ಬಹುಭಾಷಾ ರೋಮ್ಯಾಂಟಿಕ್ ಥ್ರಿಲ್ಲರ್ ಚಿತ್ರಕ್ಕೆ ಮದುವೆಯ ಮಮತೆಯ ಕರೆಯೋಲೆ, ಸಿಲಿಕಾನ್ ಸಿಟಿ ಮತ್ತು ಸನಿಹಕ್ಕೆ ಖ್ಯಾತಿಯ ಸೂರಜ್ ಮತ್ತು ಸ್ಪೂಕಿ ಕಾಲೇಜ್, ಕೃಷ್ಣಂ ಪ್ರಣಯ ಸಖಿ ಮುಂತಾದ ಚಿತ್ರಗಳಲ್ಲಿ ಮಿಂಚಿದ ನಟಿ ಶರಣ್ಯ ಶೆಟ್ಟಿ ಜೋಡಿಯಾಗಿದ್ದಾರೆ.
ನಿರ್ಮಾಪಕರು ಇನ್ನೂ ನಿರ್ದೇಶಕರನ್ನು ಅಧಿಕೃತವಾಗಿ ಘೋಷಿಸದಿದ್ದರೂ, ವಿ ರವಿಚಂದ್ರನ್ ನಟಿಸಿದ ದಿ ಜಡ್ಜ್‌ಮೆಂಟ್ ನಿರ್ದೇಶನದ ಮೂಲಕ ಖ್ಯಾತಿ ಗಳಿಸಿರುವ ಗುರುರಾಜ್ ಕುಲಕರ್ಣಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆಂಬ ಗುಸುಗುಸುಗಳು ಕೇಳಿ ಬರುತ್ತಿವೆ.
ಚಿತ್ರದ ಚಿತ್ರೀಕರಣಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಗೋವಾ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಚಿತ್ರೀಕರಣಕ್ಕೆ ಮತ್ತಷ್ಟು ಸ್ಥಳ ಹುಡುಕಾಟದಲ್ಲಿ ಚಿತ್ರತಂಡ ನಿರತವಾಗಿದೆ.
ಕೇವಲ ಭಾರತೀಯ ಭಾಷೆಗಳಲ್ಲಷ್ಟೇ ಅಲ್ಲದೆ, ಸ್ಪ್ಯಾನಿಷ್ ಮತ್ತು ಫ್ರೆಂಚ್ ಆವೃತ್ತಿಗಳೊಂದಿಗೆ ಚಿತ್ರವನ್ನು ಹೊರತರಲು ಚಿತ್ರತಂಡ ಯೋಜನೆ ರೂಪಿಸುತ್ತಿದೆ ಎನ್ನಲಾಗಿದೆ.
ಚಿತ್ರ ತಯಾರಕರು ಕಥಾವಸ್ತುವಿನ ವಿವರಗಳನ್ನು ಗೌಪ್ಯವಾಗಿರಿಸಿದ್ದು, ಚಿತ್ರ ತೆರೆಗೆ ಬರುವ ಸಮಯಕ್ಕೆ ಹತ್ತಿರದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.