ಅಂಕಣಗಳು

ಪ್ರಣತಿ.. ನೀ ಯಾಕೆ ನನ್ನ ಕೈ ಹಿಡೀಬಾರ್ದು?

ಪ್ರತಿ ಭಾನುವಾರ ಕನ್ನಡಪ್ರಭದಲ್ಲಿ ಬುಲೆಟ್ ಸಂದರ್ಶನ ಸೊಗಸಾಗಿ ಬರುತ್ತಿದೆ.

ಪ್ರತಿ ಭಾನುವಾರ ಕನ್ನಡಪ್ರಭದಲ್ಲಿ ಬುಲೆಟ್ ಸಂದರ್ಶನ ಸೊಗಸಾಗಿ ಬರುತ್ತಿದೆ. ಫೆಬ್ರವರಿ 17ನೇ ತಾರೀಖಿನ ಪತ್ರಿಕೆಯಲ್ಲಿ ಕರ್ನಾಟಕ ರಾಜ್ಯ ಕಂಡ ದಕ್ಷ ಅಧಿಕಾರಿ ಗೋಪಾಲ ಹೊಸೂರ್ ಆಡಿದ ಮಾತುಗಳು 'ಪೊಲೀಸರ ಶ್ರಮಕ್ಕೆ ವ್ಯವಸ್ಥೆ ಸಾಥ್ ನೀಡಲಿಲ್ಲ' ಅರ್ಥಪೂರ್ಣವಾಗಿತ್ತು. ವೀರಪ್ಪನ್ ಕುರಿತು ಕನ್ನಡ ಸಿನಿಮಾ 'ಅಟ್ಟಹಾಸ'ದಲ್ಲಿ ರಾಜ್ಯ ಪೊಲೀಸರು ಕಡೆಗಣಿಸಿದ್ದಾರೆ ಇದು ನಿಜಕ್ಕೂ ಬೇಸರದ ವಿಷಯ. ವೀರಪ್ಪನ್ ವಿರುದ್ಧ ಹೋರಾಡಿದ ರಾಜ್ಯದ ದಕ್ಷ ಅಧಿಕಾರಿಗಳಾದ ಶಂಕರ ಬಿದರಿ, ಬಿ.ಬಿ. ಅಶೋಕ್ ಕುಮಾರ್, ಜಿ.ಎ. ಭಾವಾ ಇನ್ನೂ ಹೆಚ್ಚು ಕಾರ್ಯಾಚರಣೆಗೆ ಹಗಲು ರಾತ್ರಿ ದುಡಿದಿದ್ದಾರೆ. ಇವರ ಪ್ರಾಮಾಣಿಕತೆಗೆ ಬೆಲೆಯಿಲ್ಲವೆ? ತಮಿಳು ಅಧಿಕಾರಿಗಳನ್ನು ನಾಯಕರಂತೆ ಚಿತ್ರಿಸಿದ್ದಾರೆ. ಈ ಸಿನಿಮಾವನ್ನು ತಮಿಳಿಗೆ 'ಡಬ್ಬು' ಮಾಡುವ ಒಂದೇ ಉದ್ದೇಶಕ್ಕೆ ಕನ್ನಡವನ್ನು, ರಾಜ್ಯದ ಅಧಿಕಾರಿಗಳನ್ನು ಕಡೆಗಣಿಸಿರುವುದು ಎಷ್ಟು ಸರಿ?
- ರವಿಕುಮಾರ್ ಜಿ.ಬಿ, ಬೆಂಗಳೂರು, ಮೊ. 944 9669897.

ಹಲೋ ಡಿಯರ್ ಪ್ರಣತಿ, ನಿನ್ನ ಲೇಖನ ಓದಿ ಪ್ರಭಾವಿತನಾಗಿದ್ದೇನೆ. ನನಗೆ ನಿನ್ನಂಥ ಅರ್ಧ ಕೂದಲು ಮುಚ್ಚಿದ, ತುಂಟ ನಗೆಯ ಚೆಲುವೆ ಬೇಕು. ನಿನ್ನಂತೆ ನಾನೂ ಸುಂದರಾಂಗ. ನಿನ್ನಂಥ ಗುಣವತಿ ಯಾಕೆ ನನ್ನ ಪತ್ನಿಯಾಗಬಾರದು? ತಂದೆ ತಾಯಿಗೆ ನಾನೊಬ್ಬನೇ ಮಗ. ಕೈ ತುಂಬಾ ಸಂಬಳ ಬರ್ತಿದೆ. ನಿನ್ನಂಥ ನಗುಮೊಗದ ಹುಡುಗಿಗಾಗಿ ಕಾಯುತ್ತಿದ್ದೇನೆ.  ಜೀನ್ಸ್, ಟೀ ಶರ್ಟ್ ಧರಿಸಿ, ನನ್ನ ಕೈ ಹಿಡಿದು ಕುಣಿಯುತ್ತಾ ಬರುವ, ನನ್ನಮ್ಮನಿಗೆ ಕೆಲಸ ಹೇಳದೆ ತಾನೇ ಎಲ್ಲಾ ಕೆಲಸ ನಗುವಿನಿಂದಲೇ ಮಾಡುವ, ನನ್ನ ಕೀಟಲೆಗೆ, ಕೀಟಲೆಯಿಂದಲೇ ಉತ್ತರಿಸುವ ತಮಾಷೆಯ ಮಾತಿನಿಂದಲೇ ಎಲ್ಲರನ್ನು ಸೆಳೆಯುವ ನಿನ್ನಂಥ ಮುದ್ದು ಹುಡುಗಿ ನನ್ನವಳಾಗಬೇಕು. ಸದಾ ಸೀರಿಯಸ್ ಮುಸುಡಿ ಹೊತ್ತಿರುವವಳು ನನಗೆ ಬೇಡ. ಸೋ, ನಿನ್ನ ಉತ್ತರಕ್ಕಾಗಿ ಕಾಯುತ್ತಿದ್ದೇನೆ. ನಿನ್ನ ಕೈ ಹಿಡಿಯಲು ನಾನು ರೆಡಿ. ನೀನೂ ರೆಡಿಯಾ?
- ಹರೀಶ್ ಆಚಾರ್ಯ, ಜೆ.ಪಿ. ನಗರ

ಅಗ್ನಿ ಶ್ರೀಧರ ಅವರ ಲೇಖನದುದ್ದಕ್ಕೂ ಅಫ್ಜಲ್ ಪ್ರಕರಣದ ಸೊಗಸಾದ ಮಾರ್ಮಿಕ ವಿಶ್ಲೇಷಣೆ ಆಗಿದೆ. ಆದರೆ ಆತನನ್ನು ಕಾಶ್ಮೀರದ ಹೋರಾಟಗಾರ ಮತ್ತು ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿದ ಸಂಗೊಳ್ಳಿ ರಾಯಣ್ಣನಂತೆ ಎಂದಿರುವುದು ಒಪ್ಪಲಾಗದು. ಬ್ರಿಟಿಷರು ಸರ್ವಾಧಿಕಾರಿಗಳು. ಜನರಿಗೆ ಸ್ವತಂತ್ರ ಇದ್ದಿರಲಿಲ್ಲ. ಆದರೆ ಇದು ಪ್ರಜಾಪ್ರಭುತ್ವದ ದೇಶ. ವಾಕ್ ಸ್ವಾತಂತ್ರಇದೆ. ಹೋರಾಟವನ್ನೂ ಮಾಡಬಹುದು. ಆದರೆ ಪಾರ್ಲಿಮೆಂಟ್ ಭವನವನ್ನು  ನಾಶ ಮಾಡುವ ತಂತ್ರದಲ್ಲಿ ಭಾಗಿಯಾದ ಉಗ್ರ ಎಂದೂ ರಾಯಣ್ಣ ಆಗಲಾರ. ಅಲ್ಲವೇ?
- ಸತ್ಯಬೋಧ, 53, 3ನೇ ಕ್ರಾಸ್, ಹೊಸಕೆರೆಹಳ್ಳಿ, ಬೆಂಗಳೂರು.

ದಿನಾಂಕ 15ರ ಕ.ಪ್ರಭದಲ್ಲಿ ಪ್ರಕಟವಾದ ಅಗ್ನಿ ಶ್ರೀಧರ್‌ರವರ ಕುತಂತ್ರದ ಲೇಖನ ಮೊದಲ ಸಲ ಓದಿದಾಗ ಏನೂ ಅರ್ಥವಾಗಲಿಲ್ಲ. ಅವರು ಅವರ 'ಗುರು' (?) ವನ್ನು ಹೊಗಳಿದ್ದಾರೋ, ತೆಗಳಿದ್ದಾರೋ ಎಂಬುದು ನನ್ನ ದಡ್ಡ ತಲೆಗೆ ಹೊಳೆಯದೇ ಗೊಂದಲವಾಯ್ತು. ದೇಶದ್ರೋಹದ ಕೆಲಸ ಮಾಡಿದ ದ್ರೋಹಿಯ ಬಗ್ಗೆ ಅನುಕಂಪದ ಲೇಖನ ಬುದ್ಧಿವಂತಿಕೆಯಿಂದ ಬರೆಯುವುದು, ಅಂತಹ ಜನರ ಸ್ನೇಹ ತಮಗಿದೆಯೆಂದು ಹೆಮ್ಮೆಯಿಂದ ಪುಂಗಿ ಊದುವುದು, ಸಂಗೊಳ್ಳಿ ರಾಯಣ್ಣನಂತಹ ಮಹಾನ್ ದೇಶಭಕ್ತನಿಗೆ, ಆ ಕೆಟ್ಟ ಮನುಷ್ಯರನ್ನು ಹೋಲಿಸಿ, ಓದುಗರನ್ನು ತಪ್ಪು ದಾರಿಗೆ ಎಳೆಯುವುದು ಅಗ್ನಿಯಂತಹವರಿಗೆ ಮಾತ್ರ ಸಾಧ್ಯ. ಶ್ರೀಧರ್‌ರವರ ಬುದ್ಧಿವಂತಿಕೆಯ ಅಗ್ನಿ ಅಲ್ಪಸಂಖ್ಯಾತರ ಓಲೈಕೆಗೆ ಮಾತ್ರ ಸೀಮಿತವಾಗಿರುವುದು ವಿಷಾದನೀಯ. ಗಲ್ಲಿಗೇರಿಸಿದ್ದಕ್ಕೆ ಅನಂತಮೂರ್ತಿ ಅಥವಾ ಶ್ರೀಧರ್ ಕಣ್ಣೀರಿಟ್ಟು ಬರೆದ ಲೇಖನ ಕ.ಪ್ರಭದಲ್ಲಿ ನಿರೀಕ್ಷಿಸಿದ್ದೆವು. ನಮ್ಮ ನಿರೀಕ್ಷೆ ನಿಜ ಮಾಡಿ, ಅಗ್ನಿ ಶ್ರೀಧರ್‌ರವರ ದೇಶಪ್ರೇಮವನ್ನು ಸಮಸ್ತ ಓದುಗರಿಗೆ ಪರಿಚಯಿಸಿದ ನಮ್ಮ ಕನ್ನಡಪ್ರಭಕ್ಕೆ ಅನಂತ ಧನ್ಯವಾದಗಳು.
- ಜಯಶ್ರೀ ಕೆ., ಮೈಸೂರು.

ಕನ್ನಡಪ್ರಭ ಈಗ ದಿನದಿಂದ ದಿನಕ್ಕೆ ಜಗತ್ತಿನ ಸುದ್ದಿಗಳನ್ನು ತ್ವರಿತವಾಗಿ ಬಿತ್ತರಿಸುತ್ತಿದೆ. ಹೊಸ ವಿಚಾರಧಾರೆಗಳೊಂದಿಗೆ ಓದುಗರ ಮನ ತಣಿಸುತ್ತಿದೆ. ಈ ಪತ್ರಿಕೆ ಇನ್ನಷ್ಟು ದಾಪುಗಾಲಿಡಲು ಕೆಳಕಂಡ ನನ್ನ ಅನಿಸಿಕೆಗಳನ್ನು ಅಳವಡಿಸಿಕೊಳ್ಳುತ್ತೀರಾಗಿ ನಂಬಿರುತ್ತೇನೆ. ರಾಜ್ಯದ ಎಲ್ಲಾ ಜಿಲ್ಲೆಗಳ ಸಮಗ್ರ ವರದಿ ನೀಡಲು ನಾಲ್ಕು ಪುಟಗಳನ್ನು ವಿಶೇಷವಾಗಿ ಮೀಸಲಿಡುವುದು. ಶುಕ್ರವಾರ ಪ್ರಕಟವಾಗುವ ಸಿನಿಮಾಪ್ರಭಾದ ಜೊತೆಗೆ ಟಿ.ವಿ. ಲೋಕದ ಸುದ್ದಿಗಳನ್ನು ಪ್ರಕಟಿಸುವುದರಿಂದ ಅನೇಕ ಕಲಾವಿದರುಗಳು ಬೆಳಕಿಗೆ ಬರುತ್ತಾರೆ. ಬುಧವಾರ ನೌಕರಿ ಅವಕಾಶಗಳ ಬಗ್ಗೆ ವಿಶೇಷ ಪುರವಣಿ ಪ್ರಕಟಿಸಿ. ವಿವಿಧ ರಾಜ್ಯಗಳ ಪ್ರಮುಖ ಸ್ಥಳಗಳಿಗೆ ಹೋಗಲು ನೆರವಾಗಲು ರೈಲು ಮತ್ತು ಬಸ್ ವೇಳಾಪಟ್ಟಿಯನ್ನು ಪ್ರತಿ ಭಾನುವಾರ ಪ್ರಕಟಿಸಿ. ರಾಜ್ಯದ ಮುಖ್ಯ, ಮಂತ್ರಿಗಳ ಹಾಗೂ ಉಪಮುಖ್ಯಮಂತ್ರಿಗಳ ದಿನನಿತ್ಯದ ಪ್ರವಾಸವನ್ನು ಪ್ರಕಟಿಸುವುದರಿಂದ ದೂರದ ಊರಿನಿಂದ ಬರುವವರಿಗೆ ಅನುಕೂಲವಾಗುತ್ತದೆ. ರಾಜ್ಯದ ಪ್ರವಾಸಿ ಸ್ಥಾನಗಳಿಗೆ ವಿಶೇಷ ಪುರವಣಿ ತರುವುದರಿಂದ ನಮ್ಮ ರಾಜ್ಯದ ಪ್ರವಾಸಿ ತಾಣಗಳನ್ನು ಪರಿಚಯಿಸಿದಂತಾಗುತ್ತದೆ.
- ಸಿ.ಪಿ. ಮೂರ್ತಿ, ಪತ್ರಕರ್ತರು, ಬೆಂಗಳೂರು

ನೀವು ಏನ್‌ಬರೆದ್ರೂ ಪ್ರಕಟಿಸ್ತೀವಿ. ಪ್ರಕಟಿಸ್ತೀವಿ ಅಂತ ಏನೇನೆಲ್ಲ ಬರೀಬೇಡಿ!

ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!