ಕಚಗುಳಿ ಟ್ವೀಟ್ಸ್
ಬಾಟ್ಲಾಹೌಸ್ ಎನ್ಕೌಂಟರ್ ಏನಾದರೂ ಬಿಜೆಪಿ ಆಡಳಿತದ ರಾಜ್ಯದಲ್ಲಾಗಿದ್ದರೆ ಪ್ರಾರಂಭದಿಂದಲೇ ಮುಖ್ಯಮಂತ್ರಿಯನ್ನು ಹೊಣೆಗಾರನನ್ನಾಗಿಸಿ ಚರ್ಚೆಗೆ ಎಳೆಯಲಾಗುತ್ತಿತ್ತು.
-ಪಿಯೂಶ್ ಕುಲಶ್ರೇಷ್ಠ
ದೆಹಲಿಯಲ್ಲಿ ಐದು ರುಪಾಯಿಗೆ ಊಟ ಸಿಗುತ್ತೆ ಅಂತ ಒಬ್ಬ ರಾಜಕಾರಣಿ ಹೇಳಿದರೆ, ಇನ್ನೊಬ್ಬರು ಮುಂಬೈನಲ್ಲಿ 12 ರುಪಾಯಿಗೆ ಊಟ ಸಿಗುತ್ತೆ ಅಂದಿದ್ದಾರೆ. ಅಂದರೆ ದೆಹಲಿಯಿಂದ ಐದು ರುಪಾಯಿ ಊಟದ ಪ್ಯಾಕುಗಳನ್ನು ಬೃಹತ್ ಪ್ರಮಾಣದಲ್ಲಿ ರೈಲಿನಲ್ಲಿ ತಂದು, ಮುಂಬೈನಲ್ಲಿ ಮಾರಿದರೆ ನೀವು ಭಾರಿ ಲಾಭ ಗಳಿಸಬಹುದಾಗಿದೆ.
-ಚೇತನ್ ಭಗತ್
ನನಗೆ ಗುಜಾರಾತಿ ರೆಸ್ಟೊರೆಂಟ್ ಒಂದರ ಊಟ ಇಷ್ಟವಾಗಲಿಲ್ಲ. ಹೀಗಾಗಿ ಮೋದಿಗೆ ವೀಸಾ ಕೊಡಬಾರದು ಎಂದು ಬರಾಕ್ ಒಬಾಮಾ ಅವರಿಗೆ ಪತ್ರ ಬರೆಯಲಿದ್ದೇನೆ.
-ಬಾಬು ಭಯ್ಯಾ