ಅಂಕಣಗಳು

Hmmm... ಪಾಂಚ್

ಟಿ. ಎನ್. ಸೀತಾರಾಮ್
-    ಸೀತಾರಾಮ್ ಅವ್ರೇ, ಕಾವೇರಿ ನೀರನ್ನು ತಮಿಳ್‌ನಾಡಿಗೆ ಬಿಡ್‌ಬೇಕಾ, ಬ್ಯಾಡ್ವಾ?
ಇದೇನ್ ಪ್ರಶ್ನೆ ರೀ, ಕಾವೇರಿ ನಮ್ಮವಳು. ಯಾವುದೇ ಕಾರಣಕ್ಕೂ ಬಿಡಬಾರದು. ಆದ್ರೆ ಈ ಪ್ರಶ್ನೆ ಈಗ್ಯಾಕೆ ಅಂತ ಗೊತ್ತಾಗ್ಲಿಲ್ಲ.

-    ಏನಿಲ್ಲ, ನೀವು 'ಟಿಎನ್‌' ಸೀತಾರಾಮ್ ಅಲ್ವಾ. ನೀವು ತಮಿಳ್‌ನಾಡಿನವ್ರಾ ಅಂತ ಅನುಮಾನ ಬಂತು ಅದಕ್ಕೆ..
ರೀ ಮಹಾಸ್ವಾಮಿಗಳೇ, ನಾನು ಅಚ್ಚ ಕನ್ನಡಿಗ. ಪ್ರೂಫ್ ಬೇಕಾ, ಏನಪ್ಪಾ, ಮರೀ ಅಲ್ಲಿ ಟೇಬಲ್ ಮೇಲೆ ನನ್ ಬರ್ತ್ ಸರ್ಟಿಫಿಕೇಟ್ ಇದೆ, ಒಂಚೂರು ತಗೊಂಬಾಪಾ..

-    ಹೇ ಅದೆಲ್ಲಾ ಬ್ಯಾಡ ಬಿಡಿ, 'M' ಏ ನಿನಗೆ ಸಾಟಿಯಿಲ್ಲ' ಅಂತ ನೀವು ಶುರು ಮಾಡಿರೋ ಹೊಸ ಸೀರಿಯಲ್‌ಗೆ,  ಮಹಾಪರ್ವ ಅಂತ ಹೆಸರಿಟ್ಟಿದೀರಲ್ಲ, ಮೊದಲು ಪರ್ವ ಅಂತಿಟ್ಟಿದ್ರೆ ಅದು ಹಿಟ್ ಆದ್ಮೇಲೆ ಮಹಾಪರ್ವ ಅಂತ ಇನ್ನೊಂದ್ ಶುರು ಮಾಡಬಹುದಾಗಿತ್ತಲ್ವ?
ಸೀರಿಯಸ್ ಸೀರಿಯಲ್ ಮಾಡೋರತ್ರ ತಮಾಷೆ ಮಾಡ್ತೀರಾ? ಆದ್ರೂ ನಿಮ್ಮ 'ಲಾ'ಜಿಕ್ ಒಂದ್ ಲೆವೆಲ್‌ಗೆ 'ಪರ್ವಾ'ಗಿಲ್ಲ.
- ಮಧ್ಯಮ ವರ್ಗದ ಜನರು ನೋಡೋ ಧಾರಾವಾಹಿ ಮಾಡ್ತೀರ, ಆದ್ರೆ ಅದನ್ನ ಮಧ್ಯಾಹ್ನ ಪ್ರಸಾರ ಮಾಡಬೇಕು ತಾನೆ, ಸಾಯಂಕಾಲ ಯಾಕೆ?
ನಮ್ಮ ಮಿಡ್ಲ್‌ಕ್ಲಾಸ್ ಜನ ಸಾಯಂಕಾಲ ಆದಮೇಲೆ 'ಹೈ' ಕ್ಲಾಸ್ ಆಗಿರ್ತಾರೆ ಅದಕ್ಕೆ.

-    ಮೇಡಮ್ ತುಸಾಡ್ಸ್ ಮ್ಯೂಸಿಯಂನಲ್ಲಿ ನಿಮ್ಮ ಮೇಣದ ಪ್ರತಿಮೆ ಸ್ಥಾಪಿಸ್ತಾರಂತೆ?
ಮೇಣ....ಮೇಡಮ್ ತುಸಾಡ್ಸ್... ಮ್ಯೂಸಿಯಂ...ಓಕೆ ಮೂರರಲ್ಲೂ 'ಮ'ಕಾರ ಇದೆ. ನನ್ ಕಡೆಯಿಂದ ನೋ ಅಬ್ಜೆಕ್ಷನ್ ಮೈ ಲಾರ್ಡ್...
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಈಗಂತೂ ಎಲ್ಲ ಮೊಬೈಲ್‌ಗಳಲ್ಲೂ ಕ್ಯಾಮೆರಾ ಇದ್ದೇ ಇರುತ್ತೆ. ಹಾಗಾಗಿ ಎಲ್ಲರೂ ಫೋಟೋಗ್ರಾಫರ್‌ಗಳೇ. ಆದರೂ ಫೋಟೋ ತೆಗೆಯುವುದು 'ಸ್ಮೈಲ್ ಪ್ಲೀಸ್‌' ಎಂದಷ್ಟು ಸುಲಭ ಅಲ್ಲ ಎಂಬುದು ನಾವು ತೆಗೆದ ನಮ್ಮ ಚಿತ್ರಗಳನ್ನು ನೋಡಿದಾಗ ಅನಿಸಬಹುದು. ಇದು ಪ್ರೊಫೆಷನಲ್ ಕ್ಯಾಮೆರಾ ಬಳಸುವವರಿಗೂ ಅನ್ವಯವಾಗುತ್ತದೆ. ಹಾಗಾಗಿ ಉತ್ತಮ ಚಿತ್ರಗಳನ್ನು ತೆಗೆಯುವುದು ಹೇಗೆ ಎಂಬ ಬಗ್ಗೆ ಆಸಕ್ತಿ ಇದ್ದವರಿಗೆ ಬೆಟರ್ ಫೋಟೋಗ್ರಾಫರ್ ಆಗಲು ಇಲ್ಲಿ ಒಂದಷ್ಟು ಟಿಪ್ಸ್‌ಗಳಿವೆ.
* bit.ly/SOt8r3 * bit.ly/1aMnIGM * bit.ly/129vlCL * bit.ly/1aMnJuD * bit.ly/46jST9

ಹರಿ-ಕಥೆ
ಖೇಮು ಒಮ್ಮೆ ತನ್ನ ಜಾಗ್ವಾರ್ ಕಾರಿನಲ್ಲಿ ಬೆಳಗ್ಗೆ, ಬೆಳಗ್ಗೆ ಹೈವೇನಲ್ಲಿ ಡ್ರೈವ್ ಹೊರಟ. ರಸ್ತೆಯ ಮಧ್ಯದಲ್ಲಿ ಒಂದು ದೊಡ್ಡ ಬ್ರಿಡ್ಜ್ ಎದುರಾಯಿತು. ಬ್ರಿಡ್ಜ್ ಅನ್ನು ಪ್ರವೇಶಿಸಿ ಅರ್ಧದಾರಿಗೆ ಹೋಗುವಷ್ಟರಲ್ಲಿ ಅಲ್ಲಿ ಹುಡುಗಿಯೊಬ್ಬಳು ಬ್ರಿಡ್ಜ್‌ನ ತುದಿಯಲ್ಲಿ ನಿಂತು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವಳಂತೆ ನಿಂತಿದ್ದಳು. ಅದನ್ನು ನೋಡಿ ಕಾರು ನಿಲ್ಲಿಸಿದ ಖೇಮು ಅವಳ ಬಳಿಗೆ ಧಾವಿಸಿದ. ಅವಳ ಬಳಿ ಹೋಗಿ 'ನೀನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀಯಾ?' ಎಂದು ಕೇಳಿದ. ಹುಡುಗಿ 'ಹೌದು' ಎಂದಳು. ಖೇಮುಗೆ ಅದೇನನ್ನಿಸಿತೋ ಏನೋ ಮೆಲ್ಲನೆ ಒಂದು ಮಾತು ಕೇಳಿದ 'ಹೆಂಗಿದ್ರೂ ಸೂಸೈಡ್ ಮಾಡಿಕೊಳ್ಳುತ್ತಿದ್ದೀಯ, ಸಾಯೋಕೆ ಮುಂಚೆ ನನಗೊಂದು ಕಿಸ್ ಕೊಟ್ಟು ಆಮೇಲೆ ಸೂಸೈಡ್ ಮಾಡ್ಕೊ'. ಅವಳು ಒಂದು ಕ್ಷಣ ಯೋಚಿಸಿ, ಹೌದಲ್ಲ ಎಂದುಕೊಂಡು, ಸರಿ ಅಂತ ಖೇಮುವನ್ನು ಬಿಗಿದಪ್ಪಿ ಹಿಡಿದು ಅವನ ತುಟಿಗಳನ್ನು ದೀರ್ಘವಾಗಿ ಚುಂಬಿಸಿ ಮತ್ತೆ ಸೂಸೈಡ್ ಮಾಡಿಕೊಳ್ಳಲು ಹೊರಟಳು. ಖೇಮು ಮತ್ತೆ ಕೇಳಿದ, 'ಒಂದ್ ನಿಮಿಷ, ಹೆಂಗಿದ್ರೂ ಸೂಸೈಡ್ ಮಾಡಿಕೊಳ್ಳುತ್ತಿದ್ದೀಯ, ಸಾಯೋಕೆ ಮುಂಚೆ ನಾನು ನಿನಗೊಂದು ಕಿಸ್ ಕೊಡ್ಲಾ?'. ಎರಡು ಕ್ಷಣ ಯೋಚಿಸಿ ಅವಳು ಮತ್ತೆ ಓಕೆ ಹೇಳಿದಳು. ಈ ಬಾರಿ ಖೇಮು ಆಕೆಯನ್ನು ಹಿಡಿದು ಒಂದು ದೀರ್ಘ ಚುಂಬನ ಕೊಟ್ಟ. ಅವಳು ಮತ್ತೆ ಸೂಸೈಡ್ ಪಾಯಿಂಟ್‌ನತ್ತ ಹೊರಟಳು. ಖೇಮುಗೆ ಮತ್ತೇನೋ ಕೇಳಬೇಕನ್ನಿಸಿತು. 'ಒಂದ್ ನಿಮಿಷ, ನೀನು ಯಾಕೆ ಸೂಸೈಡ್ ಮಾಡಿಕೊತಿದ್ದೀಯಾ?' ಎಂದ. ಅದಕ್ಕೆ ಅವಳು 'ಮನೆಯಲ್ಲಿ ಜಗಳ ಆಯ್ತು. ಅಪ್ಪ ಅಮ್ಮ ಬಯ್ದ್ರು, ಅದಕ್ಕೆ' ಎಂದಳು. 'ಬಯ್ದ್ರಾ? ಯಾಕೆ?' ಖೇಮು ಕೇಳಿದ. ಆ ಕಡೆಯಿಂದ ಉತ್ತರ ಬಂತು 'ಯಾಕಂದ್ರೆ ನಾನು ಹೀಗೆ ಹುಡುಗೀರ್ ಥರಾ ಡ್ರೆಸ್ ಮಾಡ್ಕೊಂಡ್ ಓಡಾಡೋದು ಅವರಿಗೆ ಇಷ್ಟ ಇಲ್ಲವಂತೆ'.

ಸ್ಯಾಂಡಲ್‌ವುಡ್
ಸಿನಿಮಾ ಪರದೆಯ ಮೇಲೆ ಬ್ಯಾಕ್ ತೋರಿಸಿದರೆ ಫ್ರಂಟ್ ಪೇಜ್ ಸುದ್ದಿ ಆಗಬಹುದು ಎಂದುಕೊಂಡು ಬಿಚ್ಚಿಬೀಳಿಸುವ ಹುಡುಗಿಯರ ಸಂತತಿ ಹೆಚ್ಚಾಗುತ್ತಿದೆ. ಸಿನಿಮಾಗಳಲ್ಲಿ ಹುಡುಗಿಯರನ್ನು ಶೋಷಿಸಲಾಗುತ್ತದೆ ಎಂಬ ಅಪವಾದಗಳ ನಡುವೆ ಕೆಲವು ಹುಡುಗಿಯರೇ ಶೋಷಕನಟಿಯರಾಗುತ್ತಿದ್ದಾರೆ. 'ಬ್ಲೂಮೂನ್‌' ಎಂಬ ಹೆಸರಿನ ಚಿತ್ರದ ಸ್ಟಿಲ್‌ಗಳನ್ನು ನೋಡಿದರೆ ಅದರಲ್ಲಿ ತುಸು ಡೀಸೆಂಟ್ ಎನಿಸುವ ಫೋಟೋ ಆಯ್ಕೆ ಮಾಡುವುದೇ ದೊಡ್ಡ ಚಾಲೆಂಜ್. 'ಗಾಲಿ' ಎಂಬ ಚಿತ್ರದ ಟ್ರೈಲರ್‌ಗಳಂತೂ ಅಧ್ವಾನ. ಅಭಿನಯ ಶಾರದೆಯರು ಹುಟ್ಟಿದ ನಾಡಲ್ಲಿ ಅಭಿನಯ ಬಾರದೆ ಅಶ್ಲೀಲ ಮಾತುಗಳನ್ನಾಡಿಯೇ ಸ್ಟಾರ್ ಆಗಿಬಿಡುತ್ತೇನೆ ಎಂಬ ತವಕ ಕೆಲವರದು. ಇದೆಲ್ಲದರ ನಡುವೆ ಈಗ 'ಮೈಸೂರು ಮಲ್ಲಿಗೆ' ಎಂಬ ಹೆಸರಿನ ಇನ್ನೊಂದು ಚಿತ್ರ ತಯಾರಾಗುತ್ತಿದೆ. ಪ್ರೇಮಿಗಳಿಬ್ಬರ ಅಶ್ಲೀಲ ಎಂಎಂಎಸ್ ಈ ಚಿತ್ರಕ್ಕೆ ಬಂಡವಾಳ. ಈ ಚಿತ್ರದಲ್ಲೂ 'ಗಾಲಿ'ಯಲ್ಲಿ ಅಭಿನಯಿಸಿದ ಹುಡುಗಿಯೇ ನಾಯಕಿ. ಹಾಗಾಗಿ, ಬಹುಶಃ ಅದೇ ಗಾಳಿ ಇಲ್ಲೂ ಬೀಸಿರಬಹುದು. ಆದರೆ ಮೈಸೂರು ಮಲ್ಲಿಗೆ ಹೆಸರಿನಲ್ಲಿ ಅಶ್ಲೀಲ ಸಿನಿಮಾ ಮಾಡುವುದನ್ನೂ ಯಾವ ಕನ್ನಡ ಪ್ರೇಮಿಯೂ ಸಹಿಸಲಾರ. ಆ ಹೆಸರಲ್ಲಿ ಈ ಹಿಂದೆ ಅಶ್ಲೀಲ ಸಿಡಿಯೊಂದು ಬಂದಿದ್ದರೂ ಅದು ಕಾನೂನು ಬಾಹಿರವಾಗಿತ್ತು. ಆದರೆ, ಈಗ ಇಂಥ ಅಶ್ಲೀಲ ಚಿತ್ರಕ್ಕೆ ಮೈಸೂರು ಮಲ್ಲಿಗೆಯಂಥ ಹೆಸರನ್ನು ಓಕೆ ಮಾಡಿದ್ದು ನಿಜಕ್ಕೂ ವಿಚಿತ್ರ. ನಿರ್ದೇಶಕ ನಾಗಾಭರಣ ಈಗಾಗಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ನಿಜ. ಆದರೆ, ಇದು ನಾಗಾಭರಣ ಅವರ ಹಳೆಯ ಚಿತ್ರದ ಶೀರ್ಷಿಕೆ ಎಂಬ ಕಾರಣಕ್ಕಲ್ಲದಿದ್ದರೂ ಪ್ರೀತಿಯ ಸಂಕೇತ ಎನಿಸಿರುವ ನರಸಿಂಹಸ್ವಾಮಿ ಅವರ ಮೈಸೂರು ಮಲ್ಲಿಗೆ ಎಂಬ ಹೆಸರಿಗೆ ಕಳಂಕ ಬರುವುದನ್ನು ತಪ್ಪಿಸಲಾದರೂ ಈ ಚಿತ್ರದ ಶೀರ್ಷಿಕೆ ಬದಲಾಗುವುದು ಒಳಿತು.

ಡಬ್ಕುಡಬಲ್ ತುದಾಂಡಲ್...
-ನಿಮ್ಮ ಕೂದಲಿನಲ್ಲಿ ಸಿಕ್ಕುಗಳಿದ್ದರೆ 'ಲಿವ್ ಆನ್‌' ಟ್ರೈ ಮಾಡಿ,
-ನಿಮ್ಮ ವೈವಾಹಿಕ ಸಂಬಂಧದಲ್ಲಿ ಸಿಕ್ಕುಗಳಿದ್ದರೆ 'ಲಿವ್ ಇನ್‌' ಟ್ರೈ ಮಾಡಿ.

- ಸೆಂಚುರಿ ಹೊಡೆದಾಗ ಎಲ್ಲರಿಗೂ ತೆಂಡೂಲ್ಕರ್‌ಗೆ ಸಿಕ್ಕಷ್ಟು ಬೆಲೆ ಸಿಗೊಲ್ಲ ಅನ್ನೋದಕ್ಕೆ ಉದಾಹರಣೆ
100 ಕಿಮೀ ಪಾದಯಾತ್ರೆ ಮಾಡಿದ್ರೂ ಅದು ಕೇವಲ 'ಕಾಲ್‌' ಸೆಂಚುರಿ. ಕಾಲ್‌ಸೆಂಟರ್‌ನಲ್ಲಿ ರಾತ್ರಿಯೆಲ್ಲಾ ಕೆಲಸ ಮಾಡಿ 100 ಕಾಲ್ ರಿಸೀವ್ ಮಾಡಿ ಮಾತಾಡಿದರೂ ಅದು 'ಕಾಲ್‌' ಸೆಂಚುರಿ.
- ಸಿನಿಮಾ ಬಿಡುಗಡೆಯ ದಿನ ಮಾರ್ನಿಂಗ್ ಶೋ ಮುಗಿದ ಮೇಲೆ ಪಟಾಕಿ ಹೊಡೆದಿದ್ದು ನೋಡಿದ ಜಗ್ಗೇಶ್ ಅಭಿಮಾನಿ ಹೇಳಿದ್ದು
ಸಿನಿಮಾ ಮೊದಲ ದಿನಾನೇ ಥಿಯೇಟರ್ ಮುಂದೆ ಹೊಗೆ ಹಾಕಿಸ್ಕೊಂತು.
- ಯಾವುದಾದ್ರೂ ಮೊಬೈಲ್ ಕಂಪನಿ 'ಸಿಂಗಂ 2' ಸಿನಿಮಾ ನಿರ್ಮಾಣ ಮಾಡಿದ್ದಿದ್ರೆ ಅದರ ಹೆಸರು ಏನಿರ್ತಿತ್ತು?
ಡ್ಯುಯಲ್ ಸಿಂಗಂ
- ಸೂರ್ಯನ ಬದಲು ಅದಕ್ಕೆ ಕಮಲ್‌ಹಾಸನ್ ಹೀರೋ ಆಗಿದಿದ್ರೆ?
ಸಾಗರ ಸಿಂಗಂ
- ಓಬಿರಾಯನ ಕಾಲದ ಕಂಪ್ಯೂಟರ್ ಮೌಸ್
'ಮೌಸೀ'


   -ಹರಿ
harikannadaprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!