ಒಂದು ಸಮಯದಲ್ಲಿ ಕಾಲಿವುಡ್ ನಲ್ಲಿ ಜನಪ್ರಿಯ ಜೋಡಿಯಾಗಿತ್ತು ಸ್ಟಾರ್ ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ. ಹಲವು ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳ ಹಿಂದೆ ಜೋಡಿ ಬೇರ್ಪಟ್ಟಿತು. ಆದರೂ ಮಕ್ಕಳ ವಿಚಾರ ಬಂದಾಗ ಒಂದಾಗುತ್ತಾರೆ.
ನಿನ್ನೆ ಈ ಮಾಜಿ ಜೋಡಿಯ ಹಿರಿಯ ಪುತ್ರ ಯಾತ್ರಾ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾನೆ.ಇತ್ತೀಚೆಗೆ ಶಾಲೆಯಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಧನುಷ್ ತಮ್ಮ ಮಾಜಿ ಪತ್ನಿ ಐಶ್ವರ್ಯಾ ಅವರೊಂದಿಗೆ ಭಾಗವಹಿಸಿದ್ದರು. ಡಿವೋರ್ಸ್ ನಂತರವೂ ಧನುಷ್ ಮತ್ತು ಐಶ್ವರ್ಯಾ ಜೊತೆಯಾಗಿ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಪೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ.
ಒಟ್ಟಾಗಿ ಪುತ್ರನನ್ನು ಬಿಗಿದಪ್ಪಿದ ಐಶ್ವರ್ಯಾ-ಧನುಷ್
ಪುತ್ರ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಸಂಭ್ರಮದಲ್ಲಿ ಧನುಷ್ ಮತ್ತು ಐಶ್ವರ್ಯಾ ಮಗನನ್ನು ಅಪ್ಪಿಕೊಳ್ಳುವ ಮೂಲಕ ಸಂತೋಷವನ್ನು ವ್ಯಕ್ತಪಡಿಸಿದ್ದರು. ನಟ ಧನುಷ್ ಈ ಕುರಿತ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, “ಹೆಮ್ಮೆಯ ಪೋಷಕರು” ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
ಧನುಷ್-ಐಶ್ವರ್ಯಾ ಡಿವೋರ್ಸ್
ಕಾಲಿವುಡ್ ನಲ್ಲಿ ಅಂದು ಪ್ರೇಮಪಕ್ಷಿಗಳಾಗಿದ್ದ ಧನುಷ್ ಮತ್ತು ಐಶ್ವರ್ಯಾ 2004ರಲ್ಲಿ ಪೋಷಕರು, ಹಿರಿಯರು, ಸೆಲೆಬ್ರಿಟಿಗಳ ಸಮ್ಮುಖದಲ್ಲಿ ವಿವಾಹವಾದರು. ಲಿಂಗಾ ಮತ್ತು ಯಾತ್ರಾ ಹೆಸರಿನ ಇಬ್ಬರು ಗಂಡು ಮಕ್ಕಳ ಪೋಷಕರಾಗಿದ್ದರು. ಜನವರಿ 17, 2022ರಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಬೇರ್ಪಡುವಿಕೆಯನ್ನು ಘೋಷಿಸಿದರು.