ಟಾಕ್ಸಿಕ್ ಚಿತ್ರದಲ್ಲಿ ಯಶ್  Online Desk
ಸಿನಿಮಾ ಸುದ್ದಿ

ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಯಶ್ Toxic: ಇಲ್ಲಿಯವರೆಗೂ ಚಿತ್ರದ ಒಟ್ಟು ಗಳಿಕೆ ಎಷ್ಟು ಗೊತ್ತಾ?

ಬಾಕ್ಸ್ ಆಫೀಸ್‌ನಲ್ಲಿ ಯಶ್ 'ಟಾಕ್ಸಿಕ್' ಅಬ್ಬರ; ವಿಶ್ವದಾದ್ಯಂತ ರಾಕಿಂಗ್ ಸ್ಟಾರ್ ಚಿತ್ರ ಗಳಿಸಿದ್ದೆಷ್ಟು ಗೊತ್ತಾ? ಇಲ್ಲಿದೆ ಕಲೆಕ್ಷನ್ ಸುನಾಮಿಯ ರಿಪೋರ್ಟ್:

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಆ್ಯಕ್ಷನ್ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಬೆಳ್ಳಿಪರದೆಯ ಮೇಲೆ ಹೊಸ ಸಂಚಲನ ಸೃಷ್ಟಿಸಿರುವ ಸಿನಿಮಾದಲ್ಲಿ ಯಶ್ ಅವರ ಮಾಸ್ ಅವತಾರ ಹಾಗೂ ವಿಭಿನ್ನ ಮೇಕಿಂಗ್ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದ್ದು, ಕಲೆಕ್ಷನ್ ವಿಚಾರದಲ್ಲೂ ಹೊಸ ದಾಖಲೆಗಳತ್ತ ಮುನ್ನುಗ್ಗುತ್ತಿದೆ. ಅದರಂತೆ, ಸಿನಿಮಾ ಬಿಡುಗಡೆಯಾದ ದಿನದಿಂದ ಇಲ್ಲಿಯವರೆಗಿನ ಬಾಕ್ಸ್ ಆಫೀಸ್ ವರದಿ ಇಲ್ಲಿದೆ:

300ಕೋಟಿಗೂ ಅಧಿಕ...

ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಆಗಸ್ಟ್ 26, 2026 ರಂದು ತೆರೆಕಂಡ ಚಿತ್ರವು ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ₹333.45 ಕೋಟಿಗೂ ಅಧಿಕ ಒಟ್ಟು ಗಳಿಕೆ ಮಾಡಿದೆ. ಅದರಂತೆ,

  • ವಿಶ್ವದಾದ್ಯಂತ ಒಟ್ಟು ಕಲೆಕ್ಷನ್: ₹334.50 ಕೋಟಿ

  • ಭಾರತದ ಒಟ್ಟು ಕಲೆಕ್ಷನ್: ₹290.64 ಕೋಟಿ

  • ಭಾರತದ ನಿವ್ವಳ ಕಲೆಕ್ಷನ್: ₹243.52 ಕೋಟಿ

  • ವಿದೇಶಿ ಗಳಿಕೆ: ₹44.00 ಕೋಟಿ

ಮುಂದುವರೆದು, ಸ್ವಾತಂತ್ರ್ಯೋತ್ತರ ಗೋವಾದ ಹಿನ್ನೆಲೆಯಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 

ಒಟ್ಟಾರೆಯಾಗಿ, ಚಿತ್ರವು ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನ ಕಾಣುವ ಮೂಲಕ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಚಿತ್ರವು ಭಾರತೀಯ ಮಾರುಕಟ್ಟೆಯಲ್ಲಿ ₹250 ಕೋಟಿ ನಿವ್ವಳ ಗಳಿಕೆಯ ಮೈಲಿಗಲ್ಲು ತಲುಪುವತ್ತ ಮುನ್ನುಗ್ಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪ್ರಧಾನಿ ಮೋದಿ, ಸ್ಮಿತ್‌ ಮಚ್ಚಾರ್‌ಗೆ ನೆತನ್ಯಾಹು ಆಹ್ವಾನ!

ನೇಪಾಳದ ಭೀಕರ ಪ್ರವಾಹ ಮಾಸುವ ಮುನ್ನವೇ ಟಿಬೆಟ್​ನಲ್ಲಿ 7.0 ತೀವ್ರತೆಯ ಪ್ರಬಲ ಭೂಕಂಪ: 2 ಬಾರಿ ಕಂಪಿಸಿದ ಭೂಮಿ!

'ನನಗೆ ಎಕ್ಸ್‌ಪೋಸಿಂಗ್ ಅಥವಾ ಮೈ ತೋರಿಸೋದು ಇಷ್ಟ ಇಲ್ಲ': 'ಪೆದ್ದಿ' ಜಾನ್ವಿ ಕಪೂರ್ ಬಗ್ಗೆ ರಶ್ಮಿಕಾ ಹೇಳಿದ್ದೇನು?

ಈದ್ ಮಿಲಾದ್​​ಗೆ ಅನುಮತಿ ಪಡೆಯಲಾಗಿತ್ತೆ? ಪ್ರಿಯಾಂಕ್ ಖರ್ಗೆಗೆ RSS, ಹಿಂದೂ ಅಂದ್ರೆ ಅಲರ್ಜಿ: ಯತ್ನಾಳ್ ಕಿಡಿ

ಫ್ರಾನ್ಸ್ ಹಿಂಸಾಚಾರ - ಭಾರತದ ಪ್ರತಿಭಟನೆಗೆ ಲಿಂಕ್; ರಾಹುಲ್ ಗಾಂಧಿ 'ದೇಶದ್ರೋಹಿ': BJP ಕಿಡಿ