ಅನಂತ್ ನಾಗ್ 
ಸಿನಿಮಾ ಸುದ್ದಿ

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ: 'ಉದರನಿಮಿತ್ತಂ ಬಹುಕೃತ ವೇಷಂ' ಕರ್ನಾಟಕ ನನ್ನ ಕರ್ಮ ಭೂಮಿ- ಅನಂತ್ ನಾಗ್ ಭಾವುಕ ಮಾತು!

ಕಳೆದ 55 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಸಲುಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಮತ್ತು ನಿರ್ದೇಶಕರಿಗೆ ನಾನು ಈ ಅತ್ಯುನ್ನತ ಗೌರವವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ಕೆವಾಡಿಯಾ: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ, ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವಾದ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಲಾಗಿದೆ. ಗುಜರಾತ್​​ನ ಏಕತಾ ನಗರದಲ್ಲಿ ಆಯೋಜಿಸಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಂತ್ ನಾಗ್​ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಬಾಲಿವುಡ್, ಮಾಲಿವುಡ್, ಕಾಲಿವುಡ್‌ನ ಪ್ರಶಸ್ತಿ ಪುರಸ್ಕೃತರೆಲ್ಲ ಎದ್ದು ನಿಂತು ಗೌರವಿಸಿದ್ದಾರೆ. ಇದಕ್ಕೂ ಮಂಚೆ ಅನಂತ್ ನಾಗ್ ಅವರ ಸಿನಿಮಾ ಜರ್ನಿಯ ವಿಶೇಷ ವಿಡಿಯೋ ಕೂಡ ಪ್ರದರ್ಶನ ಆಗಿದೆ. ಕೆಜಿಎಫ್, ಗಾಳಿಪಟ ಚಿತ್ರದ ಅಭಿನಯದ ವಿಚಾರವು ಈ ವಿಡಿಯೋದಲ್ಲಿದೆ.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್, ಜನ್ಮ ಭೂಮಿ, ಕರ್ಮ ಭೂಮಿ, ಧರ್ಮ ಭೂಮಿಗೆ ನಮಿಸಿದ್ದಾರೆ. ಈ ಪ್ರಶಸ್ತಿ ಸಿಗಲು ಕೇವಲ ಕರ್ನಾಟಕ ಮತ್ತು ಕನ್ನಡಿಗರು ಮಾತ್ರ ಕಾರಣ. ಕಳೆದ 55 ವರ್ಷಗಳಿಂದ ನನ್ನನ್ನು ಪ್ರೀತಿಯಿಂದ ಸಲುಹಿದ ಸಮಸ್ತ ಕರ್ನಾಟಕದ ಪ್ರೇಕ್ಷಕರಿಗೆ, ಚಿತ್ರರಂಗದ ತಂತ್ರಜ್ಞರಿಗೆ ಮತ್ತು ನಿರ್ದೇಶಕರಿಗೆ ನಾನು ಈ ಅತ್ಯುನ್ನತ ಗೌರವವನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಜೀವನ ಮತ್ತು ಸಿನಿಮಾ ಪಯಣದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಂಡಿದ್ದು, ಮೊದಲ 12-13 ವರ್ಷ ನಾನು ಮಠದಲ್ಲಿ ಇದ್ದೆ, ಬಳಿಕ ಮುಂಬೈಗೆ ಹೋದೆ, ಮುಂಬೈ ನಲ್ಲಿ ‘ಚೈತನ್ಯ ಮಹಾಪ್ರಭು’ ಸ್ವಾಮೀಜಿ ಬಗ್ಗೆ ಮಾಡಿದ ನಾಟಕ ನನ್ನ ನಟನಾ ವೃತ್ತಿಯ ಮೊದಲ ನಾಟಕವಾಯ್ತು, ಅಲ್ಲಿಂದಲೇ ನಟನಾ ವೃತ್ತಿ ಆರಂಭವಾಯ್ತು. ಮಠದಲ್ಲಿದ್ದಾಗ ಆದಿಶಂಕರಾಚಾರ್ಯ ಭಜಗೋವಿಂದಂ ಓದಿದ್ದೆ, ‘ಉದರನಿಮಿತ್ತಂ ಬಹುಕೃತ ವೇಷಂ’, ಕನಕದಾಸರ, ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬ ಮಾತಿನಂತೆ ಉದರ ನಿಮಿತ್ತವಾಗಿ ಆರಂಭಿಸಿದ ವೃತ್ತಿ ಇದು ಎಂದು ನೆನಪು ಮಾಡಿಕೊಂಡಿದ್ದಾರೆ.

ಮುಂಬೈನಲ್ಲಿ ಇದ್ದ ಐದು ವರ್ಷಗಳಲ್ಲಿ 50 ನಾಟಕಗಳಲ್ಲಿ ನಟಿಸಿದೆ. ಬಳಿಕ ಸಿನಿಮಾನಲ್ಲಿ ಅವಕಾಶ ಸಿಕ್ಕಿತು, ಮೊದಲು ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ಕಿತು ಬಳಿಕ ಹಿಂದಿಯಲ್ಲಿ. ಎಂಎಸ್ ಸತ್ಯು, ಶ್ಯಾಮ್ ಬೆನಗಲ್ ಇನ್ನೂ ಹಲವರೊಟ್ಟಿಗೆ ಕೆಲಸ ಮಾಡಿದೆ. ಆಗ ಹೊಸ ಅಲೆಯ ಸಿನಿಮಾ, ಆರ್ಟ್ ಸಿನಿಮಾಗಳಿಗೆ ಅವಕಾಶ ಇತ್ತು. ಆ ಬಳಿಕ ಕರ್ನಾಟಕದಲ್ಲಿ ಅವಕಾಶ ನನಗೆ ಹೆಚ್ಚಾಗಿತ್ತು. ಹಾಗಾಗಿ ಕರ್ನಾಟಕಕ್ಕೆ ಮರಳಿದೆ. ಕರ್ನಾಟಕವೇ ನನ್ನ ಕರ್ಮಭೂಮಿ ಆಯ್ತು’ ಎಂದು ಅನಂತ್ ನಾಗ್ ಹೇಳಿಕೊಂಡರು.

ಕಳೆದ ವರ್ಷ, ಇದೇ ಶ್ರೀಮತಿ ದ್ರೌಪದಿ ಮುರ್ಮು ಅವರಿಂದ ಪದ್ಮಭೂಷಣ ಪ್ರಶಸ್ತಿ ಪಡೆದುಕೊಂಡೆ. ಈ ಬಾರಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿರುವುದು ಖುಷಿ ಇದೆ. ಆದರೆ ಈ ಪ್ರಶಸ್ತಿ ಕೇವಲ ನನ್ನೊಬ್ಬನದ್ದೇ ಅಲ್ಲ. ನನ್ನ ಸಿನಿಮಾಗಳ ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರು, ತೆರೆಯ ಮುಂದೆ, ಹಿಂದೆ ಕೆಲಸ ಮಾಡಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ನಾನು ಅರ್ಪಿಸುತ್ತೇನೆ. ನನ್ನ ಜನ್ಮ ಭೂಮಿ, ಧರ್ಮ ಭೂಮಿ ಭಾರತ ಮತ್ತು ಕರ್ಮ ಭೂಮಿ ಕರ್ನಾಟಕಕ್ಕೆ ಋಣಿಯಾಗಿ ಇರುತ್ತೇನೆ’ ಎಂದು ಅನಂತ್ ನಾಗ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನ್ಯೂನತೆಗಳನ್ನು ಸರಿಪಡಿಸಲು ಕಸ್ತೂರಿರಂಗನ್ ವರದಿಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಭೌತಿಕ ಪರಿಶೀಲನೆ: ಸಿಎಂ ಶಿವಕುಮಾರ್

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆ!

ಅಕ್ರಮ ಆಸ್ತಿ ಗಳಿಕೆ: ರಾಜ್ಯಾದ್ಯಂತ ಎಂಟು ಸರ್ಕಾರಿ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಲೋಕಾಯುಕ್ತ ದಾಳಿ, ಒಟ್ಟು 29.61 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ!

ಪಶ್ಚಿಮ ಬಂಗಾಳ ಪ್ರವೇಶಿಸಲು ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಸಹಾಯ: ಭಾರತೀಯ ಯೋಧನ ಬಂಧನ

'ಶಾರುಖ್ ಖಾನ್‌ಗೆ ಏನಾಯಿತು?': ನಡೆಯಲು ಕಷ್ಟಪಡುತ್ತಿರುವ ಖ್ಯಾತ ನಟ; Video ವೈರಲ್; ಅಭಿಮಾನಿಗಳಲ್ಲಿ ಆತಂಕ!