ಮೇಘನಾ ರಾಜ್ - ರಜನಿಕಾಂತ್ 
ಸಿನಿಮಾ ಸುದ್ದಿ

ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರದಲ್ಲಿ ನಟಿ ಮೇಘನಾ ರಾಜ್ ಸರ್ಜಾ; ತಮಿಳು ಚಿತ್ರರಂಗಕ್ಕೆ ರೀಎಂಟ್ರಿ

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ಮೇಘನಾ ಈಗಾಗಲೇ ಸೆಟ್‌ಗಳಿಗೆ ಸೇರಿದ್ದಾರೆ ಮತ್ತು ಕಳೆದ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿದ್ದಾರೆ.

ರಜನಿಕಾಂತ್ ನಟನೆಯ 'ಜೈಲರ್ 2' ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿರುವ ಚಿತ್ರಗಳಲ್ಲಿ ಒಂದಾಗಿದೆ. ಇದೀಗ ಹೊಸ ಸುದ್ದಿಯೆಂದರೆ, ನಟಿ ಮೇಘನಾ ರಾಜ್ ಸರ್ಜಾ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ. ನೆಲ್ಸನ್ ನಿರ್ದೇಶನದ 2023ರ ಬ್ಲಾಕ್‌ಬಸ್ಟರ್ 'ಜೈಲರ್' ಚಿತ್ರದ ಸೀಕ್ವೆಲ್ 'ಜೈಲರ್ 2' ಆಗಿದೆ. ತಮಿಳು ಚಿತ್ರ 'ನಂದ ನಂದಿತ' (2012) ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಮೇಘನಾ, ಈ ಪ್ಯಾನ್-ಇಂಡಿಯನ್ ಚಿತ್ರದ ಮೂಲಕ ಮತ್ತೆ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ.

'ತತ್ಸಮ ತದ್ಭವ' ಮತ್ತು ಇರುವುವುದೆಲ್ಲವ ಬಿಟ್ಟು (2018) ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿಯನ್ನು ಗಳಿಸಿದ್ದ ಮೇಘನಾ, ಸದ್ಯ 'ಬುದ್ಧಿವಂತ 2' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಕಾದಲ್ ಸೊಲ್ಲ ವಂದೇನ್ (2010) ಮತ್ತು ಉಯರ್ತಿರು 420 (2011) ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೇಘನಾ, ಜೈಲರ್ 2 ಮೂಲಕ ಮತ್ತೆ ತಮಿಳು ಚಿತ್ರರಂಗಕ್ಕೆ ರೀಎಂಟ್ರಿ ನೀಡುತ್ತಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದ ಮೇಘನಾ, ಸುರೇಶ್ ಗೋಪಿ ನಟಿಸಿರುವ 'ಒಟ್ಟಕೊಂಬನ್' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈಗ ನಿರ್ಮಾಣ ಹಂತದಲ್ಲಿರುವ ಈ ಚಿತ್ರವನ್ನು ಮ್ಯಾಥ್ಯೂಸ್ ಥಾಮಸ್ ನಿರ್ದೇಶಿಸಿದ್ದಾರೆ. ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಿಸಿರುವ ಜೈಲರ್ 2 ಚಿತ್ರದಲ್ಲಿ ರಮ್ಯಾ ಕೃಷ್ಣನ್, ಯೋಗಿ ಬಾಬು ಮತ್ತು ಮಿರ್ನಾ ನಟಿಸಿದ್ದಾರೆ. ಜೈಲರ್ ಚಿತ್ರದಲ್ಲಿ ನಟಿಸಿದ್ದ ಶಿವ ರಾಜ್‌ಕುಮಾರ್ ಕೂಡ ಈ ಸೀಕ್ವೆಲ್‌ಗೆ ಮರಳಲಿದ್ದಾರೆ ಎಂಬುದು ದೃಢಪಟ್ಟಿದೆ. ಮೊದಲ ಭಾಗದಲ್ಲಿ ನಟಿಸಿದ್ದ ಮೋಹನ್ ಲಾಲ್, ಎಸ್‌ಜೆ ಸೂರ್ಯ, ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್ ಮತ್ತು ಸಂತಾನಂ ಕೂಡ ಇದ್ದಾರೆ.

ಮೂಲಗಳ ಪ್ರಕಾರ, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ಮೇಘನಾ ಈಗಾಗಲೇ ಸೆಟ್‌ಗಳಿಗೆ ಸೇರಿದ್ದಾರೆ ಮತ್ತು ಕಳೆದ ಕೆಲವು ದಿನಗಳಿಂದ ಚಿತ್ರೀಕರಣದಲ್ಲಿದ್ದಾರೆ. ಅಧಿಕೃತ ದೃಢೀಕರಣ ಮತ್ತು ಅವರ ಪಾತ್ರದ ವಿವರಗಳು ಇನ್ನೂ ಗೌಪ್ಯವಾಗಿವೆ.

ಈಮಧ್ಯೆ, ಮೇಘನಾ 'ಅಮರ್ತ' ಚಿತ್ರದಲ್ಲಿ ಶ್ರೀನಗರ ಕಿಟ್ಟಿಯೊಂದಿಗೆ ನಟಿಸುತ್ತಿದ್ದಾರೆ. ಜೈಲರ್ 2 ಈಗಾಗಲೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಮೇಘನಾ ರಾಜ್ ಸರ್ಜಾ ಅವರು ಪ್ಯಾನ್-ಇಂಡಿಯನ್ ನಟಿಯಾಗಿ ತಮ್ಮ ವೃತ್ತಿಜೀವನದ ಮುಂದಿನ ಹಂತಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: 'ಆರೋಪಿಗಳ ಜೊತೆ ಯಾವುದೇ ಸಂಬಂಧವಿಲ್ಲ, ರಾಸಾಯನಿಕಗಳ ಸಂಗ್ರಹಿಸಿಲ್ಲ': Al-Falah ವಿವಿ ಸ್ಪಷ್ಟನೆ

Delhi Blast: 'ಬಿಹಾರ ಚುನಾವಣೆ ಸಮಯದಲ್ಲೇ ಏಕೆ ಸ್ಫೋಟ ನಡೆಯಿತು..? ಯಾರೂ ಗೂಟ ಹೊಡೆದು ಇರಲ್ಲ': ಸಚಿವ ಜಮೀರ್ ವಿಚಿತ್ರ ಪ್ರಶ್ನೆ

Delhi blast: ಬಂಧಿತ ವೈದ್ಯರು ಜನವರಿ ತಿಂಗಳಲ್ಲಿ ಹಲವು ಬಾರಿ ಕೆಂಪು ಕೋಟೆ ಪ್ರದೇಶಕ್ಕೆ ಭೇಟಿ ನೀಡಿದ್ದರು !

Delhi blast: ಎರಡು ಕಾರ್ಟ್ರಿಡ್ಜ್‌ಗಳು, ಸ್ಫೋಟಕಗಳು ಸೇರಿದಂತೆ ವಿಧಿ ವಿಜ್ಞಾನ ತಂಡದಿಂದ 40 ಮಾದರಿಗಳ ಸಂಗ್ರಹ

Delhi Blast case: ಮೂರು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಶಾಹೀನ್, ಅಂತವಳಲ್ಲ! ಪೋಷಕರ ಸಮರ್ಥನೆ

SCROLL FOR NEXT