ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ತಮಿಳು ಖ್ಯಾತ ನಟ ಅಜಿತ್​ ಕುಮಾರ್​ ತಂದೆ ಪಿ. ಸುಬ್ರಹ್ಮಣ್ಯಂ ವಿಧಿವಶ

ತಮಿಳು ಖ್ಯಾತ ನಟ ಅಜಿತ್​ ಕುಮಾರ್​ ತಂದೆ ಪಿ.ಸುಬ್ರಹ್ಮಣ್ಯಂ (84) ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ .

ಪೋಷಕರೊಂದಿಗೆ ನಟ ಅಜಿತ್
Shilpa D
Updated On : 24 Mar 2023, 10:53 am

ಚೆನ್ನೈ: ತಮಿಳು ಖ್ಯಾತ ನಟ ಅಜಿತ್​ ಕುಮಾರ್​ ತಂದೆ ಪಿ.ಸುಬ್ರಹ್ಮಣ್ಯಂ (84) ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ .

ಅಜಿತ್​ ಕುಮಾರ್​ ಫ್ಯಾಮಿಲಿ ಜೊತೆ ಯುರೋಪ್​ ಟೂರ್​ನಲ್ಲಿದ್ದಾರೆ. ಆದಷ್ಟು ಬೇಗ ಚೆನ್ನೈನ ತಂದೆ ನಿವಾಸಕ್ಕೆ ಬಂದು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಅಜಿತ್​ ಕುಮಾರ್ ಫ್ಯಾನ್ಸ್ ಟ್ವಿಟರ್ ಪೇಜ್​ನಲ್ಲಿ​ ಫೋಟೋ ಶೇರ್​ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ನಟ ಅಜಿತ್ ತಂದೆ ಪಿ.ಸುಬ್ರಹ್ಮಣ್ಯಂ ಮೂಲತಹ ಕೇರಳದ ಪಾಲಕ್ಕಾಡ್ ಮೂಲದವರು. ಪಶ್ಚಿಮ ಬಂಗಾಳದ ಮೋಹಿನಿಯವರನ್ನು ಮದುವೆಯಾಗಿದ್ದರು. ಈ ದಂಪತಿಯ ಮೂರು ಗಂಡು ಮಕ್ಕಳಲ್ಲಿ ಅಜಿತ್​ ನಡುವಿನವರಾಗಿದ್ದಾರೆ. ಅಜಿತ್ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಅಪಾರ ಖ್ಯಾತಿ ಪಡೆದಿದ್ದಾರೆ. ಇನ್ನಿಬ್ಬರು ಮಕ್ಕಳು ಉದ್ಯಮ ಕ್ಷೇತ್ರದಲ್ಲಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement