ದರ್ಶನ್ ಮತ್ತು ಬಿರಾದಾರ್ 
ಸಿನಿಮಾ ಸುದ್ದಿ

ಹಿರಿಯ ಕಲಾವಿದರನ್ನು ದರ್ಶನ್ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ: ಬಿರಾದಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಬಿರಾದಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ನಿರ್ಮಾಪಕರು ಹಿರಿಯ ನಟರನ್ನು ಒಳಗೊಂಡಿರುವ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಳಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾದಲ್ಲಿ ಬಿರಾದಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ನಿರ್ಮಾಪಕರು ಹಿರಿಯ ನಟರನ್ನು ಒಳಗೊಂಡಿರುವ ಕ್ಯಾರೆಕ್ಟರ್ ಪೋಸ್ಟರ್ ಅನಾವರಣಗೊಳಿಸಿದರು.

ಕಾಟೇರಾ ಸಿನಿಮಾದಲ್ಲಿ ಬಿರಾದಾರ್ ಅವರು ತಮ್ಮ ಪಾತ್ರದ ಬಗ್ಗೆ ತುಟಿ ಬಿಚ್ಚಿಲ್ಲ, ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ ಅವರೊಂದಿಗೆ  ತೆರೆ ಹಂಚಿಕೊಳ್ಳಲು ತಾವು ಉತ್ಸುಕರಾಗಿರುವುದಾಗಿ ಬಿರಾದಾರ್  ಹೇಳಿದ್ದಾರೆ.

ಈ ಹಿಂದೆ ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು,  ಈಗ ಅವರ ಮಗನೊಂದಿಗೆ ಕೆಲಸ ಮಾಡುವುದು ನನಗೆ ಅಪಾರ ಸಂತೋಷವನ್ನು ನೀಡಿದೆ ಎಂದಿದ್ದಾರೆ.

ಹಿರಿಯ ನಟರನ್ನು ನೋಡಿಕೊಳ್ಳುವ ವಿಷಯದಲ್ಲಿ ದರ್ಶನ್ ಗೌರವಾನ್ವಿತ ವ್ಯಕ್ತಿ ಎಂದು ನಾನು ಹೇಳಲೇಬೇಕು. ಸೆಟ್‌ನಲ್ಲಿ, ಅವರು ನನ್ನ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರು. ನನಗೆ  ಸಂಕೋಚವಾಗದಂತೆ ಆರಾಮದಾಯಕವಾಗಿ ನನ್ನೊಂದಿಗೆ ನಡೆದುಕೊಳ್ಳುತ್ತಿದ್ದರು. ನನ್ನೊಂದಿಗೆ ಒಂದು ಕಪ್ ಚಹಾ ಕುಡಿದು ಆನಂದಿಸುತ್ತಿದ್ದರು ಎಂದು ಬಿರಾದಾರ್ ಹೇಳಿದ್ದಾರೆ.

ತನ್ನ ಪಾತ್ರದ ಕೆಲವು ಭಾಗಗಳನ್ನು ಚಿತ್ರೀಕರಿಸುವುದು ಬಾಕಿ ಉಳಿದಿವೆ ಮತ್ತು ಬಿಡುಗಡೆಯ ದಿನಾಂಕವು ಹತ್ತಿರವಾಗುತ್ತಿದ್ದಂತೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳುವುದಾಗಿ ಬಿರಾದಾರ್ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ ವಿರೋಧಿ ಪ್ರತಿಭಟನೆಗಳಿಗೆ ಅಮೆರಿಕನ್ನರ ಆರ್ಥಿಕ ನೆರವು?'; Mary Millben ಸ್ಫೋಟಕ ಆರೋಪ!

‘ಮೋದಿಗೆ ಅಮೆರಿಕ ಬೇಕಿಲ್ಲ, ಆದರೆ ಅಮೆರಿಕಕ್ಕೆ ಮೋದಿ ಬೇಕು'.. 'ನಿಮ್ಮನ್ನು ಬಳಸಿಕೊಂಡು ಕೈ ಬಿಡುತ್ತಾರೆ': ಅಭಿಜಿತ್ ದೀಪ್ಕೆಗೆ ಹಾಲಿವುಡ್ ಗಾಯಕಿ ಎಚ್ಚರಿಕೆ

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!