಲಿಕ ಶೀರ್ಷಿಕೆಯ ಕಾಮಿಡಿ-ಡ್ರಾಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಪಾರ್ವತಿ ಈ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ.

ಸಿನಿಮಾ ಎಕ್ಸ್‌ಪ್ರೆಸ್‍‌ ಜೊತೆಗಿನ ಮಾತುಕತೆಯಲ್ಲಿ, 'ಕೆಲವು ಗಂಭೀರ ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ ವಿರಾಮ ತೆಗೆದುಕೊಂಡು ಕಾಮಿಡಿ ಜಗತ್ತನ್ನು ಅನ್ವೇಷಿಸುವ ಅಗತ್ಯದ ಅನುಭವ ನನಗಾಯಿತು. 'ಚಿತ್ರದ ಸ್ಕ್ರಿಪ್ಟ್ ನನ್ನನ್ನು ಮತ್ತೊಮ್ಮೆ ವಾಸ್ಕೋಡಿಗಾಮ ನಿರ್ದೇಶಕರೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿತು ಮತ್ತು ನಾನು ಮಿ. ರಾಣಿಯಲ್ಲಿ ಕೆಲಸ ಮಾಡುವುದನ್ನು ಸಂಪೂರ್ಣವಾಗಿ ಆನಂದಿಸಿದೆ' ಎಂದು ಹೇಳುತ್ತಾರೆ. ಅವರು ಕೊನೆಯದಾಗಿ ಹಿಂದಿ ಚಲನಚಿತ್ರ 83 ನಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಎಕ್ಸೆಲ್ ಆರ್ಬಿಟ್ ಕ್ರಿಯೇಷನ್ಸ್ ಎಲ್‌ಎಲ್‌ಪಿ ನಿರ್ಮಿಸಿರುವ ಮಿಸ್ಟರ್. ರಾಣಿ ಸಿನಿಮಾದಲ್ಲಿ ವೆಬ್ ಸರಣಿಯ ಭಾಗವಾಗಿರುವ ರಂಗಭೂಮಿ ಕಲಾವಿದ ದೀಪಕ್ ಅವರು ಪಾರ್ವತಿ ಅವರಿಗೆ ಜೋಡಿಯಾಗಿದ್ದಾರೆ. ಚಿತ್ರತಂಡ ಜೂಡಾ ಸ್ಯಾಂಡಿ ಅವರನ್ನು ಸಂಗೀತ ನಿರ್ದೇಶಕರಾಗಿ ಅಂತಿಮಗೊಳಿಸಿದ್ದಾರೆ.

ಈಮಧ್ಯೆ, ಮತ್ತೊಂದು ಕನ್ನಡ ಸಿನಿಮಾಗಾಗಿ ಮಾತುಕತೆ ನಡೆಸುತ್ತಿದ್ದೇನೆ ಮತ್ತು ಶೀಘ್ರದಲ್ಲೇ ಈ ಕುರಿತು ಮಾಹಿತಿ ನೀಡಲಿದ್ದೇನೆ. ನಿರ್ಮಾಣದ ವಿವಿಧ ಹಂತಗಳಲ್ಲಿರುವ ಒಂದೆರಡು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ಈ ಮಧ್ಯೆ ತೆಲುಗಿನಲ್ಲಿಯೂ ಹಲವಾರು ಆಫರ್‌ಗಳನ್ನು ಸ್ವೀಕರಿಸಿದ್ದೇನೆ. ಆದರೆ, ಸರಿಯಾದ ಯೋಜನೆಯೊಂದಿಗೆ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಬಯಸುತ್ತೇನೆ. 83 ಸಿನಿಮಾ ನಂತರ ನಾನು ಹಿಂದಿಯಲ್ಲಿ ಉತ್ತಮ ಅವಕಾಶಗಳನ್ನು ಅನ್ವೇಷಿಸುತ್ತಿದ್ದೇನೆ' ಎಂದು ಪಾರ್ವತಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT