ರವಿಚಂದ್ರನ್, ಅನುರಾಧಾ ಮತ್ತು ಸಿಲ್ಕ್ ಸ್ಮಿತಾ 
ಸಿನಿಮಾ ಸುದ್ದಿ

ಸಾವಿನ ಹಿಂದಿನ ದಿನ ಇಬ್ಬರ ಜೊತೆ ಮಾತನಾಡಲು ಬಯಸಿದ್ದರು ಸಿಲ್ಕ್ ಸ್ಮಿತಾ! ನತದೃಷ್ಟ ನಟಿಯ ಜೊತೆಯಲ್ಲೇ ಹೋಯ್ತಾ ಅಪೂರ್ಣ ಸಂಭಾಷಣೆ!

ಸೆಪ್ಟೆಂಬರ್ 22, 1996 ರ ರಾತ್ರಿ, ಅವರು ನಟಿ ಅನುರಾಧಾ ಅವರಿಗೆ ಕರೆ ಮಾಡಿ ಬರಲು ಹೇಳಿದರು. ಅವರು ಚರ್ಚಿಸಲು ಬಯಸಿದ್ದ ಒಂದು ಪ್ರಮುಖ ವಿಷಯವಿತ್ತು. ಆದರೆ ಅನುರಾಧ ಆ ಸಂಜೆ ಬರಲು ಸಾಧ್ಯವಾಗಲಿಲ್ಲ.

ದಕ್ಷಿಣ ಚಿತ್ರರಂಗದಲ್ಲಿ ತಮ್ಮ ಪ್ರಣಯ ಪಾತ್ರಗಳಿಂದ ಅಳಿಸಲಾಗದ ಛಾಪು ಮೂಡಿಸಿದ ನಟಿ ಸಿಲ್ಕ್ ಸ್ಮಿತಾ, ಒಂದು ಹಂತದಲ್ಲಿ ಸ್ಟಾರ್ ಹೀರೋಗಳಿಗೆ ಸಮಾನವಾದ ಕ್ರೇಜ್ ಗಳಿಸಿದರು.

ಆಂಧ್ರದಲ್ಲಿ ಹುಟ್ಟಿ ಬೆಳೆದವರು ನಟಿ ಸಿಲ್ಕ್ ಸ್ಮಿತಾ. ಇವರ ನಿಜವಾದ ಹೆಸರು ವಡಲ್ಪಟ್ಟಿ ವಿಜಯಲಕ್ಷ್ಮಿ. ಸಿನಿಮಾ ಅವರಿಗೆ ಸಿಲ್ಕ್ ಸ್ಮಿತಾ ಎಂಬ ಗುರುತನ್ನು ನೀಡಿತು. ಕೇವಲ 18 ವರ್ಷಗಳಲ್ಲೇ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ 450ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕುಟುಂಬದ ಪರಿಸ್ಥಿತಿಯಿಂದಾಗಿ ಅರ್ಧಕ್ಕೆ ವಿದ್ಯಾಭ್ಯಾಸವನ್ನು ನಿಲ್ಲಿಸಿದ ಸಿಲ್ಕ್ ಸ್ಮಿತಾ ಅವರಿಗೆ 14 ನೇ ವಯಸ್ಸಿನಲ್ಲಿ, ಅವರಿಗಿಂತ ಅತಿ ಹೆಚ್ಚು ವಯಸ್ಸಾದ ವ್ಯಕ್ತಿಯನ್ನು ವಿವಾಹವಾದರು. ಮದುವೆಯ ನಂತರ ಗಂಡ ಮತ್ತು ಅತ್ತೆಯ ಕಿರುಕುಳ ತಾಳಲಾರದೆ ಮನೆಯಿಂದ ಹೊರಬಂದರು.

ನಂತರ ಚೆನ್ನೈ ಗೆ ಬಂದು ತಮ್ಮ ತಾಯಿಯ ಜೊತೆ ವಾಸಿಸಲು ಆರಂಭಿಸಿದರು. ಮೊದಲು ಟಚ್ ಅಪ್ ಆರ್ಟಿಸ್ಟ್ ಆಗಿ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿದ ಸಿಲ್ಕ್ ಸ್ಮಿತಾ ಅವರಿಗೆ 'ಇನಯೇ ತೇಡಿ' ಎಂಬ ಮಲಯಾಳಂ ಚಿತ್ರವು ಸಿನಿಮಾ ಅವಕಾಶ ನೀಡಿತು. ಮಲಯಾಳಂ ನಿರ್ದೇಶಕ ಆಂಟನಿ ಈಸ್ಟ್‌ಮನ್ ಸಿಲ್ಕ್ ಸ್ಮಿತಾಗೆ ನಾಯಕಿಯಾಗಿ ಅವಕಾಶ ನೀಡಿದರು. 'ವಂಡಿಚಕ್ಕರಂ' ಚಿತ್ರದಲ್ಲಿ ನಟಿಸುವ ಮೂಲಕ ಪ್ರಸಿದ್ಧರಾದರು. ಅಲ್ಲದೆ ಈ ಚಿತ್ರದಲ್ಲಿ ಸಿಲ್ಕ್ ಪಾತ್ರದಲ್ಲಿ ನಟಿಸಿದ ಸ್ಮಿತಾ ನಂತರ ಸಿಲ್ಕ್ ಸ್ಮಿತಾ ಎಂದು ಅಭಿಮಾನಿಗಳಿಂದ ಕರೆಯಲ್ಪಟ್ಟರು.

ನಂತರ ಚಿತ್ರಗಳಲ್ಲಿ ನಟಿಸಲು ಹೆಚ್ಚೆಚ್ಚು ಅವಕಾಶಗಳನ್ನು ಪಡೆದರು. ಆದರೂ, ಅವರ ಪಾತ್ರವು ಹೆಚ್ಚು ಚರ್ಚೆಯಾಗಲಿಲ್ಲ. ಅವರು ಡಾನ್ಸರ್ ಅಲ್ಲದಿದ್ದರೂ, ಐಟಂ ಡಾನ್ಸ್ ಅವರಿಗೆ ಕೈ ಹಿಡಿಯಲು ಪ್ರಾರಂಭಿಸಿತು. ಆದರೆ ಕಾಲ ಕ್ರಮೇಣ ಸಿನಿಮಾ ಕಥೆಗಳಲ್ಲಿ ಅವರಿಗೆ ಪಾತ್ರಗಳ ಬದಲು ಕೇವಲ ಐಟಂ ಸಾಂಗ್ ಗಳಿಗೆ ಅವರನ್ನು ಆಯ್ಕೆ ಮಾಡಲು ಪ್ರಾರಂಭಿಸಿದಾಗ ಸಿಲ್ಕ್ ಸ್ಮಿತಾ ಅಕ್ಷರಶಃ ಕುಗ್ಗಿ ಹೋದರು.

ಅವರ ಸಾವಿನ ನಂತರ ಸಿಲ್ಕ್ ಸ್ಮಿತಾ ಜೀವನದ ದುರಂತ ಅಂತ್ಯವು ಭಾರೀ ಸುದ್ದಿಯಾಗಿತ್ತು. ಕೆಲವರು ಅವರ ವ್ಯಾಂಪ್ ಪಾತ್ರಗಳನ್ನು ನೆನಪಿಸಿಕೊಂಡರೆ, ಇತರರು ನಾಯಕಿ ಮತ್ತು ನಿರ್ಮಾಪಕಿಯಾಗಿ ಅವರ ಪ್ರಯತ್ನಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಸಿಲ್ಕ್ ಸ್ಮಿತಾ ಅವರು ಪ್ರತಿಯೊಂದು ವಿಭಾಗದಲ್ಲೂ ತೋರಿಸಿದ ಧೈರ್ಯ ಅವರನ್ನು ಎದ್ದು ಕಾಣುವಂತೆ ಮಾಡಿತು. ಒಂದು ಹಂತದಲ್ಲಿ ಸಿನಿಮಾ ಅವಕಾಶಗಳು ಕಡಿಮೆಯಾದಾಗ ಸಿನಿಮಾ ನಿರ್ಮಾಣ ಮಾಡಲು ಪ್ರಾರಂಭಿಸಿದರು. ಆಗ ಅವರಿಗೆ 2 ಕೋಟಿ ರೂ.ವರೆಗೆ ನಷ್ಟವಾಗಿ ಮದ್ಯಪಾನಕ್ಕೆ ದಾಸರಾದರು.

ಸೆಪ್ಟೆಂಬರ್ 22, 1996 ರ ರಾತ್ರಿ, ಅವರು ನಟಿ ಅನುರಾಧಾ ಅವರಿಗೆ ಕರೆ ಮಾಡಿ ಬರಲು ಹೇಳಿದರು. ಅವರು ಚರ್ಚಿಸಲು ಬಯಸಿದ್ದ ಒಂದು ಪ್ರಮುಖ ವಿಷಯವಿತ್ತು. ಆದರೆ ಅನುರಾಧ ಆ ಸಂಜೆ ಬರಲು ಸಾಧ್ಯವಾಗಲಿಲ್ಲ. ಅವರು ಮರುದಿನ ಭೇಟಿಯಾಗಲು ನಿರ್ಧರಿಸಿದರು. ಅದಾದ ನಂತರ ಅವರು ಸ್ಮಿತಾ ನಟ ರವಿಚಂದ್ರನ್ ಅವರನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ರವಿಚಂದ್ರನ್ ಶೂಟಿಂಗ್‌ನಲ್ಲಿದ್ದ ಕಾರಣ ಅವರ ಜೊತೆ ಮಾತನಾಡಲು ಸಾಧ್ಯವಾಗಲಿಲ್ಲ.

ಆದರೆ ಅಂದು ಕರೆ ಸ್ವೀಕರಿಸಲು ಸಾಧ್ಯವಾಗದ ಇಬ್ಬರಿಗೂ ಬೆಳಗ್ಗೆ ವೇಳೆಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿತ್ತು. ಸಿಲ್ಕ್ ಸ್ಮಿತಾ ಅವರ ಚೆನ್ನೈ ಮನೆಯಲ್ಲಿ ನ ಸಾವನ್ನಪ್ಪಿದ್ದರು ಅವರಿಗೆ 35 ವರ್ಷ ವಯಸ್ಸಾಗಿತ್ತು.

ಆದರೆ ಅವರು ಮಾತನಾಡಬೇಕೆಂದಿದ್ದ ಸಂಭಾಷಣೆಗಳು ಅಪೂರ್ಣವಾಗಿಯೇ ಉಳಿದು ಹೋದವು. ಅವರು ಮದ್ಯದ ಪ್ರಭಾವದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿದೆ. ಕಾರಣ ಸ್ಪಷ್ಟವಾಗಿಲ್ಲ. ಆದರೆ ಅವರು ಮಾತನಾಡಲು ಬಯಸಿದ್ದ ಇಬ್ಬರಲ್ಲಿ ಒಬ್ಬರು ಕರೆ ಸ್ವೀಕರಿಸಿ ಮಾತನಾಡಿದ್ದರೇ ಬಹುಶಃ ಸಿಲ್ಕ್ ಸ್ಮಿತಾ ಇಂದು ಜೀವಂತವಾಗಿರುತ್ತಿದ್ದರೇನೋ...

ಸೆ. 9ರಂದು ಗೃಹ ಸಚಿವಾಲಯದೊಂದಿಗೆ ಮಾತುಕತೆಗೆ ಮುನ್ನ ಹೋರಾಟ ತೀವ್ರ: ಲಡಾಖ್ ಉನ್ನತ ಮಂಡಳಿ ಎಚ್ಚರಿಕೆ

ಕೇರಳಂನ ತ್ರಿಶೂರ್‌ನಲ್ಲಿ ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ: ತಮಿಳು ನಾಡಿನ ಎಂಟು ಮಂದಿ ಸಾವು, 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು; Video

ಮತ್ತೊಂದು ಮಹಾಯುದ್ಧದ ಭೀತಿ: ಇರಾನ್‌ನ 'Pickaxe Mountain' ಧ್ವಂಸಕ್ಕೆ ಅಮೆರಿಕ ಸ್ಕೆಚ್, "ಶೀಘ್ರದಲ್ಲೇ ದಾಳಿ" ಎಂದ ಡೊನಾಲ್ಡ್ ಟ್ರಂಪ್..!

ಪ್ರಧಾನಿ ಮೋದಿ ಮೆಚ್ಚಿದ ಇಡ್ಲಿ ನಿಂಗಮ್ಮನಿಗೆ ಸಂಕಷ್ಟ: ಅಂಗಡಿ ನಡೆಸದಂತೆ GBA ಅಧಿಕಾರಿಗಳ ವಾರ್ನಿಂಗ್!

CJP ಪ್ರತಿಭಟನೆ ವೇಳೆ ಹೆಸರು ದುರುಪಯೋಗ: 'ಬಲಪಂಥೀಯ' ಇನ್‌ಫ್ಲ್ಯುಯೆನ್ಸರ್ ವಿರುದ್ಧ ಕೇಸ್ ದಾಖಲಿಸಿದ ಚಿರಾಗ್ ಪಾಸ್ವಾನ್