ಬೆಂಗಳೂರು: 'ಕಳೆದ 3 ದಿನಗಳಿಂದ ತುಂಬಾ ಭಾರವಾದಂತಿದೆ' ಎಂದು ಸ್ಯಾಂಡಲ್ ವುಡ್ ಖ್ಯಾತ ನಟ ಕಿಚ್ಚಾ ಸುದೀಪ್ ಭಾವುಕ ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷ ನಿಧನರಾದ ತಮ್ಮ ತಾಯಿ ಸರೋಜಾ ಅವರನ್ನು ನೆನೆದು ನಟ ಕಿಚ್ಚಾ ಸುದೀಪ್ ಭಾವುಕ ಪೋಸ್ಟ್ ಮಾಡಿದ್ದಾರೆ.
ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ನಟ ಕಿಚ್ಚಾ ಸುದೀಪ್, 'ಈ ಕಳೆದ ಮೂರು ದಿನಗಳು ಭಾರವೆನಿಸಿದೆ. ಪ್ರತಿ ನಿಮಿಷವೂ ಕಳೆದ ವರ್ಷದ ಅದೇ ಗಂಟೆಗಳನ್ನು ಪ್ರತಿಧ್ವನಿಸುತ್ತಿದೆ' ಎಂದು ಪೋಸ್ಟ್ ಮಾಡಿದ್ದಾರೆ.
'ಈ ಕಳೆದ ಮೂರು ದಿನಗಳು ಭಾರವೆನಿಸಿದೆ. ಪ್ರತಿ ನಿಮಿಷವೂ ಕಳೆದ ವರ್ಷದ ಅದೇ ಗಂಟೆಗಳನ್ನು ಪ್ರತಿಧ್ವನಿಸುತ್ತಿದೆ. ನೀವು ಅರ್ಹರಾಗಿರುವಂತೆಯೇ, ಶಾಂತಿಯುತ, ಸುಂದರವಾದ ಸ್ಥಳದಲ್ಲಿ ನಾನು ನಿಮ್ಮನ್ನು ಚಿತ್ರಿಸಿಕೊಳ್ಳುತ್ತೇನೆ, ಅಮ್ಮ. ಯಾವಾಗಲೂ ನನ್ನ ಹೃದಯದಲ್ಲಿ. ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಪ್ರತಿ ಪಾಠ, ಪ್ರತಿ ನಗು, ಪ್ರತಿ ಅಪ್ಪುಗೆಗೆ ಧನ್ಯವಾದಗಳು, ಮತ್ತು ನಿಮ್ಮ ಪ್ರೀತಿಯನ್ನು ಯಾವಾಗಲೂ ನನ್ನೊಂದಿಗೆ ಕೊಂಡೊಯ್ಯುವ ಭರವಸೆ ನೀಡುತ್ತೇನೆ' ಎಂದು ಸುದೀಪ್ ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷ ಸುದೀಪ್ ಬಿಗ್ ಬಾಸ್ ಶೋ ನಿರ್ವಹಿಸುವಾಗಲೇ ಆಸ್ಪತ್ರೆಗೆ ದಾಖಲಾಗಿದ್ದ ತಾಯಿ ಸರೋಜಾ ಅವರು ನಿಧನರಾಗಿದ್ದರು. ಆದಾಗ್ಯೂ ನಟ ಸುದೀಪ್ ಬಿಗ್ ಬಾಸ್ ಶೋ ನ ತಮ್ಮ ಕರ್ತವ್ಯ ಮುಕ್ತಾಯಗೊಳಿಸಿ ಬಳಿಕ ತಮ್ಮ ತಾಯಿ ಬಳಿಗೆ ಹೋಗಿ ಕರ್ತವ್ಯ ಪ್ರಜ್ಞೆ ಮೆರೆದಿದ್ದರು.