Bigg Boss ಕನ್ನಡ ಸೀಸನ್ 13ರಲ್ಲಿ ಎರಡನೇ ವಾರ ಸ್ಪರ್ಧಿಗಳ ನಡುವೆ ಜಗಳ ಜೋರಾಗಿದೆ. ಟಾಸ್ಕ್ ವೇಳೆ ಮಂಜ ಸಹ ಸ್ಪರ್ಧಿಗಳ ಮೇಲೆ ಅಬ್ಬರಿಸುತ್ತಿದ್ದಾರೆ. ನಿನ್ನೆಯ ಟಾಸ್ಕ್ ವೇಳೆ ತನಗೆ ಹೊಡೆಯಲು ಹೋದ ಐಶ್ವರ್ಯಗೆ ಮಂಜ ಆವಾಜ್ ಹಾಕಿದ್ದ. ಇದೀಗ ನಾಮಿನೇಷನ್ ವೇಳೆಯೂ ಸಹ ಜಗಳ ಜೋರಾಗಿ ನಡೆದಿದ್ದು, ಮಂಜ, ಮಹಿಳಾ ಸ್ಪರ್ಧಿಯನ್ನು 'ಕ್ಯಾರೆಕ್ಟರ್ ಲೆಸ್' ಎಂದಿದ್ದಾರೆ. ಇದರಿಂದ ಕೆರಳಿದ ಕಾವ್ಯಾ ಮಂಜನ ವಿರುದ್ಧ ಕಿಡಿಕಾರಿದ್ದು, ನೀನು 'ಗಂಡಸೇ ಅಲ್ಲ' ಎಂದು ಹೇಳಿದ್ದಾಳೆ. ಇದು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತುಗಳು ಎಲ್ಲೇ ಮೀರುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ನಾಮಿನೇಷನ್ ವೇಳೆ ನೀನು 50 ಪೈಸೆ ಪ್ರಯೋಜನ ಇಲ್ಲ ಅಂತ ಮಂಜ ಹೇಳಿದ್ದಕ್ಕೆ ಕಾವ್ಯಾ ತಿರುಗೇಟು ನೀಡಿದ್ದಾಳೆ. ನಾನೂ ಹೇಳ್ತೀನಿ ನೀನು ಗಂಡಸು ಅಲ್ಲ ಅಂತ ಮಂಜ ವಿರುದ್ಧ ಕಾವ್ಯ ಗೌಡ ಗುಡುಗಿದ್ದಳು. ಇದೀಗ ಮಂಜನಿಗೆ ಕಾವ್ಯ ಕೊಟ್ಟಿರುವ ಕೌಂಟರ್‌ಗೆ ನೆಟ್ಟಿಗರು ಶಹಬ್ಬಾಸ್ ಹೇಳುತ್ತಿದ್ದಾರೆ. ಇವರಿಗೆ ಅವರ ಲೆವೆಲ್‌ಗೆ ಇಳಿದು ಅವರದ್ದೇ ಭಾಷೆಯಲ್ಲೇ ಮಾತನಾಡಬೇಕು. ಆಗ ಮಾತ್ರ ಮುಖಕ್ಕೆ ಹೊಡೆದ ಹಾಗಾಗಿ ಶೇಪ್ ಔಟ್ ಆಗೋದು.