ಅಂಕಣಗಳು

ಪಠ್ಯಕ್ರಮದಲ್ಲಿ ಬೇಕು ಆಯುರ್ವೇದ

"ಲೂಯೀಸ್ ಪಾಶ್ಚರ್ ಯಾರು?"
"ರೇಬಿಸ್‌ಗೆ ಚುಚ್ಚುಮದ್ದು ಕಂಡು ಹಿಡಿದ, ಪಾಶ್ಚರೀಕರಣವನ್ನು ಪರಿಚಯಿಸಿದ ಫ್ರೆಂಚ್ ವಿಜ್ಞಾನಿ"
"ಹಿಪೋಕ್ರೆಟಿಸ್ ಯಾರು?"
"ಪ್ರಾಚೀನ ಪ್ರಸಿದ್ಧ ಗ್ರೀಕ್ ವೈದ್ಯ"
"ಚರಕಾಚಾರ್ಯ ಯಾರು?"
"ಚ...ರ..ಕ... ಚರಕ ಸಂಹಿತಾ ಎಲ್ಲೋ ಹೆಸರು ಕೇಳಿದ ಹಾಗೆ ಇದೆ"
ಈ ತರಹದ ಉತ್ತರಗಳು ನಮ್ಮ ಶಾಲಾ ಮಕ್ಕಳಿಂದ ಖಂಡಿತ ಬರುತ್ತಿವೆ. ಇವರಲ್ಲದೆ ವಿಲಿಯಂ ಹಾರ್ವೆ, ರಾಬರ್ಟ್ ಕುಕ್, ಲಿಸ್ಟರ್ ಬಗ್ಗೆ ಅಲ್ಪಸ್ವಲ್ಪ ಮಾಹಿತಿಯಾದರೂ ಇರುತ್ತದೆ. ಆದರೆ ವಾಗ್ಬಟಾಚಾರ್ಯ, ಮಾಧವಾಚಾರ್ಯ, ಶಾರಂಗಧರ, ಭಾವಮಿಶ್ರ ಇತ್ಯಾದಿ ಹೆಸರುಗಳು ಅವರ ಕಿವಿಗೆ ಬಿದ್ದಿರುವುದೇ ಇಲ್ಲ. Big Bang Theory ಎಲ್ಲರಿಗೂ ಗೊತ್ತು. ಆದರೆ ಅದೇ ಸಾಂಖ್ಯದರ್ಶನದಲ್ಲಿ ಹೇಳಿದ ಸೃಷ್ಟಿ ಉತ್ಪತ್ತಿ ಕ್ರಮ ಯಾರಿಗಾದರೂ ಗೊತ್ತಿರಲು ಸಾಧ್ಯವೇ? ಉಹುಂ!
ಇಂತಹ ಇನ್ನೂ ಅನೇಕ ಉದಾಹರಣೆಗಳನ್ನು ನೀಡಬಹುದು. ಅಂದರೆ ನಮ್ಮ ಶಾಸ್ತ್ರಗಳಲ್ಲಿರುವ ಅಗಾಧ ವಿದ್ವತ್ತಿನ ಪರಿಚಯ ಸಹ ನಮ್ಮ ಮಕ್ಕಳಿಗಿಲ್ಲ. ಯಾಕೆಂದರೆ ನಮ್ಮ ಮಕ್ಕಳಿಗೆ ಪಾಶ್ಚಿಮಾತ್ಯರ ಶೈಲಿಯಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಅಂತೆಯೇ ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದವೂ ಅತ್ಯಂತ ಪ್ರಾಚೀನವಾದುದು. ಅದು ಕೇವಲ ಒಂದು ಚಿಕಿತ್ಸಾ ಶಾಸ್ತ್ರವಲ್ಲ. ಜೊತೆಗೆ ಆರೋಗ್ಯಕರ ಜೀವನವನ್ನು ಹೇಗೆ ನಡೆಸಬೇಕು ಎಂದೂ ತಿಳಿಸುತ್ತದೆ. ಆದ್ದರಿಂದ ಆಯುರ್ವೇದ ಕುರಿತಾದ ಮಾಹಿತಿ ದೇಶದ ಪ್ರತಿಯೊಬ್ಬರಿಗೂ ಇರಬೇಕಾದದ್ದು ಅತಿ ಅವಶ್ಯ. ನನ್ನ ಅನುಭವಕ್ಕೆ ಬಂದಂತೆ ವಿದ್ಯಾವಂತರು ಮಾತ್ರ ಸ್ವಇಚ್ಛೆಯಿಂದ ಆಯುರ್ವೇದ ಚಿಕಿತ್ಸೆ ಪಡೆಯುತ್ತಾರೆ. ಆದರೆ ಅಶಿಕ್ಷಿತರು ಆಯುರ್ವೇದ ಚೂರ್ಣ, ವಟಿ, ಕಷಾಯ ತೆಗೆದುಕೊಳ್ಳಲು ಇಚ್ಛಿಸುವುದಿಲ್ಲ. ಅವರಿಗೆ ಆಯುರ್ವೇದ, ಹೋಮಿಯೋಪತಿ ಮತ್ತು ಅಲೋಪತಿ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ. ಅವರಿಗೆ ಇಂಜೆಕ್ಷನ್ ಬೇಕೇ ಬೇಕು. ಇಲ್ಲದಿದ್ದರೆ ಅವರಿಗೆ ಸಮಾಧಾನವಿಲ್ಲ. ಸಾಮಾನ್ಯವಾಗಿ ಕಾಯಿಲೆ ಬಂದ ತಕ್ಷಣ ಔಷಧದ ಅಂಗಡಿಗೆ ಹೋಗಿ ಅವರು ಕೊಡುವ ಔಷಧಿ ಸೇವಿಸುತ್ತಾರೆ. ಹೀಗೆ ಸಾಮಾನ್ಯ ಖಾಯಿಲೆಗೆ ಎರಡು ಮೂರು ತರಹ ಆ್ಯಂಟಿಬಯೋಟಿಕ್‌ಗಳ ಒಂದೆರಡು ಮಾತ್ರೆ ಸೇವಿಸುತ್ತಾರೆ. ವೈದ್ಯರ ಹತ್ತಿರ ಹೋದಾಗ, ಅವರು ಅನಿವಾರ್ಯವಾಗಿ ಹೈಯರ್ ಆ್ಯಂಟಿಬಯೋಟಿಕ್ ಔಷಧಿ ಕೊಡುತ್ತಾರೆ. ಹೀಗಾಗಿ 'ಸೂಪರ್‌ಬಗ್‌' (ಆ್ಟಿಬಯೋಟಿಕ್‌ಗಳಿಗೆ ಮಣಿಯದ ರೋಗಾಣುಗಳು) ಉತ್ಪತ್ತಿಯಾಗುತ್ತಿವೆ. ಮನುಷ್ಯನ ವ್ಯಾಧಿಕ್ಷಮತೆ (Immunity)ಕಡಿಮೆಯಾಗುತ್ತಿದೆ. ವಿದೇಶದಲ್ಲಿ ನಿಷೇಧಿಸಿರುವ ಅನೇಕ ಔಷಧಿಗಳು ನಮ್ಮಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿವೆ. ಇದರ ಬಗ್ಗೆ ಸಾಮಾನ್ಯರಿಗೆ ತಿಳಿದಿರುವುದಿಲ್ಲ. ವೈದ್ಯರಿಗೆ ತಿಳಿದಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
ಪಾಶ್ಚಿಮಾತ್ಯರು ನಮ್ಮ ಸಂಸ್ಕೃತಿ, ಆಹಾರ ಪದ್ಧತಿ, ಯೋಗ, ಪ್ರಾಣಾಯಾಮ, ನೃತ್ಯ, ಹಾಗೆಯೇ ನಮ್ಮ ವೈದ್ಯ ಪದ್ಧತಿಗೆ ಮಾರು ಹೋಗಿದ್ದಾರೆ. ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬಲಿಷ್ಠ ರಾಷ್ಟ್ರ ಕಟ್ಟುತ್ತಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಾವು ಅವರ ಸಂಸ್ಕೃತಿ, ಆಹಾರ, ನೃತ್ಯ, ಸಂಗೀತ ಹಾಗೆಯೇ ಅವರು ನಿಷೇಧಿಸಿರುವ ಔಷಧಿಗಳಿಗೆ ಮಾರು ಹೋಗಿ ನಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದೇವೆ. ಹೀಗೆಯೇ ಮುಂದುವರಿದರೆ ನಮ್ಮ ಮುಂದಿನ ಪೀಳಿಗೆ ಸದೃಢರಾಗುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಯುರ್ವೇದ ಅರಿವಿರಬೇಕಾದದ್ದು ಅವಶ್ಯ. ಅದರಲ್ಲಿ ಹೇಳಿರುವ ದಿನಚರ್ಯ, ಋತುಚರ್ಯ, ಸ್ವಸ್ಥವೃತ್ತಿ, ಪದ್ಯ, ಆಚಾರ ರಸಾಯನದ ಬಗ್ಗೆ ತಿಳಿದಿರಬೇಕು.
ಚಿಕ್ಕಂದಿನಿಂದಲೇ ನಮ್ಮ ಜೀವನದಲ್ಲಿ ಆಯುರ್ವೇದವನ್ನು ಅಳವಡಿಸಿಕೊಳ್ಳಬೇಕು. ಹೀಗಾಗಬೇಕಾದರೆ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣದಲ್ಲಿ ಹಂತ ಹಂತವಾಗಿ ಆಯುರ್ವೇದವನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ಪ್ರೌಢಶಿಕ್ಷಣ ಸಚಿವರು, ಆಯುರ್ವೇದ ತಜ್ಞರು ಈ ಕುರಿತು ಗಮನ ಹರಿಸಬೇಕು.
ದರ್ಶನ, ವೇದ, ಉಪನಿಷತ್ತು ಅಂತೆಯೇ ಆಯುರ್ವೇದ ನಮ್ಮ ದೇಶದ ಆಸ್ತಿ. ಇವುಗಳ ಮಹತ್ವದ ಅರಿವು ನಮ್ಮ ಮಕ್ಕಳಿಗೆ ಆದಾಗ ಮಾತ್ರ ಅದನ್ನು ಕಾಪಾಡಿ ಉಳಿಸುತ್ತಾರೆ. ಇಲ್ಲದಿದ್ದರೆ ಹೊರಗಿನವರು ಅದನ್ನು ದೋಚಿ ತಮ್ಮದೆಂದು ಹೇಳಿಕೊಳ್ಳುವುದು ಖಚಿತ.

-ಡಾ. ರೇವತಿ ಹುದ್ದಾರ ದೇಸಾಯಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!