ಯಶಸ್, ಸೌಂದರ್ಯ ಶೆಟ್ಟಿ 
ಸಿನಿಮಾ ಸುದ್ದಿ

BBK-13: ಯಶಸ್, ಸೌಂದರ್ಯ ಶೆಟ್ಟಿ ಮಧ್ಯೆ ಚಿಗುರಿತಾ ಪ್ರೀತಿ? VIDEO

ಕಳೆದ ಬಾರಿ ಗಿಲ್ಲಿ ನಟ ಹಾಗೂ ಕಾವ್ಯ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಕನ್ನಡಿಗರು 'ಗಿಲ್ಲಿ ಜೋಡಿ' ಎಂದು ಕರೆಯುತ್ತಿದ್ದರು

ಪ್ರತಿ ಬಾರಿಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಒಂದು ಜೋಡಿಯ ಬಗ್ಗೆ ಗಾಸಿಪ್ ಇದ್ದೇ ಇರುತ್ತದೆ. ಇದು ಆಯೋಜಕರ ತಂತ್ರವೋ ಅಥವಾ ನಾಟಕವೋ ಒಂದು ಗೊತ್ತಿಲ್ಲ. ಆದ್ರೆ ಪ್ರತಿ ಸೀಸನ್ ನಲ್ಲೂ ಒಂದಲ್ಲಾ ಒಂದು ಜೋಡಿ ಪ್ರಸಿದ್ಧಿಯಾಗುವುದು ಸಾಮಾನ್ಯ.

ಕಳೆದ ಬಾರಿ ಗಿಲ್ಲಿ ನಟ ಹಾಗೂ ಕಾವ್ಯ ಜೋಡಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಕನ್ನಡಿಗರು 'ಗಿಲ್ಲಿ ಜೋಡಿ' ಎಂದು ಕರೆಯುತ್ತಿದ್ದರು. ಇದೇ ರೀತಿಯಲ್ಲಿ ಚಂದನ್ ಶೆಟ್ಟಿ - ನಿವೇದಿತಾ ಗೌಡ, ಅರವಿಂದ್ ಕೆ.ಪಿ - ದಿವ್ಯಾ ಉರುಡುಗ: ರೂಪೇಶ್ ಶೆಟ್ಟಿ - ಸಾನ್ಯ ಅಯ್ಯರ್ , ತಿಲಕ್ - ಶ್ವೇತಾ ಪಂಡಿತ್ ಜೋಡಿ ಪಾಪ್ಯುಲರ್ ಆಗಿತ್ತು.

ಈ ಬಾರಿಯೂ ದೊಡ್ಮನೆಯಲ್ಲಿ ಅಂತಹ ಜೋಡಿಯೊಂದಿದ್ದು, ಯಶಸ್, ಸೌಂದರ್ಯ ಮಧ್ಯೆ ಪ್ರೀತಿ ಚಿಗುರಿರುವಂತೆ ಕಂಡುಬರುತ್ತಿದೆ. ಹೌದು. ಸುದೀಪ್ ಆದೇಶದಂತೆ ಸೌಂದರ್ಯ ಶೆಟ್ಟಿ ಜೈಲು ಸೇರಿದ್ದಾರೆ. ಜೈಲಿನ ಹೊರಗಡೆ ನಿಂತಿದ್ದ ಯಶಸ್‌ಗೆ ಸೌಂದರ್ಯ, ನಾನು ಜೈಲಿನಲ್ಲಿ ಇದ್ರೆ ನನ್ನ ನೋಡೋಕೆ ಬರ್ತೀರಾ? ಎಂದು ಕೇಳುತ್ತಾರೆ. ಅದಕ್ಕೆ ಈಗ ಎಲ್ಲಿದ್ಯಾ? ಎಂದು ಯಶಸ್ ಕೇಳಿದ ಪ್ರಶ್ನೆಗೆ, ನಿನ್ನ ಮನಸ್ಸಿನಲ್ಲಿದ್ದೇನೆ ಎಂದು ಸೌಂದರ್ಯ ತರಲೆ ಉತ್ತರ ಕೊಡುತ್ತಾರೆ.

ಅಲ್ಲಿಂದ ಏನಾಯ್ತೋ… ಯಶಸ್ ಮಾತ್ರ ಜೈಲಿನ ಸುತ್ತನೇ.. ಅಲ್ಲ ಸೌಂದರ್ಯ ಸುತ್ತನೇ ತಿರುಗುತ್ತಿದ್ದಾರೆ. ಜೈಲಿನ ಪಕ್ಕದಲ್ಲಿ ಡಿಪ್ಸ್ ಹೊಡೆಯುತ್ತಾ ಹೀರೋ ಫೋಸ್ ಕೊಟ್ಟಿದ್ದಾರೆ. ಅದಕ್ಕೆ ಸೌಂದರ್ಯ ಹೀರೋ ಆಗಿ ಕಾಣಿಸಿಕೊಂಡು ಏನು ಪ್ರಯೋಜನ? ಅಂತಾರೆ. ಅದಕ್ಕೆ ಯಶಸ್ ಜತೆಗೊಬ್ರು ಹೀರೋಯಿನ್ ಇರಬೇಕಲ್ವಾ? ಎಂದು ಲವ್ ಕಹಾನಿ ಶುರುವಾಗುತ್ತದೆ.

ಇದರ ನಡುವೆ ಬಿಗ್‌ಬಾಸ್ ಟಾಸ್ಕ್‌ವೊಂದನ್ನು ಕೊಟ್ಟಿದ್ದು, ಪುರುಷರೆಲ್ಲರೂ ಗುಲಾಬಿ ಹೂ ಹಿಡಿದು ನಿಂತಿರುತ್ತಾರೆ. ಈ ಪೈಕಿ ಬಿಗ್‌ಬಾಸ್ ಹೇಳುವಂತೆ ನಿಮಗಿಷ್ಟವಾದ ಯಾರಾದರೊಬ್ಬರ ಕೈಯಿಂದ ಗುಲಾಬಿ ತೆಗೆದುಕೊಳ್ಳಬೇಕು. ಆಗ ಸೌಂದರ್ಯ ನಾಚಿಕೆಯಿಂದ ಯಶಸ್ ಕೈಯಿಂದ ಗುಲಾಬಿ ಪಡೆದುಕೊಂಡಿದ್ದು, ಮನೆಯಲ್ಲಿ ಹೊಸ ಪ್ರೇಮಕಾವ್ಯವೊಂದು ಶುರುವಾದಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕೊಲೆ ಆರೋಪಿ ನಟ ದರ್ಶನ್​​ಗೆ ಮತ್ತೊಂದು ಶಾಕ್; ಮಾಫಿ ಸಾಕ್ಷಿ ಆದೇಶ ಪ್ರಶ್ನಿಸಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ವಜಾ!

India Rich List 2026: ಮುಕೇಶ್ ಅಂಬಾನಿಯನ್ನೇ ಹಿಂದಿಕ್ಕಿದ ಗೌತಮ್ ಅದಾನಿ, ಭಾರತದ ಅತ್ಯಂತ ಶ್ರೀಮಂತ!

ಆಂಧ್ರದಲ್ಲಿ ಭೀಕರ ದುರಂತ; ಹಳಿ ಮೇಲೆ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ರೈಲು ಢಿಕ್ಕಿ, 4 ಸಾವು, ಓರ್ವ ಗಂಭೀರ! Video

'ಪಾಕಿಸ್ತಾನಕ್ಕೆ ಸರಿಯಾದ ಸಲಹೆ ನೀಡಿ': ಜಮ್ಮು- ಕಾಶ್ಮೀರ ಕುರಿತ ಹೇಳಿಕೆ ಬಗ್ಗೆ OIC ಗೆ ಭಾರತದ ತಿರುಗೇಟು!

ಗಂಡನಿಗೆ ಗೊತ್ತಾಗದಂತೆ ಹೆಂಡತಿ ಅಕೌಂಟ್‌ಗೆ 2 ಸಾವಿರ ಹಾಕ್ತೀವಿ ಅಂದಿದ್ದ ಸರ್ಕಾರಕ್ಕೆ ಈಗ ಯಜಮಾನನ ಆಧಾರ್ ಯಾಕೆ ಬೇಕು?