ಅಂಕಣಗಳು

Hmmm...ಪಾಂಚ್- ಸುನಿ, ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ ಚಿತ್ರದ ನಿರ್ದೇಶಕ

  ಬಲ್ಲ ಮೂಲಗಳಿಂದ ನಿಮ್ ಸಿನಿಮಾ ಹಿಟ್ ಆಯ್ತು ಅಂತ ಗೊತ್ತಾಯ್ತು, ಆರು ತಿಂಗಳು ಶೂಟಿಂಗ್ ಮಾಡಿ ಈಗ ಬಂತಲ್ಲಾ ರಿಸಲ್ಟು, ಏನಂತಾರೆ ಜನ?
'ಕ್ಲೈಮ್ಯಾಕ್ಸ್ ಟೈಮಲ್ಲಿ ಇಂಟರ್‌ವಲ್ ಬಿಟ್ಟಂಗಾಯ್ತು, ಯಾಕೋ ಸಮಾಧಾನ ಆಗ್ತಿಲ್ಲ, ನೋಡ್ತಾ ಇದ್ರೆ ಇನ್ನೊಂದ್ಸಲ ಲವ್ ಆಗ್ತಿದೆ, 'ಸಬ್ಜೆಕ್ಟ್‌' ತುಂಬಾ ಇಂಟರೆಸ್ಟಿಂಗ್ ಆಗಿದೆ, ಇನ್ನೊಂದೆರಡ್ ಸಲ್ ನೋಡೋಣ' ಅಂತಿದಾರೆ! ಸರಿ ನಾನು ಹೊರಡ್ಲಾ?

    ನಾನು ಒಂದೇ ಪ್ರಶ್ನೆ ಕೇಳ್ತೀನಿ ಅಂದಿಲ್ಲ, ಐದು ಕೇಳ್ತೀನಿ. ಈಗಿನ ಜನರೇಶನ್‌ಗೆ 'ಟೈಲರ್ ಮೇಡ್‌' ಅನಿಸೋ  ಸಿನಿಮಾ ಮಾಡಿದ್ರಲ್ಲ, ಗೆಲ್ತೀನಿ ಅಂತ ಮೊದಲೇ ಗ್ಯಾರಂಟಿ ಇತ್ತಾ?
'ಟೈಲರ್ ಮೇಡ್‌' ಜೊತೆಗೆ ನಂದು 'ಟ್ರೈಲರ್ ಮೇಡ್‌' ಸಿನಿಮಾ. 'ಟ್ರೈಲರ್ ನೋಡೋಕ್ ಇಂಟರ್‌ನೆಟ್‌ಗೆ  ಹೋದೋರು, ಸಿನಿಮಾ ನೋಡೋಕೆ ಥಿಯೇಟರ್‌ಗೆ ಬರಲ್ವಾ?' ಹಂಗಾಗಿ 'ಪ್ರಾಬ್ಲಂಸೇ ಇಲ್ಲ'.

    ರಷ್ ಜಾಸ್ತಿ ಆಗಿ, 'ಕೂತ್ಕೊಂಡ್ ಟಿಕೆಟ್ ಕೊಡೋ ನಿಂಗೇ ಇಷ್ಟು ಕೊಬ್ಬಿರ್‌ಬೇಕಾದ್ರೆ, ನಿಂತ್ಕೊಂಡ್ ಟಿಕೇಟ್ ತಗೊಳ್ಳೋ ನಮಗೆಷ್ಟಿರ್‌ಬ್ಯಾಡ?' ಅಂತ ಥಿಯೇಟರ್ ಹೊರಗೆ ಜನ ಜಗಳ ಆಡ್ತಿದಾರಂತೆ?
ಹೊರಗಷ್ಟೇ ಅಲ್ಲ, ಒಳಗೂ ಕೂಡ, 'ಕೂತ್ಕೊಂಡ್ ನೋಡೋ ನಿಮಗೇ ಇಷ್ಟಿರ್‌ಬೇಕಾದ್ರೆ, ಕುಣಿದಾಡ್ಕೊಂಡ್ ನೋಡೋ ನಮಗೆಷ್ಟಿರ್‌ಬ್ಯಾಡಾ?' ಅಂತ ಬಾಲ್ಕನಿಗೂ, ಗಾಂಧಿಕ್ಲಾಸ್‌ಗೂ ಜಗಳ.
    ಆತುರದಲ್ಲಿ ಸಿನಿಮಾ ಮಾಡುವಾಗ ಎಲ್ಲರೂ ಹೆಲ್ಪ್ ಮಾಡ್ತಾರೆ, ಬಿಡುಗಡೆ ಟೈಮಲ್ಲಿ ಯಾರೂ ಬರಲ್ಲ, ನಿಮ್ ಸಿನಿಮಾ ನಾವೇ ರಿಲೀಸ್ ಮಾಡ್‌ಬೇಕು. ಸೋ, ನಿಮ್ಮ ರಿಲೀಸ್ ಟೈಮ್ ಅನುಭವ?
ಸ್ವಲ್ಪ ಟೆನ್‌ಶನ್ ಇತ್ತು. ಆದ್ರೆ, ಅವತ್ತು ಶುಕ್ರವಾರ, ಹತ್ತರಿಂದ ಹತ್ತೂವರೆ ಮಾರ್ನಿಂಗ್ ಶೋ ಸಮಯ, ಸರ್ಯಾಗ್ ಗೆದ್ದೆ. ಯಾಕೋ ಅವತ್ತು ಬರೀ ಕ್ಲಾಪ್ ಬೀಳೋ ಸೌಂಡೇ ಕೇಳ್ತಿತ್ತು. ಮೋಸ್ಟ್‌ಲೀ ಸೂಪರ್ ಹಿಟ್ ಆಗೋ ಮುನ್ಸೂಚನೆ.

    ಅಂತೂ, ಯೋಗರಾಜ್ ಭಟ್, ಗುರುಪ್ರಸಾದ್ ಥರಾ ಡೈಲಾಗ್ ಓರಿಯೆಂಟೆಡ್ ಡೈರೆಕ್ಟರ್‌ಗಳ ಲಿಸ್ಟ್‌ಗೆ ನೀವೂ  ಸೇರ್ಕೊಂಡ್‌ಬಿಟ್ರಾ?
ಅವ್ರಿಗೆಲ್ಲ ನನ್ನನ್ನ ಹೋಲಿಸ್ತಿರಲ್ರೀ, 'ಸ್ವರ್ಗ ಒಂದ್ ಸೆಕೆಂಡ್ ರಪ್ಪಂತ ಪಾಸಾದಂಗಾಯ್ತು'.
(ಕಾಲ್ಪನಿಕ ಸಂದರ್ಶನ)

ಒಮ್ಮೆ ಭೇಟಿ ಕೊಡಿ
ಸವಿ ನೆನಪುಗಳು ಸಾಕು ಸವೆಯಲೀ ಬದುಕು ಎನ್ನುವುದೇನೋ ನಿಜ ಆದರೆ, ವಾಟ್ ಎಬೌಟ್ ಕಹಿ ನೆನಪುಗಳು?. ಎಲ್ಲರ ಲೈಫಲ್ಲೂ ಮರೆಯಬೇಕೆನಿಸುವ ವಿಷಯಗಳು ಇದ್ದದ್ದೇ. ಆದರೆ ನಿಮ್ಮ ನೆನಪಿನ ಶಕ್ತಿಯನ್ನು ಇಂಪ್ರೂವ್ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸುಲಭವಾಗಿ ಟಿಪ್ಸ್ ಸಿಗುತ್ತವೆಯೇ ಹೊರತು, ಮರೆವಿನ ಶಕ್ತಿ ಬೆಳೆಸಿಕೊಳ್ಳುವುದು ಹೇಗೆ ಎಂದು ಹೇಳಿಕೊಡುವವರು ಕಡಿಮೆ. ಕಹಿ ನೆನಪುಗಳನ್ನು ಪೇಪರ್ ಮೇಲೆ ಬರೆದು ಸುಟ್ಟುಹಾಕಿ ಎಂಬುದು ಅಂಥ ಒಂದು ಸಲಹೆ. ಆದರೆ, 'ಮರೆತೇನೆಂದರ ಮರೆಯಲಿ ಹ್ಯಾಂಗ' ಎನ್ನುವವರಿಗೆ 'ಬರೆದೇನೆಂದರ, ಬರೆಯಲಿ ಹ್ಯಾಂಗ' ಎನ್ನುವ ಸಮಸ್ಯೆ ಇದ್ದದ್ದೆ. ಮರೆಯಲು ಬೇಕಾದ ಒಂದಿಷ್ಟು ಸಲಹೆಗಳಿಗಾಗಿ ಇಲ್ಲಿ ನೋಡಿ.
 bit.ly/RXqT2r n bit.ly/jEXImC n bit.ly/avDTTS n bit.ly/kFivf n bit.ly/lf7pLL

ಹರಿ-ಕಥೆ
ಬಹಳ ವರ್ಷಗಳ ನಂತರ 30 ವರ್ಷದ ಹಳೆಯ ಕಾಲೇಜು ಗೆಳೆಯರು ಮೀಟ್ ಮಾಡಲು ನಿರ್ಧರಿಸಿದರು. ಎಲ್ಲಿ ಮೀಟ್ ಮಾಡೋಣ ಅಂತ ಯೋಚನೆ ಮಾಡಿ ಕೊನೆಗೆ 'ಎಂ.ಜಿ.ರೋಡ್‌ನ ಫ್ಲ್ಯಾಷ್‌ಬ್ಯಾಕ್ ಬಾರ್‌'ನಲ್ಲಿ ಅಂತ ಡಿಸೈಡ್ ಮಾಡಿದ್ರು. ಕಾರಣ, 'ಅದರ ಪಕ್ಕದಲ್ಲೇ ಲೇಡೀಸ್ ಕಾಲೇಜ್ ಇದೆ, ಅಲ್ಲಿಗೆ ಒಳ್ಳೊಳ್ಳೆ ಹುಡುಗೀರು ಬರ್ತಾರೆ' ಅಂತ. ಸರಿ ಮೀಟ್ ಮಾಡಿ, ಖುಷಿ ಪಟ್ಟು ಮನೆಗೆ ಹೋದ್ರು. ಅದಾದ 5 ವರ್ಷದ ನಂತರ ಅವರಿಗೆಲ್ಲ ಮತ್ತೆ ಸೇರಬೇಕು ಎನಿಸಿತು. ಎಲ್ಲಿ ಅಂದಾದಾಗ, 'ಎಂ.ಜಿ.ರೋಡ್‌ನ ಫ್ಲ್ಯಾಷ್‌ಬ್ಯಾಕ್ ಬಾರ್‌' ಅಂದ್ರು ಎಲ್ಲರೂ. ಕಾರಣ 'ಎಲ್ರಿಗೂ ಹೊಟ್ಟೆ ಬರ್ತಾ ಇದೆ, ಫ್ಲ್ಯಾಷ್‌ಬ್ಯಾಕ್ ಬಾರ್‌ನಲ್ಲಿ ಹೆಲ್ತೀ ಡಯಟ್ ಡ್ರಿಂಕ್ಸ್, ಫುಡ್ ಸಿಗುತ್ತೆ' ಅಂತ. ಸರಿ ಅವತ್ತೂ ಮೀಟಿಂಗ್ ಮುಗೀತು. ಈ ಮಧ್ಯೆ ಒಂದಷ್ಟು ಗ್ಯಾಪ್ ಆಯ್ತು. ಎಲ್ಲರಿಗೂ 45 ವರ್ಷ ವಯಸ್ಸಾದಾಗ ಮತ್ತೆ ಸಿಗೋಣ ಅಂತ ಡಿಸೈಡ್ ಮಾಡಿದರು, ಅಲ್ಲೇ 'ಎಂ.ಜಿ ರೋಡ್‌ನ ಫ್ಲ್ಯಾಷ್‌ಬ್ಯಾಕ್ ಬಾರ್‌'ನಲ್ಲಿ. ಕಾರಣ, ಎಲ್ಲರ ಜೇಬಲ್ಲೂ ಕಡಿಮೆ ದುಡ್ಡಿತ್ತು. ಅಲ್ಲಿ 'ಹ್ಯಾಪಿ  ಅವರ್ಸ್‌' ಆಫರ್ ಇದೆ ಅಂತ. ಸರಿ ಎಲ್ಲರೂ ಸಿಕ್ಕು ಮನೆಗೆ ಹೋದರು. ಮುಂದೆ 55 ವರ್ಷ ಆದಾಗ ಗೆಳೆಯರು ಮತ್ತೆ ಸಿಕ್ರು. ಅದೇ 'ಎಂ.ಜಿ.ರೋಡ್‌ನ ಫ್ಲ್ಯಾಷ್‌ಬ್ಯಾಕ್ ಬಾರ್‌'ನಲ್ಲಿ. ಕಾರಣ 'ಮೊಮ್ಮಕ್ಕಳನ್ನ ವಾಕಿಂಗ್‌ನ ನೆಪದಲ್ಲಿ ಕರೆದುಕೊಂಡು ಬಂದು ಪಕ್ಕದ ಪ್ಲೇ ಏರಿಯಾದಲ್ಲಿ ಬಿಟ್ಟು ನಾವು ಗುಂಡು ಹಾಕಬಹುದು' ಅಂತ. ಅದರಂತೇ ಮಾಡಿದರು. ಕೊನೆಗೆ, ಎಲ್ಲರಿಗೂ 60ರ 'ಅರಳು ಮರಳು' ವಯಸ್ಸಾಯ್ತು. ಆಗಲೂ ಸಿಗೋಣ ಎಂದುಕೊಂಡವರು, 'ಎಂಜಿ.ರೋಡ್‌ನ ಫ್ಲ್ಯಾಷ್‌ಬ್ಯಾಕ್ ಬಾರ್‌'ನೇ ಸೆಲೆಕ್ಟ್ ಮಾಡ್ಕೊಂಡ್ರು. ಕಾರಣ, 'ಯಾವುದೋ ಹೊಸ ಬಾರ್ ಇದ್ದಂಗಿದೆ. ನಾವ್ಯಾವತ್ತೂ ಅಲ್ಲಿಗೆ ಹೋಗೇ ಇಲ್ಲ. ಒಂದ್ಸಲ ನೋಡೋಣ ಹೆಂಗಿರುತ್ತೆ' ಅಂತ.

ಸ್ಯಾಂಡಲ್‌ವುಡ್
ಮೊನ್ನೆ ನವರಸನಾಯಕ ಜಗ್ಗೇಶ್‌ರ 50ನೇ ಹುಟ್ಟುಹಬ್ಬದಂದು ಅವರ ಇಡೀ ಫ್ಯಾಮಿಲಿ ಮಾತಿಗೆ ಕೂತಿತ್ತು. ಜಗ್ಗೇಶ್‌ರ ಹಿರಿಯ ಮಗ ಗುರುರಾಜ್ ನಾನು ಸಣ್ಣವನಿದ್ದಾಗ ಸಣ್ಣ ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಅಪ್ಪ ಆಗಷ್ಟೆ ಚಿತ್ರರಂಗದಲ್ಲಿ ಬೆಳೆಯುತ್ತಿದ್ದರು. ಮನೆಯಲ್ಲಿ ಕಷ್ಟ ಇತ್ತು. ಆದರೂ ನನಗೆ ಡಬ್ಬಗಟ್ಟಲೆ ಸೆರಿಲ್ಯಾಕ್ ತಂದುಕೊಡುತ್ತಿದ್ದರು, ಅಪ್ಪನ ಜೊತೆ ಸಾಕಷ್ಟು ಜಾಲಿ ಮೊಮೆಂಟ್ಸ್‌ಗಳನ್ನು ಕಳೆದೆ ಎಂದು ತನ್ನ ಬಾಲ್ಯವನ್ನು ನೆನಪಿಸಿಕೊಂಡರು. ಅಣ್ಣ ಗುರು ಸೆರಿಲ್ಯಾಕ್ ಬಗ್ಗೆ ಮಾತನಾಡಿದರೆ ಕಿರಿಯ ಮಗ ಯತಿರಾಜ್ ನಾನು ಹುಟ್ಟಿದಾಗ ಅಪ್ಪ ದೊಡ್ಡ ಮಟ್ಟಕ್ಕೆ ಬೆಳೆದಿದ್ದರು, ಸೆರಿಲ್ಯಾಕ್‌ಗೆ ಕೊರತೆ ಇರಲಿಲ್ಲ. ಆದರೆ ಅಪ್ಪ ನನ್ನ ಜೊತೆ ಸಮಯ  ಕಳೆದಿದ್ದು ಕಡಿಮೆ ಎನ್ನುತ್ತಾ ಲ್ಯಾಕ್ ಆಪ್ ಅಟೆನ್ಶನ್ ಬಗ್ಗೆ ಮಾತನಾಡಿದ್ದು ವಿಶೇಷ. ಅದನ್ನು ಕೇಳಿದವರಿಗೆ, ಎಷ್ಟೇ ದೊಡ್ಡವರ ಮಕ್ಕಳಾದರೂ ದೊಡ್ಡ ಮಗ ಗುರುವಿನ ಅನುಭವಕ್ಕೂ, ಚಿಕ್ಕ ಮಗ ಯತಿ ಅನುಭವಕ್ಕೂ ಎಷ್ಟೊಂದು ವ್ಯತ್ಯಾಸವಿದೆ, ಕೊನೆಗೂ ಪಾಲಿಗೆ ಸಿಕ್ಕಿದ್ದು ಪಂಚಾಮೃತ ಎಂದುಕೊಂಡು, 'ಲೈಫ್ ಸೂಪರ್ ಗುರೂ' ಎಂಬ ಪಾಲಿಸಿ ಪಾಲಿಸುವುದೊಂದೇ ಎಲ್ಲರ ಜೀವನದಲ್ಲೂ ಕಾಮನ್ ಎಲಿಮೆಂಟ್ ಎನಿಸಿದ್ದು ಮಾತ್ರ ಹೌದು.

ಡಬ್ಕುಡಬಲ್ ತುದಾಂಡಲ್...
    ಸಿಂಪಲ್ಲಾಗೊಂದ್ ಲವ್‌ಸ್ಟೋರಿ ಚಿತ್ರದ ಯಶಸ್ಸಿನ ಬಗ್ಗೆ
ನಿರ್ದೇಶಕ ಸುನಿ ಪ್ರತಿಕ್ರಿಯೆ
- ಒಟ್ಲಲ್ಲಿ ಪ್ರೇಕ್ಷಕರು ನನ್ 'ಕೈ ಬಿಡಲಿಲ್ಲ'.
- ತಿರ್ಗಾ ತಿರ್ಗಾ ನೋಡುವಂಥ ಸ್ಟಾರುಗಳೇನಿರಲಿಲ್ಲ, ಕಾಸ್ಟ್ಲೀ ಸೆಟ್ ಇಲ್ಲಿಲ್ಲ, ಫಾರಿನ್ ಶೂಟಿಂಗ್ ಇದರಲ್ಲಿಲ್ಲ,
ಆದ್ರೂ ಗೆದ್ದೆ.

    ಪ್ರೇಕ್ಷಕರ ಪ್ರತಿಕ್ರಿಯೆ
- ಎಲ್ಲಾ ಸಿನಿಮಾಗಳೂ ಟ್ರೈಲರ್‌ನಲ್ಲಿ ಇಷ್ಟ ಆಗ್ತವೆ. ಕೆಲವು ಮಾತ್ರ ಥಿಯೇಟರ್ರಲ್ಲೂ ಇಷ್ಟ ಆಗ್ತವೆ. ಇದು
ಥಿಯೇಟ್ರಿಂದ ಹೊರಗ್ ಬಂದ್ ಮೇಲೂ ಇಷ್ಟ ಆಗ್ತಾನೇ ಇರುತ್ತೆ. 
- (ಜಾಸ್ತಿ ಮಾತೇ ಆಡದ ನಿರ್ದೇಶಕ ಸುನಿ ಬಗ್ಗೆ)- ಗಳಿಗೆ ಸಿದ್ದ ಒಳಗೊಳಗೇ ಗೆದ್ದ.

    ಯಾರ್ಯಾರು ಎಫ್ ಎಮ್ ರೇಡಿಯೋ ಜಾಕಿ ಆದ್ರೆ ಸ್ಲೋಗನ್‌ಗಳು ಹೆಂಗಿರ್ತವೆ?್ರೆ

    ವಿಜಯ್ ಮಲ್ಯ, ಆಲ್ಕೊಹಾಲ್ ಬ್ರ್ಯಾಂಡ್
ಕಿಂಗ್‌ಫಿಷರ್ ಎಫ್ ಎಮ್ 90 - ಲೈಫ್ ಪಾಪರ್ ಗುರೂ

    ನಂದಿನಿ ಹಾಲಿನ ಬ್ರ್ಯಾಂಡ್‌ನ ಪುನೀತ್ ರಾಜ್‌ಕುಮಾರ್
ಕೆಎಮ್‌ಎಫ್ ಎಫ್ ಎಮ್(ಹೇಳೋಕೆ ಸ್ವಲ್ಪ ಕಷ್ಟ ಆಗಬಹುದು) 92.9- ಮಿಲ್ಕ್, ಸಖತ್ ಹಾಟ್ ಮಗಾ

    ಸಚಿನ್ ತೆಂಡೂಲ್ಕರ್
ಓ ಮೈ ಗಾಡ್ ಎಫ್ ಎಮ್ 100 (ಪಾಯಿಂಟ್ ಎಲ್ಲ ಇಲ್ಲಾ, ಬರೀ 100 ಅಷ್ಟೇ) - ದೇವರನ್ನ ನೋಡೋಕಾಗಲ್ಲ, ಆದ್ರೆ ಕೇಳ್‌ಬಹುದು.

    ಪಿ. ಚಿದಂಬರಂ
'ಎಫ್‌ಎಮ್‌' ಎಫ್‌ಎಮ್ 98.5 - ಎಫ್‌ಎಮ್ ಅಂದ್ರೆ ಫೈನಾನ್ಸ್ ಮಿನಿಸ್ಟರ್

    ಮನಮೋಹನ್ ಸಿಂಗ್
ಇದು ಜಾಸ್ತಿ ಆಗ್ಲಿಲ್ವಾ. ಪಾಪ, ಅವರು ಮಾತಾಡೋದೆ ಇಲ್ಲ, ಇನ್ನು ರೇಡಿಯೋ ಜಾಕಿ ಆಗ್ತಾರಾ?

-   ಹರಿ
harikannadaprabha@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ