CM ಜೋಸೆಫ್ ವಿಜಯ್ - ಪುತ್ರ ಜೇಸನ್ ಸಂಜಯ್‌ 
ಸಿನಿಮಾ ಸುದ್ದಿ

'ಅಪ್ಪನ ಜತೆ ಕ್ಲಾಷ್' ತಪ್ಪಿಸಲು 'ಸಿಗ್ಮಾ' ಮುಂದೂಡಿದ ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್!

ತಮ್ಮ ತಂದೆ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜೊತೆಗೆ ಬಾಕ್ಸ್ ಆಫೀಸ್ ಸಂಘರ್ಷ ತಪ್ಪಿಸಲು ಜೇಸನ್ ಸಂಜಯ್ ಅವರು ತಾವು ನಟಿಸಿ, ನಿರ್ದೇಶಿಸಿರುವ ಮೊದಲ ಚಿತ್ರ 'ಸಿಗ್ಮಾ' ಬಿಡುಗಡೆಯನ್ನು ಮುಂದೂಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ, ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ಜನ ನಾಯಗನ್ ಜುಲೈ 24 ರಂದು ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಎರಡು ದಿನಗಳ ಹಿಂದಷ್ಟೇ ಈ ಜನ ನಾಯಗನ್​​ ಸಿನಿಮಾಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕಿದ್ದು, ಇದೀಗ ಬಿಡುಗಡೆಗೆ ಸಿದ್ಧವಾಗಿದೆ.

ಈ ಸುದ್ದಿಯ ಬೆನ್ನಲ್ಲೇ, ತಮಿಳು ಚಿತ್ರ ಸಿಗ್ಮಾ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರ ಸಿನಿಮಾ ಬಿಡುಗಡೆ ಮುಂದೂಡಿಕೆಯಾಗುವ ಸುದ್ದಿ ಹೊರ ಬಿದ್ದಿದೆ.

ತಮ್ಮ ತಂದೆ ವಿಜಯ್ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜೊತೆಗೆ ಬಾಕ್ಸ್ ಆಫೀಸ್ ಸಂಘರ್ಷ ತಪ್ಪಿಸಲು ಜೇಸನ್ ಸಂಜಯ್ ಅವರು ತಾವು ನಟಿಸಿ, ನಿರ್ದೇಶಿಸಿರುವ ಮೊದಲ ಚಿತ್ರ 'ಸಿಗ್ಮಾ' ಬಿಡುಗಡೆಯನ್ನು ಮುಂದೂಡಿದ್ದಾರೆ ಎಂದು ಮೂಲಗಳು ತಿಳಿಸಿರುವುದಾಗಿ ಎನ್ ಡಿಟಿವಿ ವರದಿ ಮಾಡಿದೆ.

ಜಿಕೆಎಂ ತಮಿಳು ಕುಮಾರನ್ ನಿರ್ಮಿಸಿರುವ, ಜೇಸನ್ ಸಂಜಯ್ ಅವರ ಸಿಗ್ಮಾ ಜುಲೈ 31 ರಂದು ಬಿಡುಗಡೆಯಾಗುವುದಿಲ್ಲ. ಜನ ನಾಯಗನ್ ಬಿಡುಗಡೆ ಹಿನ್ನೆಲೆಯಲ್ಲಿ ಸಿಗ್ಮಾ ಬಿಡುಗಡೆಯನ್ನು ಆಗಸ್ಟ್‌ಗೆ ಮುಂದೂಡಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಸಿಗ್ಮಾ ಸಿನಿಮಾದ ಬಗ್ಗೆ ಹೇಳುವುದಾದರೆ , ಈ ಚಿತ್ರದಲ್ಲಿ ಸಂದೀಪ್ ಕಿಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಾಕಷ್ಟು ಕಾಮಿಡಿ ಸೀನ್ಸ್ ಹೊಂದಿದ್ದು ನಿಧಿ ಹುಡುಕಾಟದ ರೀತಿಯ ಸನ್ನಿವೇಶಗಳನ್ನು ಹೊಂದಿರುವ ಹೈ-ಆಕ್ಟೇನ್ ಎಂಟರ್‌ಟೈನರ್ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!

ನೆರೆ ಸಂತ್ರಸ್ತರಿಗೆ ನೆರವು ಹೊತ್ತು ಹೋದವರಿಗೆ ಶಾಕ್: 'ಇಲ್ಲೇ ಖರೀದಿಸಿ' ಎಂದ ನೇಪಾಳ ಅಧಿಕಾರಿಗಳು! ಆಗಿದ್ದೇನು?

Hit And Run: ಪಾದಚಾರಿಗೂ ಜೀವಂತವಾಗಿ ರಸ್ತೆ ದಾಟುವ ಹಕ್ಕಿದೆ: ದೆಹಲಿ ಕೋರ್ಟ್

ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪದಿದ್ದರೆ TVK ಸಂಪುಟದಿಂದ ಕಾಂಗ್ರೆಸ್ ಹೊರಬರಲಿದೆ: ಸಚಿವ

ಇಸ್ಲಾಂ ಧರ್ಮವೇ ಶ್ರೇಷ್ಠ: ಸಿಎಂ ಡಿಕೆಶಿಯ 6ನೇ ಗ್ಯಾರಂಟಿ- ಹಿಂದೂಗಳಿಗೆ ‘ಸುನ್ನತ್ ಗ್ಯಾರಂಟಿ' ರಾಯರೆಡ್ಡಿ ಕ್ಷಮೆಯಾಚನೆಗೆ ಬಿಜೆಪಿ ಒತ್ತಾಯ!