ಸಿನಿಮಾ ಸುದ್ದಿ

ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಚಿತ್ರರಂಗಕ್ಕೆ ಮುಕ್ತವಾಗಿಲ್ಲ: 'ಕಾಂತಾರ' ನಟ ರಿಷಬ್ ಶೆಟ್ಟಿ

Lingaraj Badiger

ಪಣಜಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಚಿತ್ರೋದ್ಯಮಕ್ಕೆ ಮುಕ್ತವಾದ ಅವಕಾಶಗಳನ್ನು ನೀಡುತ್ತಿಲ್ಲ ಎಂದು 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ ಅವರು ಮಂಗಳವಾರ ಗೋವಾದಲ್ಲಿ ಹೇಳಿದ್ದಾರೆ.

ಗೋವಾ ನಡೆಯುತ್ತಿರುವ 54ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟಿ, "ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕನ್ನಡ ಚಿತ್ರರಂಗಕ್ಕೆ ಮುಕ್ತವಾಗಿಲ್ಲ. ಅದು ತುಂಬಾ ಕೆಟ್ಟ ಸಂಕೇತವಾಗಿದೆ. ಇಲ್ಲಿ ಚಂದಾದಾರರು ಇಲ್ಲ ಅವರು ಹೇಳುತ್ತಿರುವುದಾಗಿ ತಿಳಿಸಿದ್ದಾರೆ. 

ರಕ್ಷಿತ್ ಶೆಟ್ಟಿಯವರ ಪರಮವಾ ಸ್ಟುಡಿಯೋಸ್ ಮತ್ತು ನನ್ನ ರಿಷಬ್ ಶೆಟ್ಟಿ ಫಿಲ್ಮ್ಸ್ ಈ ಎರಡು ನಿರ್ಮಾಣ ಸಂಸ್ಥೆಗಳು ಕೊರೋನಾ ಸಂದರ್ಭದಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದವು. ಅದರ ಹೊರತಾಗಿ ಕೆಲವು ನಿರ್ಮಾಣ ಸಂಸ್ಥೆಗಳು ಚಲನಚಿತ್ರಗಳನ್ನು ನಿರ್ಮಿಸುತ್ತಿವೆ. ಐಎಫ್‌ಎಫ್‌ಐ ಮತ್ತು ಅದರ ಪ್ರಾಯೋಜಕರು ಕನ್ನಡ ಚಲನಚಿತ್ರಗಳಿಗೆ ಮನ್ನಣೆ ನೀಡಬೇಕೆಂದು ಮನವಿ ರಿಷಬ್ ಶೆಟ್ಟಿ ಮನವಿ ಮಾಡಿದರು.

"IFFI ಮತ್ತು ಅದರ ಪ್ರಾಯೋಜಕರಿಗೆ ನಮ್ಮ ಚಲನಚಿತ್ರಗಳಿಗೆ ಮಾನ್ಯತೆ ನೀಡುವಂತೆ ವಿನಂತಿಸಲು ಬಯಸುತ್ತೇನೆ ... ಚಿತ್ರಮಂದಿರಗಳಲ್ಲಿ ಕಡಿಮೆ ಪ್ರದರ್ಶನವನ್ನು ಹೊಂದಿರುವ ಚಿತ್ರಗಳು ಸಹ ಸ್ವಲ್ಪ ಮನ್ನಣೆ ಪಡೆಯಬೇಕು ಮತ್ತು ಅವುಗಳನ್ನು OTT ಪ್ಲಾಟ್‌ಫಾರ್ಮ್‌ಗಳಿಗೆ ತೆಗೆದುಕೊಳ್ಳಬೇಕು" ಎಂದಿದ್ದಾರೆ.

ಈ ಮಧ್ಯೆ, ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1'ರ ಟೀಸರ್ ಅನ್ನು ಸೋಮವಾರ ಅನಾವರಣಗೊಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಟೀಸರ್ ನಟ-ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಕ್ಲೂ ನೀಡಿದೆ. 

SCROLL FOR NEXT