ಆಯುಷ್ ಉಪೇಂದ್ರ ಶೂಟಿಂಗ್ ಆರಂಭ 
ಸಿನಿಮಾ ಸುದ್ದಿ

ರಿಯಲ್ ಸ್ಟಾರ್ ಉಪೇಂದ್ರ ಪುತ್ರ 'ಆಯುಷ್' ಲಾಂಚ್ ಮಾಡಲು ವೇದಿಕೆ ಸಿದ್ಧ: ಕಾಶ್ಮೀರದಲ್ಲಿ ಚಿತ್ರೀಕರಣ ಆರಂಭ

ಕಳೆದ 10 ದಿನಗಳಿಂದ ಪ್ಲಾನ್ ಪ್ರಕಾರ ಶೂಟಿಂಗ್ ನಡೆಯುತ್ತಿದೆ, ಫೆಬ್ರವರಿ 18 ರವರೆಗೆ ತಂಡವು ಕಾಶ್ಮೀರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ

ಆಯುಷ್ ಉಪೇಂದ್ರ ತಮ್ಮ ಮೊದಲ ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. 'ಮೊದಲ ಸಲ' ಖ್ಯಾತಿಯ ಪುರುಷೋತ್ತಮ ಸಿ ಸೋಮನಾಥಪುರ ನಿರ್ದೇಶಿಸಿ ಅಭಿಷೇಕ್ ಸಿರಿವಂತ ನಿರ್ಮಿಸಿದ್ದಾರೆ.

ಇನ್ನೂ ಹೆಸರಿಡದ ಈ ಸಿನಿಮಾಗೆ ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ, ಕಾಶ್ಮೀರದಲ್ಲಿ ಚಿತ್ರ ತಂಡವು ಸವಾಲಿನ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಿದೆ.

ಚಿತ್ರದ ಮೊದಲ ವೇಳಾಪಟ್ಟಿ ಕಣಿವೆಯಲ್ಲಿ ನಡೆಯುತ್ತಿದೆ, ಕೊರೆವ ಚಳಿಯ ನಡುವೆಯೂ ಚಿತ್ರೀಕರಣ ನಡೆಸುತ್ತಿದೆ. ಕಠಿಣ ಹವಾಮಾನದ ಹೊರತಾಗಿಯೂ, ಕಳೆದ 10 ದಿನಗಳಿಂದ ಪ್ಲಾನ್ ಪ್ರಕಾರ ಶೂಟಿಂಗ್ ನಡೆಯುತ್ತಿದೆ, ಫೆಬ್ರವರಿ 18 ರವರೆಗೆ ತಂಡವು ಕಾಶ್ಮೀರದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ನಂತರ ಮುಂದಿನ ಶೂಟಿಂಗ್ ಗಾಗಿ ಮೈಸೂರಿಗೆ ಸ್ಥಳಾಂತರಗೊಳ್ಳಲಿದೆ. ಎಚ್‌ಸಿ ವೇಣು ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದಾರೆ.

ಸಿನಿಮಾ ಶೂಟಿಂಗ್ ವೇಳೆ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಬಹಳಷ್ಟು ಕಾಳಜಿಯಿಂದ ತೊಡಗಿಸಿಕೊಂಡಿದ್ದಾರೆ. ಆಯುಷ್ ಸಿನಿಮಾ ಎಂಟ್ರಿಗಾಗಿ ಬಹಳಷ್ಟು ಸಿದ್ದತೆ ಮಾಡಿಕೊಂಡಿದ್ದಾರೆ. ಅವರು ಸೆಟ್‌ಗಳಲ್ಲಿ ಹಾಜರಿದ್ದು ತಮ್ಮ ಮಗನ ಮೊದಲ ಶೂಟಿಂಗ್ ಗೆ ಮಾರ್ಗದರ್ಶನ ನೀಡಿದ್ದಾರೆ.

ವಿಶೇಷವಾಗಿ ಪ್ರಿಯಾಂಕಾ, ವಿವಿಧ ವಿಭಾಗಗಳಲ್ಲಿ ಸಕ್ರಿಯವಾಗಿ ಸಹಾಯ ಮಾಡುತ್ತಿದ್ದಾರೆ, ನಿರ್ಮಾಣದ ಅಂಶಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಕಾಶ್ಮೀರದಲ್ಲಿನ ಕಠಿಣ ಶೂಟಿಂಗ್ ಪರಿಸ್ಥಿತಿಗಳನ್ನು ನಿಭಾಯಿಸಲು ತಂಡಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಚಿತ್ರದ ಸೆಟ್‌ಗಳಲ್ಲಿ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಫೋಟೋ ಕಾಣಿಸಿಕೊಂಡಿದ್ದು, ತಮ್ಮ ಮಗನ ಮೊದಲ ಸಿನಿಮಾಗೆ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತಿರುವುದು ತಿಳಿದು ಬಂದಿದೆ,

ನಿರ್ಮಾಪಕರು ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ರಹಸ್ಯವಾಗಿರಿಸಿದ್ದಾರೆ. ಕಾಶ್ಮೀರ ವೇಳಾಪಟ್ಟಿ ಪೂರ್ಣಗೊಂಡ ನಂತರ ಚಿತ್ರ ತಂಡವ ಪ್ರಮುಖ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ದೆಹಲಿಯಲ್ಲಿ ಸಿದ್ದರಾಮಯ್ಯ-ಡಿಕೆ.ಶಿವಕುಮಾರ್; ನಾಯಕತ್ವ ಬದಲಾವಣೆ ಊಹಾಪೋಹಗಳಿಗೆ ಬೀಳುತ್ತಾ ತೆರೆ? ಕುತೂಹಲ ಮೂಡಿಸಿದ ಕಾಂಗ್ರೆಸ್ ಸಭೆ..!

ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆವರೆಗೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಅಬ್ರಹಾಂ ಒಪ್ಪಂದಕ್ಕೆ 'NO' ಎಂದ ಪಾಕಿಸ್ತಾನ, ಟ್ರಂಪ್ ರಾಜತಾಂತ್ರಿಕ ಯತ್ನಕ್ಕೆ ಹಿನ್ನೆಡೆ..!

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

SCROLL FOR NEXT