ಕರೀನಾ ಕಪೂರ್ ಖಾನ್, ಯಶ್(ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂಬರುವ ಚಿತ್ರ 'ಟಾಕ್ಸಿಕ್'ಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ನಾಯಕಿ?

ರಾಕಿಂಗ್ ಸ್ಟಾರ್ ಯಶ್ ಸುದೀರ್ಘ ಕಾಯುವಿಕೆ ನಂತರ ಕಳೆದ ವರ್ಷಾಂತ್ಯದಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ 'ಟಾಕ್ಸಿಕ್''ಎಂದು ಘೋಷಿಸಿಕೊಂಡರು. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ ಡೇಟ್ ಇನ್ನೂ ಹೊರಬಿದ್ದಿಲ್ಲ.

ರಾಕಿಂಗ್ ಸ್ಟಾರ್ ಯಶ್ ಸುದೀರ್ಘ ಕಾಯುವಿಕೆ ನಂತರ ಕಳೆದ ವರ್ಷಾಂತ್ಯದಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ 'ಟಾಕ್ಸಿಕ್''ಎಂದು ಘೋಷಿಸಿಕೊಂಡರು. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ ಡೇಟ್ ಇನ್ನೂ ಹೊರಬಿದ್ದಿಲ್ಲ. ಈ ಮಧ್ಯೆ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಹೊಸ ವರ್ಷದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿಯೆಂದರೆ ಟಾಕ್ಸಿಕ್ ಚಿತ್ರದಲ್ಲಿ ಯಶ್ ಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ನಾಯಕಿಯಾಗುತ್ತಿದ್ದಾರೆ ಎನ್ನುವುದು.

ಈ ಸುದ್ದಿ ನಿಜವೇ ಆಗಿದ್ದರೆ ಕರೀನಾ ಕಪೂರ್ ಖಾನ್ ಅವರಿಗೆ ಇದು ಮೊಟ್ಟಮೊದಲ ಕನ್ನಡ ಚಿತ್ರ. ಟಾಕ್ಸಿಕ್ ನಿರ್ದೇಶಕಿ ಗೀತಾ ಮೋಹನ್ ದಾಸ್ ಮತ್ತು ಯಶ್ ಮುಂದಿನ ದಿನಗಳಲ್ಲಿ ಸದ್ಯದಲ್ಲಿಯೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಟಾಕ್ಸಿಕ್ ಚಿತ್ರೀಕರಣ ಇನ್ನು ಕೆಲ ದಿನಗಳಲ್ಲಿ ಆರಂಭವಾಗಲಿದೆ.

ಯಶ್ ಅವರ ಜೊತೆ ಕೆಜಿಎಫ್ 2ನಲ್ಲಿ ಬಾಲಿವುಡ್ ನ ಖ್ಯಾತ ಕಲಾವಿದರಾದ ಸಂಜಯ್ ದತ್ ಮತ್ತು ರವೀನಾ ಟೆಂಡನ್ ಅಭಿನಯಿಸಿದ್ದರು. ಕರೀನಾ ಕಪೂರ್ ಗೆ ಮೊದಲು ಈ ಹಿಂದೆ ಯಶ್ ಗೆ ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿ ನಾಯಕಿಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಅದೇ ರೀತಿ ನಾಯಕಿ ಪಾತ್ರಕ್ಕೆ ಕೇಳಿಬರುತ್ತಿದ್ದ ಮತ್ತೊಂದು ಹೆಸರು ರಾಶಿ ಖನ್ನಾ.

ಟಾಕ್ಸಿಕ್ ಚಿತ್ರ: ಕೆಜಿಎಫ್ ಸರಣಿ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅವರ ಇಮೇಜನ್ನೇ ಬದಲಿಸಿ ಭಾರೀ ಅದೃಷ್ಟ ತಂದುಕೊಟ್ಟು ಚಿತ್ರರಂಗದಲ್ಲಿ ರಾಷ್ಟ್ರಮಟ್ಟದಲ್ಲಿ ಅವರಿಗೆ ಹೆಸರು ಕೊಟ್ಟಿತು. ಮುಂದಿನ ಚಿತ್ರವನ್ನು ಅವರು ಅಳೆದು ತೂಗಿ ಒಪ್ಪಿಕೊಂಡು ಕೊನೆಗೂ ಕಳೆದ ತಿಂಗಳು ಡಿಸೆಂಬರ್ ನಲ್ಲಿ ಘೋಷಿಸಿದ್ದಾರೆ. ಯಶ್ ಚಿತ್ರದ ಒಂದು ಸಣ್ಣ ತುಣುಕನ್ನು ಬಿಡುಗಡೆ ಮಾಡಿದ್ದು ಅದು ಅವರ ಪಾತ್ರದ ಫಸ್ಟ್ ಲುಕ್ ಎಂದು ಹೇಳಲಾಗುತ್ತಿದೆ. 

ಗೀತಾ ಮೋಹನ್ ದಾಸ್ ನಿರ್ದೇಶನದ ಟಾಕ್ಸಿಕ್ ನ್ನು ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ನಿರ್ಮಾಣ ಮಾಡುತ್ತಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್: ಕೆಜಿಎಫ್ ಚಾಪ್ಟರ್ 1 2018ರಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಕಂಡು ಯಶ್ ಇಮೇಜನ್ನೇ ಬದಲಾಯಿಸಿತು. ನಂತರ 2022ರಲ್ಲಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೊಂಡಿತು. ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಸಾವಿರ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ