ಸ್ಪಂದನಾ ಸೋಮಣ್ಣ ಮದುವೆ ತಯಾರಿ ಜೋರು; ಹಳದಿ ಶಾಸ್ತ್ರದ ಸಂಭ್ರಮದಲ್ಲಿ Bigg Boss ಬೆಡಗಿ, Photo, Video ವೈರಲ್..!
ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಹಳದಿ ಶಾಸ್ತ್ರದಲ್ಲಿ ಸ್ಪಂದನಾ ಮತ್ತು ವರುಣ್ ಪರಸ್ಪರ ಹಳದಿ ಹಚ್ಚಿಕೊಂಡು ಖುಷಿಪಟ್ಟಿದ್ದಾರೆ.
ಬೆಂಗಳೂರು: ಕಿರುತೆರೆ ನಟಿ ಹಾಗೂ ಬಿಗ್‌ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ಅವರ ಮದುವೆ ಸಂಭ್ರಮ ಮನೆಮಾಡಿದೆ.
ಬಹುಕಾಲದಿಂದ ಪ್ರೀತಿಸುತ್ತಿದ್ದ ಗೆಳೆಯ ವರುಣ್ ಮುನಿರಾಜು ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ಸ್ಪಂದನಾ ಸಜ್ಜಾಗಿದ್ದಾರೆ. ಈಗಾಗಲೇ ಮದುವೆಯ ಪೂರ್ವಭಾವಿ ಶಾಸ್ತ್ರಗಳು ಅದ್ಧೂರಿಯಾಗಿ ನಡೆಯುತ್ತಿದ್ದು, ಹಳದಿ ಶಾಸ್ತ್ರದ ಸಂಭ್ರಮದ ಕ್ಷಣಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿವೆ.
ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದ ಹಳದಿ ಶಾಸ್ತ್ರದಲ್ಲಿ ಸ್ಪಂದನಾ ಮತ್ತು ವರುಣ್ ಪರಸ್ಪರ ಹಳದಿ ಹಚ್ಚಿಕೊಂಡು ಖುಷಿಪಟ್ಟಿದ್ದಾರೆ. ಶಾಸ್ತ್ರದ ಭಾಗವಾಗಿ ನಡೆದ ತಮಾಷೆಯ ಆಟಗಳು, ನಗು-ಸಂಭ್ರಮದ ಕ್ಷಣಗಳು ಸಮಾರಂಭಕ್ಕೆ ಮತ್ತಷ್ಟು ಕಳೆ ತಂದಿವೆ.
ಸ್ಪಂದನಾ ಮತ್ತು ವರುಣ್ ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದ ಈ ಜೋಡಿ, ಪ್ಯಾರಿಸ್‌ನ ಐಫೆಲ್ ಟವರ್ ಎದುರು ವರುಣ್ ಪ್ರಪೋಸ್ ಮಾಡಿದ್ದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿತ್ತು. ಇದೀಗ ಮದುವೆಯ ಸಂಭ್ರಮದಲ್ಲಿರುವ ಜೋಡಿ ತಮ್ಮ ಪ್ರೀತಿಯ ಪಯಣವನ್ನು ಮೆಲುಕು ಹಾಕುತ್ತಾ ಸಂತಸ ಹಂಚಿಕೊಂಡಿದೆ.