ಅಂಕಣಗಳು

ಗಾಂಧಿ ಮೊಮ್ಮಗಳ ಮೋದಿ ಗೆಳತನ

84ರ ಇಳಿವಯಸ್ಸಿನಲ್ಲೂ ಅವರ ದೃಷ್ಟಿ ತೀಕ್ಷ್ಣವಾಗಿದೆ, ದನಿಯಲ್ಲಿ ನಡುಕವಿಲ್ಲ. ಸುಮಿತ್ರಾ ಗಾಂಧಿ ಕುಲಕರ್ಣಿ ಅವರನ್ನು ವಿವಿಧ ರೀತಿಯಲ್ಲಿ ಪರಿಚಯಿಸಬಹುದು. ಆದರೆ ಅವರು ನಮಗೆ ಹೆಚ್ಚು ಪರಿಚಿತರೆನಿಸುವುದು, ಮಹಾತ್ಮಾ ಗಾಂಧಿಯವರ ಮೊಮ್ಮಗಳು ಎಂಬ ಕಾರಣಕ್ಕೆ. ಗಾಂಧೀಜಿಯ ಮೂರನೇ ಮಗ ರಾಮ್‌ದಾಸ್ ಗಾಂಧಿ ಅವರ ಮಗಳೀಕೆ. ಎರಡು ತದ್ವಿರುದ್ಧ ಸಿದ್ಧಾಂತಗಳು, ಒಟ್ಟಿಗೇ ಅಸ್ತಿತ್ವದಲ್ಲಿರುವುದಷ್ಟೇ ಅಲ್ಲದೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಬಲ್ಲವು ಎನ್ನುವುದಕ್ಕೆ ಸುಮಿತ್ರಾ ಉತ್ತಮ ಉದಾಹರಣೆ. 1972ರಿಂದ 1978ರ ವರೆಗೆ ಕಾಂಗ್ರೆಸ್‌ನ ಟಿಕೆಟ್ ಮೇಲೆ ಗುಜರಾತ್ ಅನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿರುವ ಸುಮಿತ್ರಾ ಗಾಂಧಿ, ತಮ್ಮ ಹಳೆಯ ಗೆಳೆಯರನ್ನು ಭೇಟಿಯಾಗಲು ಇತ್ತೀಚೆಗೆ ಗುಜರಾತ್‌ಗೆ ಬಂದಿದ್ದರು. 'ಡಿಎನ್‌ಎ' ಪತ್ರಿಕೆಯೊಂದಿಗೆ ಮಾತಿಗಿಳಿದ ಅವರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯೊಂದಿಗಿನ ತಮ್ಮ ಬಹುಕಾಲದ ಸ್ನೇಹದ ಬಗ್ಗೆ ಹೇಳುತ್ತಾ ಹೋದರು.   

-ನರೇಂದ್ರ ಮೋದಿ ಅವರೊಂದಿಗಿನ ಭೇಟಿ...
ನಾವು ಬಹುಕಾಲದ ಗೆಳೆಯರು. ಹಾಗಾಗೇ ನಮ್ಮ ಭೇಟಿ ತೃಪ್ತಿಕರವಾಗಿತ್ತು.
ಮುಖ್ಯಮಂತ್ರಿಯವರೊಂದಿಗೆ ನಿಮ್ಮ ಗೆಳೆತನದ ಬಗ್ಗೆ ಹೇಳುತ್ತೀರಾ?
ನಮ್ಮ ಗೆಳೆತನವನ್ನು ಕಟ್ಟಿಕೊಂಡು ಬೇರೆಯವರಿಗೇನಾಗಬೇಕು? ನಾವೇನೂ ಇಲ್ಲಿ ಪಬ್ಲಿಸಿಟಿಗಾಗಿ ಬಂದಿಲ್ಲ. ಅವರು ಹಿಮಾಚಲ ಪ್ರದೇಶದ ಚುನಾವಣಾ ಮೇಲ್ವಿಚಾರಣೆಯನ್ನು ಕೈಗೆತ್ತಿಕೊಂಡು ದೆಹಲಿಯಲ್ಲಿದ್ದರಲ್ಲ, ಆಗಿನಿಂದ ನಾನವರನ್ನು ಬಲ್ಲೆ. ನಾವು ಪರಸ್ಪರ ಗೌರವವಷ್ಟೇ ಅಲ್ಲದೆ, ಒಬ್ಬರನ್ನೊಬ್ಬರು ತುಂಬಾ ಮೆಚ್ಚಿಕೊಳ್ಳುತ್ತೇವೆ. ಹಾಗಾಗೆ ನಾನು ಪಕ್ಷಪಾತ ಮಾಡುತ್ತಿದ್ದೇನೆ ಅನ್ನಿಸಿದರೆ, ಕ್ಷಮಿಸಿಬಿಡಿ! ನಮ್ಮ ಗೆಳೆತನದಿಂದಾಗಿಯೇ ನಾನು ಅವರ ಪರ ಒಲವಿಟ್ಟುಕೊಂಡಿದ್ದೇನೆ.  
-ಮೋದಿಯವರು ದೆಹಲಿ ರಾಜಕೀಯಕ್ಕೆ ಕಾಲಿಡುವ ಬಗ್ಗೆ ಏನನ್ನುತ್ತೀರಿ?
ಈ ಬಗ್ಗೆ ನನಗೆ ಗೊತ್ತಿಲ್ಲ. ಹಾಗಾಗೆ ಆ ವಿಷಯದಲ್ಲಿ ನಾನೇನೂ ಹೇಳಲು ಇಚ್ಛಿಸುವುದಿಲ್ಲ.
-ಗುಜರಾತ್ ಅಭಿವೃದ್ಧಿಯಲ್ಲಿ ಮೋದಿಯವರ ಪಾತ್ರ?
ನಾನು ಗುಜರಾತ್‌ನಲ್ಲಿ ಬಹಳಷ್ಟು ವರ್ಷ ಕಳೆದಿದ್ದೇನೆ. ಈಗ ಬಹುಕಾಲದ ನಂತರ ನನ್ನ ಪತಿಯೊಂದಿಗೆ ಇಲ್ಲಿಗೆ ಮರಳಿದ್ದೇನೆ. ಅಂದಿಗೂ ಇಂದಿಗೂ ಬಹಳ ಬದಲಾವಣೆಗಳಾಗಿರುವುದು ಸ್ಪಷ್ಟವಾಗಿ ನನ್ನ ಗಮನಕ್ಕೆ ಬಂದಿದೆ. ಗುಜರಾತ್‌ನ ಚುಕ್ಕಾಣಿ ಹಿಡಿದಿರುವ ವ್ಯಕ್ತಿಯೇ ಈ ಬದಲಾವಣೆಯ ರೂವಾರಿ. ಒಟ್ಟಾರೆ ಸ್ವಚ್ಛತೆ, ರಸ್ತೆಗಳು, ಸಾಮಾನ್ಯ ಜನರು, ಅಂಗಡಿಗಳು ಅಥವಾ ಎಲ್ಲೇ ನೊಡಲಿ, ಅಲ್ಲೆಲ್ಲ ಅಭಿವೃದ್ಧಿಯೇ ನಮಗೆ ಕಾಣಿಸುವುದು.
-ಗುಜರಾತ್‌ನ ಸಾಮಾಜಿಕ ರಚನೆ ಹೇಗಿದೆ?
ನನಗೆ ನಿಜಕ್ಕೂ ಗೊತ್ತಿಲ್ಲ. ಈ ಪ್ರಶ್ನೆಯನ್ನು ನನಗೆ ಕೇಳಿದರೆ ಪೂರ್ವಾಗ್ರಹದಿಂದ ಕೂಡಿದ ಉತ್ತರವೇ ನಿಮಗೆ ಸಿಗುವುದು. ನನಗನ್ನಿಸುತ್ತೆ, ನಾವು(ಗುಜರಾತಿಗಳು) ನಿಜಕ್ಕೂ ಪ್ರಾಮಾಣಿಕ ಮತ್ತು ಕಷ್ಟ ಜೀವಿಗಳು. ಯಾರ ಮುಂದೆಯೂ ನಾವು ಕೈಯೊಡ್ಡಿ ನಿಲ್ಲುವುದಿಲ್ಲ. ಗುಜರಾತ್‌ನ ವಿಶೇಷತೆಯೇ ಇದು- ನಾವು ಏನೇ ಸಾಧಿಸಿದರೂ, ಅದು ನಮ್ಮ ಶ್ರಮದಿಂದಲೇ ಹೊರತು ಇನ್ನಾವುದರಿಂದಲೂ ಅಲ್ಲ.  
-ಇಲ್ಲಿನ ಕೋಮು ಸಾಮರಸ್ಯದ ಬಗ್ಗೆ ಏನನ್ನುತ್ತೀರಿ?
ಮೊದಲಿನಿಂದಲೂ ಕೋಮು ಸಾಮರಸ್ಯ ಇದೆ; ಅದು ಎಂದಿಗೂ ಹದಗೆಟ್ಟಿಲ್ಲ. ಯಾಕೆಂದರೆ, ನಾನಿಲ್ಲಿದ್ದ ಸಮಯದಲ್ಲಿ ನಿರ್ಭಯವಾಗಿ ಖಾಡಿಯಾ ಮತ್ತು ಜಮಾಲ್‌ಪುರದಂತಹ ಪ್ರದೇಶಗಳಲ್ಲಿ ಅಡ್ಡಾಡುತ್ತಿದೆ. ಈಗಲೂ ಅಲ್ಲಿ ಹೋಗಲು ನಾನು ಸಿದ್ಧಳಿದ್ದೇನೆ.
-ಅಮ್‌ದಾವಾದ್(ಅಹಮದಾಬಾದ್) ಜೊತೆಗಿನ ನಂಟು?
ನಾನು ಹುಟ್ಟಿದ್ದು ಸಾಬರಮತಿ ಆಶ್ರಮದಲ್ಲಿ, ಆದರೆ ಬೆಳೆದದ್ದೆಲ್ಲ ವಾರ್ಧಾದ ಸೇವಾಗ್ರಾಮದಲ್ಲಿ. ನನ್ನ ಪತಿ ಗಜಾನನ್ ಕುಲಕರ್ಣಿ ಅವರ ಅಹಮದಾಬಾದ್ ಐಐಎಮ್‌ನ ಕೆಲಸದಿಂದಾಗಿ ನಾನೂ ಈ ಊರಿಗೆ ಹಿಂದಿರುಗಿ ಬರಬೇಕಾಯಿತು. ಅವರು ಐಐಎಮ್‌ಎದ ಸಂಸ್ಥಾಪಕರಲ್ಲೊಬ್ಬರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ, ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

15 ವರ್ಷದ ಹಳೆ ವಿಡಿಯೋ ಅದಂತೆ, ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': ‘ಜೈಲರ್ 2’ ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!

ನೀಲಿ ಡ್ರಮ್‌ ಪ್ರಕರಣ: ಮರಣದಂಡನೆ ಶಿಕ್ಷೆ ಪ್ರಕಟ ಬಳಿಕ ಊಟ-ನಿದ್ರೆ ಬಿಟ್ಟು ಕಂಗಾಲಾಗಿರುವ ಮುಸ್ಕಾನ್-ಸಾಹಿಲ್!

'ಬಲಿತ ದಲಿತ'ನೇ, ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು?: ಖರ್ಗೆ ವಿರುದ್ಧ ಕುಮಾರಸ್ವಾಮಿ ಕೆಂಡಾಮಂಡಲ