ಅಂಕಣಗಳು

ತುಷ್ಟೀಕರಣವೇ ತತ್ವವಾಗಿರುವ ಕಾಂಗ್ರೆಸ್‌ಗೆ ಆರೆಸ್ಸೆಸ್ ಕಾಣುವುದು ಹೀಗೆಯೇ

ಕಾಂಗ್ರೆಸ್‌ನ ಸುಶೀಲ್ ಕುಮಾರ್ ಶಿಂಧೆ ಹಿಂದೂ ಸಂಘಟನೆಗಳನ್ನು ಭಯೋತ್ಪಾದಕ ಸಂಘಟನೆಗಳು- ಅವು ಭಯೋತ್ಪಾದನೆಯ ತರಬೇತಿ ಕೊಡುತ್ತಿವೆ ಎಂದು ಜೈಪುರದ ಕಾಂಗ್ರೆಸ್ ಅಧಿವೇಶನದಲ್ಲಿ ಗುಡುಗಿದ್ದಾರೆ. ಆದರೆ ವಿರೋಧ ವ್ಯಕ್ತವಾದಾಗ ಅವರು ತನ್ನ ಈ ಹೇಳಿಕೆಯಲ್ಲಿ ಹೊಸದೇನೂ ಇಲ್ಲವೆಂದಿರುವುದರಿಂದ ಇದನ್ನು 'ಕಾಂಗ್ರೆಸ್ಸಿನ ಸೆಕ್ಯುಲರ್ ಹೇಳಿಕೆ' ಎನ್ನಬಹುದು.
ಹಿಂದೂ ಸಂಘಟನೆಗಳನ್ನು ಯಾವುದೇ ಪೂರ್ವಾಪರ ಅಲೋಚಿಸದೇ ಹೇಳಿಕೆ ಕೊಡುವ ಪರಿಪಾಠ ಕಾಂಗ್ರೆಸ್ಸಿನ ಪರಂಪರೆಯಿಂದಲೇ ಬಂದಿದೆ. ಹಿಂದೂ ಸಂಘಟನೆಗಳನ್ನು ತೆಗಳುವುದು ಅದೊಂದು ತಂತ್ರ, ಜೊತೆಗೆ ಅವರ ಮತಬ್ಯಾಂಕ್ ತಂತ್ರವೂ  ಹೌದು.  ಇದು ಅಸಲಿ ಗಾಂಧಿಯಿಂದ ನಕಲಿ ಗಾಂಧಿವರೆಗೂ ಮುಂದುವರೆದಿದೆ ಅಷ್ಟೇ.
ಇವರ ಕೆಲ ವರ್ತನೆಗಳು ಮೆಲಕು ಹಾಕುವುದಾದರೇ ಯಾರು ಭಯೋತ್ಪಾದನೆಯ ಪರವಾಗಿದ್ದಾರೆ, ಯಾರು ಮೂಲಭೂತವಾದವನ್ನು ಪೋಷಿಸುತ್ತಾರೆನ್ನುವುದು ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯ ಕಾಲದಿಂದಲೂ ಇಸ್ಲಾಂ ಭಯೋತ್ಪಾದಕರನ್ನು ಖಂಡಿಸಬಾರದೆಂಬ ನೀತಿ ಗಾಂಧಿಜೀಯವರಿಂದ ಬಂದ ಬಳುವಳಿ. ಅಂದು ಅನೇಕ ಆರ್ಯಸಮಾಜದ ಮುಖಂಡರು ಮುಸ್ಲಿಂ ಮತಾಂಧರಿಂದ ಕೊಲೆಯಾಗಿದ್ದರು. ಆದರೆ ಆ ಕೊಲೆಗಳನ್ನು ಗಾಂಧಿಜೀ ಖಂಡಿಸಿದ್ದ ಬಗ್ಗೆ ಮಾಹಿತಿಯಿಲ್ಲ. ಮೌಲನಾ ಅಬ್ದುಲ್ ಬಾರಿ ಎಂಬಾತ ಇಸ್ಲಾಮ್‌ಗೆ ಮತಾಂತರವಾದ ಹಿಂದೂಗಳು ಮರಳಿ ಮಾತೃಧರ್ಮಕ್ಕೆ  ಮತಾಂತರಗೊಂಡರೆ ಅವರನ್ನು ಕೊಲೆ ಮಾಡಿ ಎಂದು ಹೇಳಿಕೆ ನೀಡಿದಾಗ ಅದನ್ನು ಖಂಡಿಸದೇ ಸ್ವತಃ ಗಾಂಧಿಜೀಯವರೆ ಆತನನ್ನು ಪ್ರಶಂಸಿಸಿ Simple child of God, he is a friend’GM¦¥Ú§ÁÚß. ಇಷ್ಟೇ ಅಲ್ಲ ಭಯೋತ್ಪಾದಕರಿಗೆ ಉಗ್ರ ಶಿಕ್ಷೆ ನೀಡಬಾರದೆಂಬುದು ಅವರ ಅಭಿಪ್ರಾಯವಾಗಿತ್ತು. ಸ್ವಾಮಿ ಶ್ರದ್ಧಾನಂದರನ್ನು ಕೊಲೆಮಾಡಿದ ಅಬ್ದುಲ್ ರಷೀದನಿಗೆ ಗಲ್ಲು ಶಿಕ್ಷೆಯಾಗಬಾರದೆಂದು ಲಾರ್ಡ್ ಇರ್ವಿನ್ನರಿಗೆ ಪತ್ರ ಬರೆದಿದ್ದರು. ಆದರೆ ಸ್ಯಾಂಡಸರ್‌ನನ್ನು ವಧಿಸಿದ ಭಗತ್ ಸಿಂಗ್‌ರಿಗೆ ಮಾತ್ರ ಗಲ್ಲು ಶಿಕ್ಷೆ ನೀಡಬಾರದೆಂದು ಒತ್ತಾಯಿಸಲಿಲ್ಲ ಅಷ್ಟೇ!  
ತಮ್ಮದು ಮಹಾತ್ಮಗಾಂಧಿ ವಿಚಾರಧಾರೆಯುಳ್ಳ ಪಕ್ಷ ಎಂದು ಯಾವಾಗಲೂ ಬಡಬಡಿಸುತ್ತಿರುವ ಕಾಂಗ್ರೆಸ್ ಈ ಒಂದು ವಿಚಾರದಲ್ಲಿ ಮಾತ್ರ ಇಂದಿಗೂ ಗಾಂಧಿಜೀಯವರ ತತ್ವ ಸಿದ್ಧಾಂತಗಳನ್ನು ತಪ್ಪದೇ ಪಾಲಿಸುತ್ತಿದೆ. ಸ್ವಾತಂತ್ರ್ಯಾನಂತರ ಕೆಲ ಬುದ್ಧಿಜೀವಿ ವರ್ಗ ಅವರಿಗೆ ಸಾಥ್ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿಯೇ ಅದು ಗಾಂಧಿ ತತ್ವಕ್ಕೆ ವಿರೋಧವೆಂದು ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರುವಿಗೆ ಗಲ್ಲುಶಿಕ್ಷೆ ವಿಧಿಸಲು ಚಿಂತೆ ಮಾಡುತ್ತಿದೆ. ಇಂದು Eco-friendly two-wheelers, People -friendly Budgestಎಂಬ ಮಾತು ಚಾಲ್ತಿಯಲ್ಲಿದೆ. ಹಾಗಾಗಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು   Terrorist - friendly  Governmentಎಂದು ಕರೆಯಬಹುದು.
ಮಾನವತಾವಾದಿಯೆಂದು ಹೇಳಿಕೊಳ್ಳುವ ದೇಶದ ಮೊದಲ ಪ್ರಧಾನಿ, ಕಾಂಗ್ರೆಸ್ಸಿನ ಅಗ್ರಗಣ್ಯ ನಾಯಕ ನೆಹರು, ಹಿಂದೂಗಳನ್ನು ಕೋಮುವಾದಿಗಳೆಂದೂ ಸಂಕುಚಿತ ದೃಷ್ಟಿಯವರೆಂದೂ ಹೇಳುತ್ತಿದ್ದರು. ಮುಸ್ಲಿಂ ಮತಾಂಧರ ಪ್ರೀತಿಯನ್ನು ಗಳಿಸುದವುಕ್ಕಾಗಿ ಅವರು ಹಿಂದೂಗಳನ್ನು ನಿಂದಿಸುತ್ತಿದ್ದರು. ಹೀಗಾಗಿ ನೆಹರು ಭಯೋತ್ಪಾದಕರನ್ನು ಪ್ರೀತಿ ಅನುಕಂಪದಿಂದ ಕಂಡ ಉದಾರವಾದಿಗಳೆಂದೂ ಹೆಸರು ಮಾಡಿದ್ದಾರೆ. ಹಾಗಾಗಿ ರಾಷ್ಟ್ರದ್ರೋಹಿಗಳನ್ನು ವಿರೋಧಿಸುವ ಆರೆಸ್ಸೆಸ್‌ನಂಥ ಸಂಘಟನೆಗಳ ರೀತಿ  ಕಾಂಗ್ರೆಸ್ ಸಿದ್ಧಾಂತ ಪ್ರತಿಪಾದಿಸುವವರಿಗೆ  ಅದರ ಹಿಂದೂ ಚಿಂತನೆ ಕೋಮುವಾದದ ವ್ಯಾಪ್ತಿಗೆ ಬರುತ್ತದೆ.
ಅಹ್ಮದಾಬಾದಿನ ಪೊಲೀಸರು ಇಶರತ್ ಜಹಾಂ ಶೇಖ್ ಎಂಬ ಭಯೋತ್ಪಾದಕಿಯನ್ನು ಕೊಂದರು. ಆಕೆಯ ಮತಸ್ತರು ಅತ್ಯಂತ ಗೌರವದಿಂದ ಅವಳ ಶವಸಂಸ್ಕಾರ ಮಾಡಿದರು. ಅಲ್ಲಿನ ಕಾಂಗ್ರೆಸ್ ಮುಖಂಡ ವಸಂತ ಧಾವಖರೆ ಈ ಭಯೋತ್ಪಾದಕಿಯ ಕುಟುಂಬಕ್ಕೆ ಕರುಣೆ ತೋರಿ ಕಾಂಗ್ರೆಸ್ಸಿನ ಪರಂಪರೆಯನ್ನು ಮುಂದುವರೆಸಿ ಒಂದು ಲಕ್ಷ ರುಪಾಯಿ ದೇಣಿಗೆ ಕೊಡುವುದಾಗಿ ಘೋಷಣೆ ಮಾಡಿದರು.  ನೆಹರು ಕಾಲದಿಂದ ಶುರುವಾದ ಸೆಕ್ಯುಲರ್ ಮುಖವಾಡದ ಪ್ರಭಾವ ಅವರ ನಂತರದ ದಿನಗಳಲ್ಲಿ ಅವರ ಪಕ್ಷದಲ್ಲಿ ಅದರ ವಿಕೃತ ವಿವರಣೆ ಮತ್ತಷ್ಟು ವಿಕೃತಗೊಂಡು ಇಂದು ಸೆಕ್ಯುಲರಿಸಮ್ ಶಬ್ದಕ್ಕೆ ಹೊಸ ಅರ್ಥ ಬರುತ್ತಿದೆ. ಇಂದು ಸೆಕ್ಯುಲರ್‌ನ ವ್ಯಾಖ್ಯಾನ ಬಲುಸುಲಭ! ಯಾರು ಹಿಂದೂಗಳನ್ನು ಖಂಡಿಸುತ್ತಾರೋ ಮತ್ತು ಯಾರು ಅಲ್ಪಸಂಖ್ಯಾತರ ದುಷ್ಕೃತ್ಯಗಳನ್ನು ಕಡೆಗಣಿಸುತ್ತಾರೋ ಅವರನ್ನು ಮಾತ್ರ ಸೆಕ್ಯುಲರ್ ಎಂದು ಕರೆಯಬಹುದು. ಉಳಿದವರೆಲ್ಲ ಕೋಮುವಾದಿಗಳು. ಹಾಗಾಗಿ ಆರೆಸ್ಸೆಸ್‌ನಂತಹ ಹಿಂದೂ ಸಂಘಟನೆಗಳ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದರೆ ಅಲ್ಪಸಂಖ್ಯಾತರಿಗೆ ಖುಷಿಯಾಗುತ್ತದೆ ಎಂಬುದು ಕಾಂಗ್ರೆಸ್ ಸ್ವಾತಂತ್ರ್ಯಪೂರ್ವದಿಂದಲೂ ಬಳಸಿಕೊಂಡು ಬಂದಿರುವ  ಅಸ್ತ್ರ.
2000ರಲ್ಲಿ ನಡೆದ ಘಟನೆ ಕರ್ನಾಟಕದ ಚರ್ಚುಗಳ ಮೇಲೆ ಬಾಂಬ್ ಸ್ಫೋಟ ನಡೆಯಿತು. ತನಿಖೆ ನಡೆಯುವ ಮೊದಲೇ ಇದು ವಿಶ್ವಹಿಂದೂ ಪರಿಷತ್ತಿನ ಕೆಲಸವೆಂದು ಕಾಂಗ್ರೆಸ್‌ನ ನಾಯಕರು ಹೇಳಿಕೆಯನ್ನಿತ್ತರು. ಪತ್ರಿಕೆಗಳ ಮುಖಪುಟದಲ್ಲಿ ದಪ್ಪಾಕ್ಷರಗಳಲ್ಲಿ ಮುದ್ರಿತವಾಯಿತು. ತನಿಖೆ ನಡೆಸಿದ ಪೊಲೀಸ್ ಇಲಾಖೆ,  ಇದು ದೀನ್ದಾರ್ ಚನ್ನಬಸವೇಶ್ವರ ಸಿದ್ದೀಕ್ ಎಂಬ ಸಂಸ್ಥೆ ನಡೆಸಿದ ಭಯೋತ್ಪಾದನಾ ಕೃತ್ಯವೆಂದು ರುಜುವಾತು ಪಡಿಸಿತು. ಆದರೆ ಮೊದಲು ಕಿರುಚಾಡಿದ್ದ ಕಾಂಗ್ರೆಸ್ಸಿಗರು ತಮ್ಮ ಎಂದಿನ ಸೆಕ್ಯುಲರ್ ತತ್ವಕ್ಕೆ ಶರಣಾದರು. ಬಾಂಬ್ ಸ್ಫೋಟದ ಬಗ್ಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಗೃಹ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಇವರಿಗೆ ಈ ಸ್ಫೋಟದ ಹಿಂದಿರುವ ಕಾಣದ ಕೈಗಳು ಯಾರವು ಎಂದು ತಿಳಿದಿದ್ದರೂ ಅದನ್ನು ಖಂಡಿಸುವ ಧೈರ್ಯ ಮಾಡಲಿಲ್ಲ. ನೆಹರು ತರುವಾಯ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ನಂತರದ ಎಲ್ಲ ಕಾಂಗ್ರೆಸ್ ಸೆಕ್ಯುಲರ್ ನಾಯಕರ ಸಾಮಾನ್ಯ ಸ್ಥಿತಿ ಹೇಗಿದೆಯೆಂದರೆ ಅವರು ಪಾಕಿಸ್ತಾನದೊಂದಿಗೆ ವ್ಯವಹರಿಸುವಾಗ ಭಾರತದ ಮುಸ್ಲಿಮರನ್ನು ದೃಷ್ಟಿಯಲ್ಲಿಟ್ಟುಕೊಂಡು ನೀತಿಯನ್ನು ರೂಪಿಸುತ್ತದೆ. ಇದೇ ಕಾರಣದಿಂದ ಪಾಕಿಸ್ತಾನವನ್ನು ಖಂಡಿಸಿದರೆ ಅಪ್ರತ್ಯಕ್ಷವಾಗಿ ಭಾರತದ ಮುಸಲ್ಮಾನರನ್ನು ಖಂಡಿಸಿದಂತೆ ಎಂದು ಭಾವಿಸುತ್ತದೆ. ಹೀಗಾಗಿ ಗಡಿಯಲ್ಲಿ ಭಾರತದ ಸೈನಿಕನ ರುಂಡವನ್ನು ಕತ್ತರಿಸಿ ಕೊಂಡೊಯ್ದರೂ ಈ ದೇಶದಲ್ಲಿ ಭಾರತದ ಪ್ರಧಾನಿ ಮನಮೋಹನ ಸಿಂಗ್‌ರಂಥವರು ಅದನ್ನು ಖಂಡಿಸಲು ಕನಿಷ್ಠ ಒಂದು ವಾರವಾದರೂ ಸಮಯ ತೆಗೆದುಕೊಳ್ಳುತ್ತಾರೆ. ಅದೇ ಭಾರತದಲ್ಲಿ ಹಿಂದೂ ಸಂಘಟನೆಗಳು ನಡೆಸುವ ರಾಷ್ಟ್ರಜಾಗೃತಿ ಕಾರ್ಯವನ್ನು ಸುಶೀಲ್ ಕುಮಾರ್ ಶಿಂಧೆಯವರು ಭಯೋತ್ಪಾದನಾ ಕೃತ್ಯವೆಂದು ಸೆಕ್ಯುಲರ್ ಹೇಳಿಕೆಯನ್ನು ಕೊಡುತ್ತಾರೆ. ಮತಬ್ಯಾಂಕ್ ರಾಜಕಾರಣದಿಂದಲೇ ತನ್ನ ಅಸ್ತಿತ್ವವೆಂದು ಸ್ವಾತಂತ್ರ್ಯಪೂರ್ವದಿಂದಲೂ ನಂಬಿಕೊಂಡು ಬಂದಿರುವ ಕಾಂಗ್ರೆಸ್ಸಿಗೆ ಈ ದೇಶದಲ್ಲಿ ಹಿಂದೂ ಭಯೋತ್ಪಾದನೆ ಮಾತ್ರ ಗೋಚರಿಸುತ್ತದೆ. ಅದಕ್ಕೇ ಅವರಿಗೆ ಅವರೇ ಸೃಷ್ಟಿಸಿರುವ ಸೆಕ್ಯುಲರ್ ತತ್ವವು ಕಾಲಕಾಲಕ್ಕೆ ಮತ ಫಸಲನ್ನು ಕೊಡುತ್ತಿದ್ದರೆ ಹಿಂದೂ ಸಂಘಟನೆಗಳು ನೀಡುವ ರಾಷ್ಟ್ರಭಕ್ತಿಯ ಶಿಕ್ಷಣ ಇವರ ದೃಷ್ಟಿಯಲ್ಲಿ ಹಿಂದೂ ಭಯೋತ್ಪಾದನೆ ಎನಿಸಿಕೊಳ್ಳುತ್ತದೆ.
'ಬಿಜೆಪಿ ಹಾಗೂ ಆರೆಸ್ಸೆಸ್ ದೇಶದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ, ಭಯೋತ್ಪಾದನೆಯನ್ನು ಹರಡುವ ಕೆಲಸ ಮಾಡುತ್ತಿದೆ, ಅದು ಅನೇಕ ಕಡೆ ಬಾಂಬಿಡುತ್ತಿದೆ' ಎಂದು ಹೇಳುವ ಶಿಂಧೆ ಹಿಂದೂ ಸಂಘಟನೆಗಳು ನಡೆಸುವ ಶಿಬಿರಗಳನ್ನು ಎಲ್ಲೋ ಉತ್ತರ ರಾಜ್ಯಗಳ ಕಾಡುಗಳಲ್ಲೋ, ಮಲೆನಾಡು ಅಥವಾ ಪಾಕ್ ಆಕ್ರಮಿತ ಕಾಶ್ಮೀರದಲ್ಲೋ ಸಿದ್ಧಾಂತ ಅಥವಾ ಜಿಹಾದ್ ಹೆಸರಿನಲ್ಲಿ ನಡೆಸುತ್ತಿದ್ದರೆ  ಅದರ ವರದಿ ತರಿಸಿ ಕ್ರಮ ಕೈಗೊಳ್ಳುವುದು ಕಷ್ಟ ಎನ್ನಬಹುದಿತ್ತು. ಆದರೆ ಸಂಘ ನಡೆಸುವ ಎಲ್ಲ ಶಿಬಿರಗಳೂ ಸಾಮಾನ್ಯ ಜನರ ನಡುವೆಯೇ. ಭಾರತದ ಗೃಹ ಖಾತೆಯನ್ನು ನಿರ್ವಹಿಸುತ್ತಿರುವ ಶಿಂಧೆಯವರಿಗೆ ಅಫ್ಜಲ್ ಗುರುವಿಗೆ ಗಲ್ಲಿಗೇರಿಸಲು ಮತಬ್ಯಾಂಕ್ ರಾಜಕಾರಣ ತೊಡಕಾಗಬಹುದು. ಆದರೆ ಸಂಘಪರಿವಾರದ ಹಿಂದೂ ಭಯೋತ್ಪಾದನೆಯನ್ನು ತಡೆಯಲು ಯಾವ ತೊಡಕಿದೆ? ಅದನ್ನು ಹೇಳಬೇಕಲ್ಲವೇ?

-ಡ್ಯಾನಿ ಪಿರೇರಾ
ಶಿಕ್ಷಕರು
anisikeprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!