ಜೀವನವಿಡೀ ಡಾಕ್ಟರ್ ಬಳಿ ಅಲೆದಾಡಿ ಬರಿಸಿಕೊಳ್ಳುವ ಕೊನೇ ರೋಗ
ಸಾವಿರ ಸಾವಿರ ಗಳಿಸಿದರೂ ಸಾವಿರದವರು ಯಾರಿದ್ದಾರೆ...
ಮದುವೆಯಾದಾಗಲೇ ಸಾವು ಆರಂಭವಾಗಿರುತ್ತದೆ
ಕಾವ್ಯ
ವಿಮರ್ಶೆ ಶುರುವಾದ ಮೇಲೆ ಇದರ ಉತ್ಪತ್ತಿ ನಿಂತು ಹೋಗಿದೆ
ಇದು ಸಹಜವಾಗಿ ಹುಟ್ಟುವಂಥದ್ದು, ಅಬಾರ್ಷನ್ ಮಾಡಿ ತೆಗೆದದ್ದಲ್ಲ
ಛಂದೋಬದ್ದವಲ್ಲದ್ದು ಚೆಂದವೂ ಅಲ್ಲ; ಕಾವ್ಯವೂ ಅಲ್ಲ
ಮತ್ತೆ ಮತ್ತೆ ಕೇಳಬೇಕು ಎನಿಸುವಂಥದ್ದು, ನವ್ಯಕ್ಕೂ ಕಾವ್ಯಕ್ಕೂ ಇದೇ ವ್ಯತ್ಯಾಸ
ಯಾರೊಳಗೆ ಯಾವ ಕವಿಯಿದ್ದಾನೆ ಹೇಳಲು ಬಾರದು; ಎಚ್ಚರ
ಯಾವ ವಿಮರ್ಶೆಯ ಹಂಗಿಲ್ಲದೇ ಅರ್ಥವಾಗುವ ಸರಳತೆ ಇದರದ್ದು
ಕಾವ್ಯ ಲೋಕದಲ್ಲಿ ವಿಹರಿಸುವವನಿಗೆ ಕುಳಿತಲ್ಲೇ ಸ್ವರ್ಗ, 'ಕವನ ವಾಚನ' ಮಾಡುವವರ ಬಳಿಯಲ್ಲೇ ನರಕ
ವಿವೇಕಿ, ವಿದ್ವಾಂಸ ವಿಚಲಕ್ಷಣನೇ ಕವಿ ಆಗಬಲ್ಲ
ಕವಿ ಹೋದಲೆಲ್ಲ ಮೋಡ ಕವಿದ ವಾತಾವರಣವೇ
-ವಿಶ್ವನಾಥ ಸುಂಕಸಾಳ
vishwasunkasal@yahoo.com